ETV Bharat / state

ಡಿಸಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ಹಿಂದಿನ ಕಾರಣ ಬಯಲಿಗೆಳೆಯಬೇಕಾಗಿದೆ: ಎಂ.ಬಿ.ಸದಾಶಿವ - ಜೆಡಿಎಸ್ ರಾಜ್ಯ ಉಪಾಧ್ಯಕ್ಷ

ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನಸ್ನೇಹಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರ ಹಠಾತ್‌ ರಾಜೀನಾಮೆ‌ ಹಿಂದಿನ ಕಾರಣವನ್ನು ಬಯಲಿಗೆಳೆಯಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು‌.

ಎಂ.ಬಿ.ಸದಾಶಿವ
author img

By

Published : Sep 7, 2019, 10:01 PM IST

ಮಂಗಳೂರು: ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನಸ್ನೇಹಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರ ಹಠಾತ್‌ ರಾಜೀನಾಮೆ‌ ಎಲ್ಲರಿಗೂ ಆಘಾತ ಉಂಟುಮಾಡಿದೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಯಾವ ಒತ್ತಡ ಇದೆ ಎಂಬುವುದನ್ನು ನಾವು ತಿಳಿದುಕೊಂಡು ಅದನ್ನು ಬಯಲಿಗೆಳೆಯಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು‌.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಯಾಗಿ ಸೇವೆ ಸಲ್ಲಿಸುವವರು ಈ ರೀತಿಯಲ್ಲಿ ರಾಜೀನಾಮೆ ನೀಡಿದ್ದಾರೆಂದರೆ ಬಹುಶಃ ಅವರ ಪರಿಸರದಲ್ಲಿ ಒತ್ತಡ ಬಂದಿದೆ. ಅದನ್ನು ಅವರು ತಮ್ಮ ಒಳ್ಳೆಯತನದಿಂದ ಹೇಳಲಿಚ್ಛಿಸಿಲ್ಲ. ಆದರೆ ಅದನ್ನು ತಿಳಿಯಬೇಕಾದ ಅಗತ್ಯವಿದೆ ಎಂದು ಹೇಳಿದರು. ಕೇರಳದ ಗೋಪಿನಾಥ್ ಕಣ್ಣನ್, ನಮ್ಮ ಪಕ್ಕದ ಅಣ್ಣಾಮಲೈ ರಾಜೀನಾಮೆ ನೀಡಿದಾಗ ಏನೋ ವೈಯುಕ್ತಿಕ ಕಾರಣ ಎಂದು ಸುಮ್ಮನಾದೆವು. ಆದರೆ ನಮ್ಮ ಊರಿನಲ್ಲೇ ಸೇವೆ ಮಾಡಿದ, ಉತ್ತಮ ವ್ಯಕ್ತಿತ್ವದ ಜಿಲ್ಲಾಧಿಕಾರಿಯೋರ್ವರು ರಾಜೀನಾಮೆ ನೀಡಿರುವುದು ಎಲ್ಲೋ ಏನೋ ತಪ್ಪಿದೆ ಎಂದೆನಿಸುತ್ತದೆ ಎಂದರು.

ಮುಂದೆ ಇಂತಹ ಅಧಿಕಾರಿಗಳಿಗೆ ಆತ್ಮವಿಶ್ವಾಸ ತುಂಬಿ ಆಡಳಿತ ಯಂತ್ರವನ್ನು ಬಲಿಷ್ಠಗೊಳಿಸಬೇಕಾಗಿದೆ. ಆ ದೃಷ್ಟಿಯಿಂದ ಸಸಿಕಾಂತ್ ಸೆಂಥಿಲ್ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದುಕೊಂಡು, ಮತ್ತೆ ಅವರ ಸೇವೆ ರಾಷ್ಟ್ರಕ್ಕೆ ದೊರುಕುವಂತೆ ಮಾಡಬೇಕೆಂದು ಜನತಾದಳ ಒತ್ತಾಯ ಮಾಡುತ್ತದೆ ಎಂದು ಎಂ.ಬಿ.ಸದಾಶಿವ ಹೇಳಿದರು.

