ETV Bharat / state

ಮಂಗಳೂರು ಕೋರ್ಟ್​ನ ಆರನೇ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ! - ನ್ಯಾಯಾಲಯದ ಆರನೇ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ

ಪೊಕ್ಸೊ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿ ವಿಚಾರಣೆಗೆ ಕರೆತಂದ ವೇಳೆ, ಪೊಲೀಸರಿಂದ ತಪ್ಪಿಸಿಕೊಂಡು ಆರನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾನೆ.

ಆತ್ಮಹತ್ಯೆ
ಆತ್ಮಹತ್ಯೆ
author img

By

Published : Aug 31, 2021, 6:46 PM IST

ಮಂಗಳೂರು: ನಗರದ ನ್ಯಾಯಾಲಯದ ಆರನೇ ಮಹಡಿಯಿಂದ ಹಾರಿ ಆರೋಪಿಯೊಬ್ಬ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರಿನ ಉಳ್ಳಾಲದ ರವಿರಾಜ್ (31) ಆತ್ಮಹತ್ಯೆ ಮಾಡಿಕೊಂಡ ಆರೋಪಿ.

ರವಿರಾಜ್​ನನ್ನು ಪೊಲೀಸರು ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ, ಆತ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿ ನ್ಯಾಯಾಲಯದ ಆರನೇ ಮಹಡಿಯಿಂದ ಹಾರಿದ್ದಾನೆ. ಆರೋಪಿ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇನ್ನೂ ಓದಿ: ಶಿವಮೊಗ್ಗದಲ್ಲಿ 2 ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ.. ಖ್ಯಾತ ಖೋ-ಖೋ ಆಟಗಾರ ದಾರುಣ ಸಾವು

ರವಿರಾಜ್, ಬಾಲಕಿಯೊಬ್ಬಳಿಗೆ ಕುಡಿದ ಮತ್ತಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊತ್ತಿದ್ದ. ಈತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.