ETV Bharat / state

ಬಿಗಡಾಯಿಸಿದ ಸುಳ್ಯ ನಗರದ ಕಸ ವಿಲೇವಾರಿ ಸಮಸ್ಯೆ : ನಟ ಅನಿರುದ್ದ್ ವಿಡಿಯೋ ವೈರಲ್​

author img

By

Published : May 10, 2022, 7:50 PM IST

Updated : May 10, 2022, 8:44 PM IST

ಅನಿರುದ್ದ್​ಗೆ ಸುಳ್ಯ ನಗರದ ಕಸದ ಸಮಸ್ಯೆಗಳ ಫೋಟೋ ಕಳುಹಿಸಿ ಮಾಹಿತಿ ನೀಡಿದ ಮತ್ತು ಅನಿರುದ್ದ್ ಅವರ ವಿಡಿಯೋವನ್ನು ಶೇರ್ ಮಾಡಿದ, ಬಿಜೆಪಿಯ ಸುಳ್ಯ ಮಂಡಲ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಹಾಗೂ ಮಹಶಿರ್ ಮತ್ಸ್ಯ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾದ ಸುಪ್ರೀತ್ ಮೋಂಟಡ್ಕ ಅವರನ್ನು ಬಿಜೆಪಿಯ ಸುಳ್ಯ ವಾಟ್ಸ್‌ಆ್ಯಪ್ ಗ್ರೂಪ್​ನಿಂದ ಮಂಡಲ ಪ್ರಧಾನ ಕಾರ್ಯದರ್ಶಿ ಶುಭೋದ್ ಶೆಟ್ಟಿ ತೆರವುಗೊಳಿಸಿದ್ದಾರೆ..

the-problem-of-garbage-disposal-in-the-sulia-city
ಬಿಗಡಾಯಿಸಿದ ಸುಳ್ಯ ನಗರದ ಕಸ ವಿಲೇವಾರಿ ಸಮಸ್ಯೆ

ಸುಳ್ಯ : ಕರಾವಳಿಯಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಡೆಂಘೀ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳೂ ಹೆಚ್ಚಾಗುತ್ತಿವೆ. ಆದರೆ, ಸುಳ್ಯನಗರ ಪಂಚಾಯತ್‌ ಮಾತ್ರ ಕಸ ವಿಲೇವಾರಿ ಮಾಡಲು ಮಾಡುವ ಅಸಡ್ಡೆ ಇದೀಗ ರಾಜ್ಯ ಮಟ್ಟದಲ್ಲೂ ಸುದ್ದಿಯಾಗುತ್ತಿದೆ.

ಸುಳ್ಯದಲ್ಲಿ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಸುಳ್ಯ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್. ಅಂಗಾರ ಅವರ ನೇತೃತ್ವದಲ್ಲಿ ತುರ್ತು ಸಭೆ ಕರೆದು ನಗರದ ಕಸ ವಿಲೇವಾರಿ ಕೂಡಲೇ ಆಗಬೇಕು ಎಂದು ತಾಕೀತು ಮಾಡಲಾಗಿತ್ತು. ಮಾತ್ರವಲ್ಲದೇ ಸುಳ್ಯ ನ್ಯಾಯಾಧೀಶರಾದ ಸೋಮಶೇಖರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಥಳಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮಾಡುವಂತೆ ನಗರ ಪಂಚಾಯತ್‌ಗೆ ಸೂಚನೆ ನೀಡಿದ್ದರು.

ಸುಳ್ಯದ ಕಸದ ಸಮಸ್ಯೆ ಬಗ್ಗೆ ಮಾತನಾಡಿರುವ ನಟ ಅನಿರುದ್ದ್​

ಆದರೆ,ಈಗಲೂ ಕಸ ಮಾತ್ರ ಲೋಡುಗಟ್ಟಲೆ ರಾಶಿ ಬಿದ್ದು, ಪ್ರದೇಶದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇದೀಗ ಸುಳ್ಯದ ಕಸ ಸಮಸ್ಯೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪ್ರಖ್ಯಾತ ನಟ, ಗಾಯಕ ಹಾಗೂ ನಿರ್ದೇಶಕರಾದ ಅನಿರುದ್ದ್ ಅವರು ಸುಳ್ಯದ ನಗರ ಪಂಚಾಯತ್ ಕಸವನ್ನು ತೆರವು ಮಾಡಲು ಮುತುವರ್ಜಿವಹಿಸುವಂತೆ ವಿನಂತಿಸಿದ್ದಾರೆ.

ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ವಾಟ್ಸ್‌ಆ್ಯಪ್ ಗುಂಪಿನಿಂದ ಹೊರಗೆ: ಅನಿರುದ್ದ್​ಗೆ ಸುಳ್ಯ ನಗರದ ಕಸದ ಸಮಸ್ಯೆಗಳ ಫೋಟೋ ಕಳುಹಿಸಿ ಮಾಹಿತಿ ನೀಡಿದ ಮತ್ತು ಅನಿರುದ್ದ್ ಅವರ ವಿಡಿಯೋವನ್ನು ಶೇರ್ ಮಾಡಿದ, ಬಿಜೆಪಿಯ ಸುಳ್ಯ ಮಂಡಲ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಹಾಗೂ ಮಹಶಿರ್ ಮತ್ಸ್ಯ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾದ ಸುಪ್ರೀತ್ ಮೋಂಟಡ್ಕ ಅವರನ್ನು ಬಿಜೆಪಿಯ ಸುಳ್ಯ ವಾಟ್ಸ್‌ಆ್ಯಪ್ ಗ್ರೂಪ್​ನಿಂದ ಮಂಡಲ ಪ್ರಧಾನ ಕಾರ್ಯದರ್ಶಿ ಶುಭೋದ್ ಶೆಟ್ಟಿ ತೆರವುಗೊಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸುಪ್ರೀತ್ ಮೋಂಟಡ್ಕ ಅವರು ನಾನು ಮಾನ್ಯ ಪ್ರಧಾನಿಗಳ ಸ್ವಚ್ಛ ಭಾರತ ಅಭಿಯಾನ ಆಗಬೇಕೆಂದು ಇಚ್ಛೆ ಪಡುವವನು. ಆದರೆ, ಯಾವ ಕಾರಣಕ್ಕಾಗಿ ಒಂದು ಪ್ರದೇಶದ ಸ್ವಚ್ಛತೆ ಬಗ್ಗೆ ಗಮನ ಸೆಳೆದಾಗ ಗ್ರೂಪಿನಿಂದ ತೆರವು ಮಾಡಿದ್ದಾರೆ ಎಂದು ತಿಳಿದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ತಡೆಯಾಜ್ಞೆ ತಂದ ಬಿಲ್ಡರ್ಸ್: ಪಂಚಾಯಿತಿಗಳ‌ ವ್ಯಾಪ್ತಿಯಲ್ಲಿ ಕಸ ಸಮಸ್ಯೆ ವಿಲೇವಾರಿ ಯೋಜನೆಗೆ ಅಡೆತಡೆ

Last Updated : May 10, 2022, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.