ETV Bharat / state

ಮನೆಯೊಳಗೆ ಗೋಣಿಚೀಲದಲ್ಲಿ ಯುವತಿಯ ಮೃತದೇಹ ಪತ್ತೆ: ಪತಿ ಪರಾರಿ - ಮೃತ ಮಹಿಳೆಯ ಪತಿ ಇಮ್ರಾನ್​

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಆಕೆಯ ಪತಿ ಪರಾರಿಯಾಗಿದ್ದು, ಆತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

dead body of a young woman was found in a sack
ಮನೆಯೊಳಗೆ ಗೋಣಿಚೀಲದಲ್ಲಿ ಯುವತಿಯ ಮೃತದೇಹ ಪತ್ತೆ
author img

By

Published : Nov 22, 2022, 8:09 PM IST

ಸುಳ್ಯ (ದಕ್ಷಿಣ ಕನ್ನಡ): ಯುವತಿಯ ಮೃತದೇಹವನ್ನು ಕತ್ತರಿಸಿ ಫ್ರಿಡ್ಜ್​​ ನಲ್ಲಿಟ್ಟ ಹೇಯ ಕೃತ್ಯ ಇತ್ತೀಚೆಗೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯ ನೆನಪು ಮಾಸುವ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಇದನ್ನೇ ಹೋಲುವ ಮಾದರಿಯಲ್ಲಿ, ಗೋಣಿ ಚೀಲದಲ್ಲಿ ಯುವತಿಯ ಮೃತದೇಹ ಪತ್ತೆಯಾದ ಘಟನೆಯೊಂದು ಬೆಳಕಿಗೆ ಬಂದಿದೆ.

ಸುಳ್ಯದ ಬೀರಮಂಗಲದ ಮನೆಯೊಂದರಲ್ಲಿ ಯುವತಿಯ ಮೃತದೇಹ ಗೋಣಿ ಚೀಲದೊಳಗೆ ಪತ್ತೆಯಾಗಿದೆ. ಅಲ್ಲದೇ ಆಕೆಯ ಪತಿ ಕೂಡ ನಾಪತ್ತೆಯಾಗಿದ್ದಾನೆ. ಪತಿ, ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿ ಪರಾರಿಯಾಗಿರುವುದಾಗಿ ಸಂಶಯ ವ್ಯಕ್ತವಾಗಿದೆ. ಸುಳ್ಯದ ಹೋಟೆಲ್​​ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಪರಾರಿಯಾದ ವ್ಯಕ್ತಿಯಾಗಿದ್ದಾನೆ. ಈತ ಮೃತ ಮಹಿಳೆಯ ಪತಿ ಎನ್ನಲಾಗಿದೆ.

ಇಮ್ರಾನ್ ಕಳೆದ ಆರು ತಿಂಗಳಿನಿಂದ ಬೀರಮಂಗಲದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಎರಡು ದಿನಗಳ ಹಿಂದೆ ಇಮ್ರಾನ್ ಊರಿಗೆ ತೆರಳುವುದಾಗಿ ತಾನು ಕೆಲಸ ಮಾಡಿಕೊಂಡಿದ್ದ ಹೋಟೆಲ್​ನವರಿಗೆ ತಿಳಿಸಿದ್ದ ಎನ್ನಲಾಗಿದೆ. ಆದರೆ ಇಮ್ರಾನ್ ಹೋಗುವಾಗ ಪತ್ನಿಯನ್ನು ಜತೆಗೆ ಕರೆದುಕೊಂಡು ಹೋಗಿರಲಿಲ್ಲ ಎನ್ನಲಾಗ್ತಿದೆ. ಇದರಿಂದ ಸ್ಥಳೀಯರಿಗೆ ಸಂಶಯ ಉಂಟಾಗಿದೆ.

ಆತ ತೆರಳಿ ಎರಡು ದಿನವಾದರೂ ಮನೆಯಿಂದ ಯಾರೂ ಹೊರ ಬಾರದ ಹಿನ್ನೆಲೆ ಸಂಶಯಗೊಂಡ ಮನೆಯವರು ಇಮ್ರಾನ್ ಕೆಲಸ ಮಾಡುತ್ತಿದ್ದ ಹೋಟೆಲ್​ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಅಲ್ಲದೇ ಎರಡು ದಿನಗಳ ಹಿಂದೆ ಅವರ ಮನೆಯಿಂದ ಜೋರಾಗಿ ಕಿರುಚಿದ ಶಬ್ಧ ಕೇಳಿಸಿರುವುದಾಗಿಯೂ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸೋದರಳಿಯನನ್ನು ಕೊಂದು ಹೂತು ಹಾಕಿದ ಅತ್ತೆ..

ಹೀಗಾಗಿ ಹೋಟೆಲ್ ಮಾಲೀಕರ ಮಾಹಿತಿಯ ಮೇರೆಗೆ ಮಂಗಳವಾರ ಸಂಜೆ ಬಾಡಿಗೆ ಮನೆಗೆ ಬಂದು ಪೊಲೀಸರು ಬಾಗಿಲು ಒಡೆದು ಪರಿಶೀಲಿಸಿದಾಗ, ಮನೆಯೊಳಗೆ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಶಂಕಿತ ಆರೋಪಿ ಪರಾರಿಯಾಗಿದ್ದಾನೆ. ಸುಳ್ಯ ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಬರಲಿದ್ದಾರೆಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.