ETV Bharat / state

ಡ್ರೋನ್ ತಯಾರಿಸಿದ ಕರಾವಳಿಯ ಬಾಲಕನ ಯಶೋಗಾಥೆ.. - The boy made the drone

ಬ್ರೆಸ್ ಲೆಸ್ ಮೋಟಾರು, ಟ್ರಾನ್ಸ್ ಮೀಟರ್, ಫ್ಲೈಟ್ ಕಂಟ್ರೋಲರ್, ಪ್ರೊಫಿಲ್ಲರ್, ರಿಸೀವರ್, ಬ್ಯಾಟರಿ ಅಳವಡಿಸಿರುವ ಶಮಂತ್ ಆಚಾರ್ಯ ತಯಾರಿಸಿದ ಡ್ರೋನ್, ಸುಮಾರು ಒಂದುವರೆ ಕೆಜಿ‌ ಭಾರವುಳ್ಳದ್ದಾಗಿದೆ. ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ 60 ಫೀಟ್ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿದೆ..

The boy made the drone
ಡ್ರೋನ್ ತಯಾರಿಸಿ ಯಶೋಗಾಥೆ ಬರೆದ ಕರಾವಳಿಯ ಬಾಲಕ
author img

By

Published : Jul 26, 2020, 10:16 PM IST

Updated : Jul 26, 2020, 11:10 PM IST

ಮಂಗಳೂರು : ಮುಖದಲ್ಲಿ ಇನ್ನೂ ಮಾಸದ ಮಗುವಿನ ಮುಗ್ಧತೆ. ಆದರೆ, ಕೈಚಳಕದಲ್ಲಿ ಮಾತ್ರ ಸಾಟಿ ಯಾರೂ ಎಂಬಷ್ಟು ಚೂಟಿ. ಕೈಗೆ ಸಿಕ್ಕ ನಿರುಪಯುಕ್ತ ವಸ್ತುಗಳನ್ನು ಉಪಯುಕ್ತ ಉಪಕರಣವಾಗಿ ಮಾಡಬಲ್ಲ ಮಂಗಳೂರಿನ ಬಾಲಕನೊಬ್ಬ, ಕ್ಯಾಟರಿಂಗ್ ದುಡಿಮೆ ಮಾಡಿ ಕೂಡಿಟ್ಟ ಹಣದಿಂದ ಬಿಡಿ ಭಾಗಗಳನ್ನು ಖರೀದಿಸಿ ಡ್ರೋನ್ ತಯಾರಿಸಿದ್ದಾನೆ.

ಮಂಗಳೂರಿನ ಕಾರ್ ಸ್ಟ್ರೀಟ್ ಸಮೀಪದ ನಿವಾಸಿ, ಡೊಂಗರಕೇರಿ ಕೆನರಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್ ಆಚಾರ್ಯ ಡ್ರೋನ್ ತಯಾರಿಸಿದ್ದಾನೆ. 9ನೇ ತರಗತಿಯಲ್ಲಿರುವಾಗಲೇ ಈ ಡ್ರೋನ್‌ ತಯಾರಿಸಿದ್ದು, ಬಾಲ್ಯದಿಂದಲೇ ಇರುವ ತಂತ್ರಜ್ಞಾನದ ಆಸಕ್ತಿಯೇ ಡ್ರೋನ್ ಬಗ್ಗೆ ಆಸಕ್ತಿ ತಳೆಯಲು ಕಾರಣವಾಗಿದೆ.

ಯಾವುದೋ ಮದುವೆ ಸಮಾರಂಭಕ್ಕೆ ಹೋದಾಗ ಡ್ರೋನ್ ಹಾರೋದನ್ನು ಕಂಡಿರುವ ಶಮಂತ್ ಆಚಾರ್ಯನಿಗೆ, ತಾನೂ ಡ್ರೋನ್ ತಯಾರಿಸಬೇಕೆಂಬ ಆಸೆ ಚಿಗುರೊಡೆದಿದೆ. ಇದಕ್ಕಾಗಿ ಯೂಟ್ಯೂಬ್, ಅಂತರ್ಜಾಲಗಳಲ್ಲಿ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದ. ಇದರ ಜೊತೆಗೆ ಬಿಡುವಿನ ವೇಳೆಯಲ್ಲಿ ಕ್ಯಾಟರಿಂಗ್ ದುಡಿಮೆಯಲ್ಲಿ ಉಳಿಸಿದ ಹಣದಿಂದ ಹಾಗೂ ಹೆತ್ತವರು ನೀಡಿರುವ ಹಣದಿಂದ ಅಣ್ಣ ಶಶಾಂಕ್ ಆಚಾರ್ಯರ ನೆರವಿನಿಂದ ಆನ್‌ಲೈನ್ ಮೂಲಕ ಡ್ರೋನ್ ಬಿಡಿಭಾಗಗಳನ್ನು ಖರೀದಿಸಿಯೇ ಬಿಡುತ್ತಾನೆ.

