ETV Bharat / state

ಬೆಂಗಳೂರಿನಲ್ಲಿ ನಾಪತ್ತೆಯಾದ ಬಾಲಕಿ ಮಂಗಳೂರಿನಲ್ಲಿ ತಿರುಗಾಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

author img

By

Published : Oct 19, 2022, 1:29 PM IST

Updated : Oct 19, 2022, 2:49 PM IST

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿನ ಮನೆಯಿಂದ ಬಾಲಕಿ ಸೋಮವಾರ ನಾಪತ್ತೆಯಾಗಿದ್ದಳು. ಇದೀಗ ಆಕೆ ಮಂಗಳೂರಿನಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

girl who went missing in Bangalore
ಬೆಂಗಳೂರಿನಲ್ಲಿ ನಾಪತ್ತೆಯಾದ ಬಾಲಕಿ ಮಂಗಳೂರಿನಲ್ಲಿ ತಿರುಗಾಟ

ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಮಂಗಳೂರಿನಲ್ಲಿ ತಿರುಗಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿನ ಮನೆಯಿಂದ ಬಾಲಕಿ ಸೋಮವಾರ ನಾಪತ್ತೆಯಾಗಿದ್ದಳು. ಈಕೆ ಮಂಗಳೂರಿಗೆ ಆಗಮಿಸಿ, ನಾನಾ ಕಡೆ ತಿರುಗಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಿಂದ ಈಕೆ ಸೋಮವಾರ ನಾಪತ್ತೆಯಾಗಿದ್ದು, ಅಲ್ಲಿಂದ ಬಸ್ ಮೂಲಕ ಬೆಳಗ್ಗಿನ ಜಾವ 3 ಗಂಟೆಗೆ ಮಂಗಳೂರಿನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾಳೆ. ಅಲ್ಲಿಂದ ಆಟೋದಲ್ಲಿ ಮುಕ್ಕ ಬೀಚ್‌ಗೆ ತೆರಳಿ, ಸ್ವಲ್ಪ ಹೊತ್ತು ತಿರುಗಾಡಿ ಮತ್ತೆ ಅದೇ ರಿಕ್ಷಾದಲ್ಲಿ ಕದ್ರಿ ಪಾರ್ಕ್‌ಗೆ ಆಗಮಿಸಿದ್ದಾರೆ.

ಪಾರ್ಕ್‌ನ ಬಾಲಭವನ ಸಮೀಪದ ಶೌಚಾಲಯಕ್ಕೆ ಹೋಗಿ ಮುಖ ತೊಳೆದು ವಾಪಸ್ ಬಂದಿದ್ದಾರೆ. ಅಲ್ಲಿಂದ ರಿಕ್ಷಾದಲ್ಲಿ ಮತ್ತೆ ಕೆಎಸ್​​ಆರ್​ಟಿಸಿಗೆ ತೆರಳಿದ್ದಾಳೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಆಕೆ ಮನೆಯಿಂದ ಹೊರಬಂದಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಡಬ: ಬಸ್ ಏರಿ ನಿಗದಿತ ಸ್ಥಳದಲ್ಲಿ ಇಳಿಯದೆ ನಾಪತ್ತೆಯಾಗಿದ್ದ ಬಾಲಕಿ

Last Updated : Oct 19, 2022, 2:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.