ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ಪೇಟೆ ಸುತ್ತಮುತ್ತ ಭಾನುವಾರ ಸಂಜೆ ಸುಮಾರು 4 ಗಂಟೆಗೆ ಗಾಳಿ ಸಹಿತ ಮಳೆಯಾಗಿದೆ.
ಕೆಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಸುಮಾರು 15ರಿಂದ 20 ನಿಮಿಷ ಮಳೆ ಸುರಿದಿದೆ. ನರಿಕೊಂಬು, ಶಂಭೂರು, ಬಂಟ್ವಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ.
ಈ ಸಂದರ್ಭ ಸ್ಥಳೀಯರು ಆಲಿಕಲ್ಲನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋ ತೆಗೆದು ಸಂತಸಪಟ್ಟರು. ಅಡಕೆ ಬೆಳೆಗಾರರನ್ನು ದಿಢೀರ್ ಮಳೆ ಚಿಂತೆಗೀಡು ಮಾಡಿದೆ.