ಸುಳ್ಯ(ದಕ್ಷಿಣ ಕನ್ನಡ): ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ದಿನ ನಿಗದಿಯಾಗಿದ್ದು, ಸಿದ್ಧತೆ ನಡೆಯುತ್ತಿದ್ದರೆ ಅಲ್ಲಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ಗಳು ಕಾಣಸಿಗುತ್ತಿವೆ. ಹೌದು, ಸುಳ್ಯ ತಾಲೂಕಿನ ಬೆಳ್ಳಾರೆಯ ತಡಗಜೆಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಒಂದನ್ನು ಸ್ಥಳೀಯರು ಅಳವಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಕಾರವಾರ: ಕೊಟ್ಟಿಗೆಯನ್ನೇರಿದ್ದ ಕಾಳಿಂಗ ಸೆರೆ!
ಕಳೆದ 25 ವರ್ಷಗಳಿಂದ ಬೆಳ್ಳಾರೆ ಗ್ರಾಮದ 3ನೇ ವಾರ್ಡ್ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಸರಿಯಾಗಿ ಇಲ್ಲ ಎನ್ನುವ ಆರೋಪ ಕೇಳಿಬಂದಿವೆ.
ಜನಪ್ರತಿನಿಧಿಗಳು ಈವರೆಗೂ ಕೇವಲ ಭರವಸೆ ಮಾತ್ರ ಕೊಡುತ್ತಿದ್ದಾರೆ ಹೊರತು, ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ, ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸುವುದಾಗಿ ತಡಗಜೆ ಗ್ರಾಮಸ್ಥರು ಬ್ಯಾನರ್ ಅಳವಡಿಸಿದ್ದಾರೆ.