Intro:ಮಂಗಳೂರು: ಕಳೆದ ಎರಡು ವರ್ಷಗಳಿಂದ ದ.ಕ.ಜಿಲ್ಲೆಯ ಜನಸ್ನೇಹಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರ ಹಠಾತ್‌ ರಾಜಿನಾಮೆ‌ ಎಲ್ಲರಿಗೂ ಆಘಾತವನ್ನು ಉಂಟುಮಾಡಿದೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಯಾವ ಒತ್ತಡ ಇದೆ ಎಂಬುವುದನ್ನು ನಾವು ತಿಳಿದುಕೊಂಡು ಅದನ್ನು ಬಯಲಿಗೆಳೆಯಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು‌.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮಂಗಳೂರಿನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುವವರು ಈ ರೀತಿಯಲ್ಲಿ ರಾಜಿನಾಮೆ ನೀಡಿದ್ದಾರೆಂದರೆ ಬಹುಶಃ ಅವರ ಪರಿಸರದಲ್ಲಿ ಒತ್ತಡ ಬಂದಿದೆ. ಅದನ್ನು ಅವರು ತಮ್ಮ ಒಳ್ಳೆಯತನದಿಂದ ಹೇಳಲಿಚ್ಚಿಸಿದ್ದಿಲ್ಲ. ಆದರೆ ಅದನ್ನು ತಿಳಿಯಬೇಕಾದ ಅಗತ್ಯವಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಸ್ತಂಭಗಳು, ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಿದ್ದಾರೆ. ಓರ್ವ ಐಎಎಸ್ ಅಧಿಕಾರಿಗೆ ರಾಷ್ಟ್ರೀಯತೆ, ರಾಷ್ಟ್ರದ ವಿಪತ್ತು ನಿರ್ವಹಣೆ, ಆರ್ಥಿಕ ನಿರ್ವಹಣೆ, ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ನಿರ್ವಹಣೆ, ನಾಯಕತ್ವದ ನಿರ್ವಣೆ ಈ ಎಲ್ಲದರ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಈ ಎಲ್ಲದರ ಬಗ್ಗೆ ತರಬೇತಿ ಪಡೆದವರೇ ರಾಜಿನಾಮೆ ನೀಡುತ್ತಿರುವುದು ದಿಗ್ಭ್ರಮೆ ಮೂಡಿಸುತ್ತದೆ. ಈ ದೇಶದ ಆಡಳಿತ ವ್ಯವಸ್ಥೆಗೆ ಕಪ್ಪುಚುಕ್ಕಿ ಎಂದರೆ ತಪ್ಪಿಲ್ಲ ಎಂದು ಎಂ.ಬಿ.ಸದಾಶಿವ ಹೇಳಿದರು.

Body:ಕೇರಳದ ಗೋಪಿನಾಥ್ ಕಣ್ಣನ್, ನಮ್ಮ ಪಕ್ಕದ ಅಣ್ಣಾಮಲೈ ರಾಜಿನಾಮೆ ನೀಡಿದಾಗ ಏನೋ ವೈಯುಕ್ತಿಕ ಕಾರಣ ಎಂದು ಸುಮ್ಮನಾದೆವು. ಆದರೆ ನಮ್ಮ ಊರಿನಲ್ಲೇ ಸೇವೆ ಮಾಡಿದ, ಅಸ್ಕಲಿತ ವ್ಯಕ್ತಿತ್ವದ ಜಿಲ್ಲಾಧಿಕಾರಿ ಯೋರ್ವರು ರಾಜಿನಾಮೆ ನೀಡಿರುವುದು ಎಲ್ಲೋ ಏನೋ ತಪ್ಪಿದೆ ಎಂದೆನಿಸುತ್ತದೆ. ಮುಂದೆ ಇಂತಹ ಅಧಿಕಾರಿಗಳಿಗೆ ಆತ್ಮವಿಶ್ವಾಸ ತುಂಬಿ ಆಡಳಿತ ಯಂತ್ರವನ್ನು ಬಲಿಷ್ಠಗೊಳಿಸಬೇಕಾಗಿದೆ. ಆ ದೃಷ್ಟಿಯಿಂದ ಸಸಿಕಾಂತ್ ಸೆಂಥಿಲ್ ಅವರು ಯಾವ ಕಾರಣಕ್ಕೆ ರಾಜಿನಾಮೆ ನೀಡಿದರು ಎಂದು ತಿಳಿದುಕೊಂಡು, ಅವರು ರಾಜಿನಾಮೆ ಹಿಂಪಡೆಯುವಂತೆ ಒತ್ತಾಯ ಮಾಡಬೇಕಾಗಿದೆ‌. ಮತ್ತೆ ಅವರು ಸೇವೆ ಮತ್ತೆ ರಾಷ್ಟ್ರಕ್ಕೆ ದೊರುಕುವಂತೆ ಮಾಡಬೇಕೆಂದು ಜನತಾದಳ ಒತ್ತಾಯ ಮಾಡುತ್ತದೆ ಎಂದು ಎಂ.ಬಿ.ಸದಾಶಿವ ಹೇಳಿದರು.

ಮಾಜಿ ಸಚಿವ ಅಮರನಾಥ ಶೆಟ್ಟಿ, ಜೆಡಿಎಸ್ ಸ್ಪೋಕ್ ಪರ್ಸನ್ ಸುಶೀಲ್ ನೊರೊನ್ಹಾ, ಮಹಿಳಾ ಘಟಕದ ಅಧ್ಯಕ್ಷ ಸುಮತಿ ಹೆಗ್ಡೆ, ರಮಿಝಾ ಬಾನು, ಪುಷ್ಪರಾಜ್ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.