ಮಂಗಳೂರು: ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದ ಕಚ್ಚಾ ಬಾಂಬ್ಗೆ ಕೋಳಿ ಮಾಂಸ ಇರಿಸಿದ್ದ ಪ್ರಕರಣವೊಂದು ಮೂಡುಬಿದಿರೆ ತಾಲೂಕಿನ ಬಡಗಮಿಜಾರು ಎಂಬಲ್ಲಿ ಪತ್ತೆಯಾಗಿದೆ.
ಕೋಳಿ ಮಾಂಸ ತಿನ್ನಲು ಆಗಮಿಸುವ ಪ್ರಾಣಿಯು ಕಚ್ಚಾ ಬಾಂಬ್ ಒಡೆದು ಸಾಯುತ್ತದೆ. ಬಳಿಕ ಪ್ರಾಣಿಯನ್ನು ಮಾಂಸ ಮಾಡಲು ಬಳಸಲಾಗುತ್ತದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮೂಡುಬಿದಿರೆ ಪೊಲೀಸರು ಕಚ್ಚಾ ಬಾಂಬ್ ವಶಪಡಿಸಿಕೊಂಡಿದ್ದಾರೆ. ಈ ಕೃತ್ಯ ಯಾರು ಮಾಡಿದ್ದಾರೆಂದು ಇನ್ನೂ ತಿಳಿದು ಬಂದಿಲ್ಲ.
ದೊರಕಿರುವ ಕಚ್ಚಾ ಬಾಂಬ್ ಅನ್ನು ನ್ಯಾಯಾಲಯದ ಅನುಮತಿ ಪಡೆದು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನಾಶಗೊಳಿಸಲಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭಟ್ಕಳದ 9 ವರ್ಷ ಹಿಂದಿನ ಮರ್ಡರ್ ಕೇಸ್ : ಧಾರವಾಡ ಕೋರ್ಟ್ನಿಂದ ಮೇಲ್ಮನವಿ ವಜಾ