ETV Bharat / state

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ವಿಚಾರಣಾಧೀನ ಕೈದಿ: ಕಾರಾಗೃಹಕ್ಕೆ ಕರೆ ತರುವಾಗ ಪರಾರಿ - ಮಂಗಳೂರಿನ ಪಿವಿಎಸ್​ ವೃತ್ತದಲ್ಲಿ ವಿಚಾರಣಾಧೀನ ಕೈದಿ ಪರಾರಿ

ಕಾರಾಗೃಹಕ್ಕೆ ಕರೆತರುವಾಗ ಕೈದಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಾರಾಗೃಹಕ್ಕೆ ಕರೆತರುವಾಗ ವಿಚಾರಣಾಧೀನ ಕೈದಿ ಪರಾರಿ
author img

By

Published : Nov 8, 2019, 11:02 PM IST

ದಕ್ಷಿಣ ಕನ್ನಡ: ಕಾರಾಗೃಹಕ್ಕೆ ಕರೆತರುವಾಗ ಕೈದಿಯೊಬ್ಬ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಮಹಮ್ಮದ್ ರಫೀಕ್ ಎಂಬ ಆರೋಪಿ ನಗರದ ಪಿವಿಎಸ್ ವೃತ್ತದ ಬಳಿ ಪರಾರಿಯಾಗಿದ್ದಾನೆ.

ಸರಗಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳ ಆರೋಪಿಯಾಗಿರುವ ರಫೀಕ್​ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಾಪಾಸ್ ಉಪಕಾರಾಗೃಹಕ್ಕೆ ಕರೆ ತರುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿಯಾಗಿದ್ದಾನೆ.

ಮಹಮ್ಮದ್ ರಫೀಕ್ ತಪ್ಪಿಸಿಕೊಳ್ಳಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದು, ಇದಕ್ಕಾಗಿ ಒಬ್ಬ ಯುವಕ‌ ಮೊದಲೇ ಬೈಕ್​ನೊಂದಿಗೆ ಕಾಯುತ್ತಿದ್ದ. ರಫೀಕ್​ನನ್ನು ಕರೆದುಕೊಂಡು ಬಂದಿರುವ ಪೊಲೀಸರು ಕಾರಾಗೃಹ ತಲುಪುತ್ತಿದ್ದಂತೆ ಬೇಡಿಯನ್ನು ಬಿಚ್ಚಿದ್ದಾರೆ. ಈ ವೇಳೆ ತಕ್ಷಣವೇ ಬೈಕ್ ಏರಿ, ರಫೀಕ್ ಪರಾರಿಯಾಗಿದ್ದಾನೆ. ಪೊಲೀಸರು ತಕ್ಷಣ ಬೆನ್ನಟ್ಟಿದ್ದರೂ ಸಹ ಕೈಗೆ ಸಿಗದೆ ಪರಾರಿಯಾಗಿದ್ದಾನೆ.

Intro:ಮಂಗಳೂರು: ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಕೈದಿಯೋರ್ವನು ಮಂಗಳೂರಿನ ಉಪ ಕಾರಾಗೃಹ ದತ್ತ ವಿಚಾರಣೆಗೆ ಕರೆತರುವಾಗ ಮಾರ್ಗ ಮಧ್ಯೆ ನಗರದ ಪಿವಿಎಸ್ ವೃತ್ತದ ಬಳಿ ನಡೆದಿದೆ‌.

ನಗರದ ಗೂಡಿನ ಬಳಿಯ ನಿವಾಸಿ ಮುಹಮ್ಮದ್ ರಫೀಕ್ (28) ತಪ್ಪಿಸಿಕೊಂಡ ಆರೋಪಿ.

ಸರಗಳವು, ದರೋಡೆ ಸೇರಿ ಹಲವು ಪ್ರಕರಣಗಳ ಆರೋಪಿಯಾಗಿರುವ ರಫೀಕ್ ನನ್ನು ವಿಚಾರಣೆಗಾಗಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಉಪಕಾರಾಗೃಹಕ್ಕೆ ಕರೆ ತರುತ್ತಿರುವ ಸಂದರ್ಭ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

Body:ಮುಹಮ್ಮದ್ ರಫೀಕ್ ತಪ್ಪಿಸಿಕೊಳ್ಳಲು ಮೊದಲೇ ಪೂರ್ವ ಯೋಜನೆ ಮಾಡಿಕೊಂಡಿದ್ದು, ಇದಕ್ಕಾಗಿ ಯುವಕನೋರ್ವನು‌ ಮೊದಲೇ ಬೈಕ್ ನೊಂದಿಗೆ ಕಾಯುತ್ತಿದ್ದ. ರಫೀಕ್ ನನ್ನು ಕರೆದುಕೊಂಡು ಬಂದಿರುವ ಪೊಲೀಸರು ಕಾರಾಗೃಹ ತಲುಪುತ್ತಿದ್ದಂತೆ ಬೇಡಿಯನ್ನು ಬಿಟ್ಟಿದ್ದೇ ತಡ. ಆತ ಬೈಕ್ ಏರಿ ಪರಾರಿಯಾಗಿದ್ದಾನೆ. ಪೊಲೀಸರು ತಕ್ಷಣ ಬೆನ್ನಟ್ಟಿದ್ದರೂ ಆತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.