ಸುಬ್ರಹ್ಮಣ್ಯ(ದ.ಕ): ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸರ್ಪ ಸಂಸ್ಕಾರ ಕ್ರಿಯಾಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಮಯ್ಯ ಭಟ್ ಗುರುವಾರ ಸಂಜೆ ನೇಣಿಗೆ ಶರಣಾಗಿದ್ದಾರೆ.
ಉಪ್ಪಿನಂಗಡಿ ನಾಳ ನಿವಾಸಿಯಾದ ಕೃಷ್ಣ ಮಯ್ಯ ಭಟ್ (55) ಕಳೆದ ಐದು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಕ್ರಿಯಾಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ತಾನು ವಾಸವಿದ್ದ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.