ಡ್ರೋನ್ ತಯಾರಿಸಿ ಯಶೋಗಾಥೆ ಬರೆದ ಕರಾವಳಿಯ ಬಾಲಕ

ಮುಂದೆ ಡ್ರೋನ್ ತಯಾರಿಸುವ ಕೆಲಸದಲ್ಲಿ ತೊಡಗುವ ಶಶಾಂಕ್ ಆಚಾರ್ಯ ಹಲವಾರು ಏಳುಬೀಳುಗಳನ್ನು ಕಾಣುತ್ತಾರೆ. ಇದರಲ್ಲಿ ಕಾಲಿಗೆ ಏಟಾಗಿದ್ದು, ಮರಕ್ಕೆ ಢಿಕ್ಕಿ ಹೊಡೆದು ಡ್ರೋನ್ ಹಾಳಾಗಿರೋದು ಇದೆ. ಒಂದು ತಿಂಗಳುಗಳ ಕಾಲ ನಡೆಸಿದ ಶತಪ್ರಯತ್ನದ ಬಳಿಕ ಒಂದು ದಿನ ಯಶಸ್ಸು ಕಂಡು ಡ್ರೋನ್ ಹಾರಿಸಿಯೇ ಬಿಡುತ್ತಾರೆ.

ಬ್ರೆಸ್ ಲೆಸ್ ಮೋಟಾರು, ಟ್ರಾನ್ಸ್ ಮೀಟರ್, ಫ್ಲೈಟ್ ಕಂಟ್ರೋಲರ್, ಪ್ರೊಫಿಲ್ಲರ್, ರಿಸೀವರ್, ಬ್ಯಾಟರಿ ಅಳವಡಿಸಿರುವ ಶಮಂತ್ ಆಚಾರ್ಯ ತಯಾರಿಸಿದ ಡ್ರೋನ್, ಸುಮಾರು ಒಂದುವರೆ ಕೆಜಿ‌ ಭಾರವುಳ್ಳದ್ದಾಗಿದೆ. ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ 60 ಫೀಟ್ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿದೆ. ಈ ಡ್ರೋನ್ ಮಾದರಿಯನ್ನು ಎನ್ಐಟಿಕೆ ಹಾಗೂ ಕಾವೂರಿನಲ್ಲಿ ನಡೆದಿರುವ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರದರ್ಶಿಸಿದ್ದು, ಇನ್‌ಸ್ಪೈರ್ ಅವಾರ್ಡ್ ಬಂದಿದೆ. ಅಲ್ಲದೆ ಕಳೆದ ಬಾರಿಯ ಗಣೇಶ ಚತುರ್ಥಿಯ ಸಂದರ್ಭ ನೆಹರೂ ಮೈದಾನದಲ್ಲಿ ಪೂಜಿಸುವ ಸಾರ್ವಜನಿಕ ಗಣೇಶೋತ್ಸವದ ಶ್ರೀ ಗಣಪತಿಯ ಮೂರ್ತಿಗೆ ಶಮಂತ್ ಆಚಾರ್ಯ ಡ್ರೋನ್ ಮೂಲಕ ಪುಷ್ಪವರ್ಷಗೈದಿದ್ದಾರೆ.

ಎಳವೆಯಿಂದಲೇ ತಂತ್ರಜ್ಞಾನ, ವಿಜ್ಞಾನ ಮಾದರಿಯಲ್ಲಿ ಆಸಕ್ತಿ ತಳೆದಿರುವ ಶಮಂತ್ ಆಚಾರ್ಯ ಬ್ಯಾಟರಿ, ಇನ್ನಿತರ ವಸ್ತುಗಳನ್ನು ಬಳಕೆ ಮಾಡಿ ಪವರ್ ಬ್ಯಾಂಕ್‌‌ ಅಭಿವೃದ್ಧಿ ಪಡಿಸಿದ್ದಾರೆ. ವಾಟರ್ ಪ್ಯೂರಿಫಯರ್ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಅಲ್ಲದೆ ಶಾಲೆಯಲ್ಲಿ ವಿವಿಧ ವಿಜ್ಞಾನ ಮಾದರಿ ತಯಾರಿಸಿದ್ದಾರೆ.

ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಶಮಂತ್ ಆಚಾರ್ಯ ಮಾತನಾಡಿ, ನಾನು ಈಗ ತಯಾರಿಸಿರೋದು ಬೇಸಿಕ್ ಮಾಡೆಲ್. ಮುಂದೆ ಈ ಡ್ರೋನ್ ಮಾದರಿಯನ್ನು ‌ಇನ್ನಷ್ಟು ಅಭಿವೃದ್ಧಿ ಪಡಿಸುವ ಆಲೋಚನೆ ಇದೆ. ಆದ್ದರಿಂದ ಜಿಪಿಎಸ್, ಸೆನ್ಸಾರ್, ಫ್ಲೈಟ್ ಕಂಟ್ರೋಲರ್ ಅಳವಡಿಸುವ ಬಗ್ಗೆ ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿದರು.

ಶಮಂತ್ ಆಚಾರ್ಯ ತಂದೆ ಜಗದೀಶ್ ಆಚಾರ್ಯ ಮಾತನಾಡಿ, ಶಮಂತ್​​ನಿಗೆ ಸಣ್ಣದಿಂದಲೇ ತಂತ್ರಜ್ಞಾನದ ‌ಬಗ್ಗೆ ಅತೀವ ಆಸಕ್ತಿ. ಆಟಿಕೆಗಳ ಬಿಡಿ ಭಾಗಗಳು, ಬ್ಯಾಟರಿಗಳನ್ನು ಬಳಸಿ ಏನಾದರೊಂದು ಉಪಕರಣಗಳನ್ನು ತಯಾರಿಸುತ್ತಲೇ ಇದ್ದ.‌ ಅವನ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.

Last Updated : Jul 26, 2020, 11:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.