ಕಡಬ: ಕಳೆದ ಸೋಮವಾರ ಶಾಲೆಗೆಂದು ಹೋಗಿ ನಾಪತ್ತೆಯಾಗಿದ್ದ ಕಡಬದ ಬಲ್ಯದ ಅತಿಥಿ ಶಿಕ್ಷಕಿ ಮದುವೆಯಾಗಿ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ.
ಶುಕ್ರವಾರ ಬೆಂಗಳೂರಿನ ಬಸವೇಶ್ವರ ನಗರದ ಕುರುಬರ ಹಳ್ಳಿಯ ಸತೀಶ ಎಂಬುವರ ಜೊತೆ ಶಿಕ್ಷಕಿ ಮಮತಾರನ್ನು ಕಡಬ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮನೆಗೆ ಬರಲು ಶಿಕ್ಷಕಿ ನಿರಾಕರಿಸಿದ್ದು, ಆಕೆಯ ತಮ್ಮನ ಸಮಕ್ಷಮದಲ್ಲಿ ಹೇಳಿಕೆ ಪಡೆದುಕೊಳ್ಳಲಾಗಿದೆ.
ಮೂರು ತಿಂಗಳ ಹಿಂದೆ ಕನ್ನಡ ಮ್ಯಾಟ್ರಿಮೋನಿ ಮೂಲಕ ಇಬ್ಬರ ಪರಿಚಯವಾಗಿ ಪ್ರೇಮಕ್ಕೆ ತಿರುಗಿ ಸೆ. 1ರಂದು ಇವರು ವಿವಾಹವಾಗಿರುವುದಾಗಿ ತಿಳಿದು ಬಂದಿದೆ.