ETV Bharat / state

ತೌಕ್ತೆಯಿಂದಾಗಿ ಅಕಾಲಿಕ ಮಳೆ: ಕರಾವಳಿ ಭಾಗದ ಅಡಕೆ ಫಸಲಿಗೆ ಭಾರಿ ಹೊಡೆತ

ತೌಕ್ತೆ ಚಂಡಮಾರುತದ ಹಿನ್ನೆಲೆ ಸುರಿದ ಅಕಾಲಿಕ ಮಳೆಯ ಅಡಕೆ ಬೆಳೆನಾಶಕ್ಕೆ ಕಾರಣವಾಗಿದೆ. ಮಳೆಯಿಂದಾಗಿ ಅಡಿಕೆ ಗಿಡದಿಂದ ಸಣ್ಣ ಅಡಿಕೆಗಳು ಬೀಳಲಾರಂಭಿಸಿದ್ದು ಫಸಲು ಕಡಿಮೆಯಾಗುವ ಆತಂಕದಲ್ಲಿದ್ದಾರೆ ಬೆಳೆಗಾರರು.

betelnuts
betelnuts
author img

By

Published : May 24, 2021, 6:18 PM IST

ಕರಾವಳಿಯಾದ್ಯಂತ ತೌಕ್ತೆ ಚಂಡಮಾರುತ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿ ಹೊರಟಿದೆ. ಒಂದೆಡೆ ಸಮುದ್ರ ಕೊರೆತದಿಂದ ನೂರಾರು ಮನೆಗಳು ಕಡಲ ಪಾಲಾಗಿದ್ದರೆ, ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಗೆ ಕಡಲ ತೀರದ ಜನ ಮಾತ್ರವಲ್ಲ, ಮಲೆನಾಡಿನ ಜನರೂ ಸಂಕಷ್ಟಕ್ಕೀಡಾಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಸಮಸ್ಯೆ ಎದುರಾಗಿದೆ. ಮಳೆಯಿಂದಾಗಿ ಅಡಿಕೆ ಗಿಡದಿಂದ ಸಣ್ಣ ಅಡಿಕೆಗಳು ಬೀಳಲಾರಂಭಿಸಿದ್ದು, ಇದು ಅಡಿಕೆ ಬೆಳೆಗಾರನ ಫಸಲಿಗೆ ಭಾರೀ ಹೊಡೆತ ನೀಡಲಿದೆ.

ಕರಾವಳಿ ಭಾಗದ ಕೃಷಿಕರ ಪ್ರಮುಖ ಜೀವನಾಧಾರ ಬೆಳೆಯಾದ ಅಡಕೆ ಬೆಳೆಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಚಂಡಮಾರುತದ ಹಿನ್ನೆಲೆ ಕರಾವಳಿಯಾದ್ಯಂತ ಕಳೆದ ಒಂದು ವಾರಗಳಿಂದೀಚೆಗೆ ಸುರಿದ ಅಕಾಲಿಕ ಮಳೆ ಅಡಿಕೆ ಬೆಳೆಗಾರನಿಗೆ ಬಹಳ ನಷ್ಟ ಉಂಟು ಮಾಡಿದೆ. ಈಗಾಗಲೇ ಒಂದು ಕೊಯ್ಲನ್ನು ಕೊಯ್ದು ಮಾರಾಟ ಮಾಡಿರುವ ಅಡಿಕೆ ಬೆಳಗಾರ ಇನ್ನೊಂದು ಕೊಯ್ಲಿನ ನಿರೀಕ್ಷೆಯಲ್ಲಿದ್ದಾನೆ. ಅಲ್ಲದೇ ಈ ಕೊಯ್ಲಿಗೆ ಬೇಕಾದ ಮದ್ದು ಬಿಡುವ ಕೆಲಸ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಸಿದ್ಧತೆಯನ್ನೂ ಮಾಡಿಕೊಂಡಿದ್ದಾನೆ. ಆದರೆ ಅಕಾಲಿಕ ಮಳೆಯಿಂದಾಗಿ ಈ ಎಲ್ಲಾ ಸಿದ್ಧತೆಗಳು ನೀರಲ್ಲಿ ಕೊಚ್ಚಿ ಹೋಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಅಡಕೆ ಗಿಡದಲ್ಲಿ ಇದೀಗ ಹಿಂಗಾರ ಬಿಡುವ ಹಾಗೂ ಎಳೆ ಅಡಕೆ ಮೊಳಕೆ ಬರುವ ಸಮಯವಾಗಿದ್ದು, ಅಕಾಲಿಕ ಮಳೆಯಿಂದಾಗಿ ಈ ಎಳೆ ಅಡಕೆಗಳು ಉದುರಲಾರಂಭಿಸಿದೆ. ಅಲ್ಲದೇ ಮಳೆಯಿಂದಾಗಿ ಹಿಂಗಾರಗಳೂ ಕರಟಿ ಹೋಗುತ್ತಿವೆ. ಇದೇ ರೀತಿ ಎಳೆ ಅಡಿಕೆ ಉದುರಲು ಆರಂಭಿಸಿದಲ್ಲಿ, ಅಡಕೆ ಬೆಳೆಗಾರನಿಗೆ ಫಸಲು ದೊರೆಯುವುದು ಮರೀಚಿಕೆಯೇ ಆಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ಈ ಎಳೆ ಅಡಕೆಗೆ ಮದ್ದು ಬಿಡುವ ಕಾರ್ಯವೂ ನಡೆಯಬೇಕಿದ್ದು, ಸರಿಯಾದ ಸಮಯದಲ್ಲಿ ಮದ್ದು ಬಿಡದೇ ಹೋದಲ್ಲಿ, ಅಡಕೆಗೆ ಕೊಳೆರೋಗದ ಬಾಧೆಯೂ ಕಾಡುವ ಭೀತಿಯಿದೆ. ನಿರಂತರ ಮಳೆ ಬಂದಲ್ಲಿ ಅಡಕೆಗೆ ಯಾವುದೇ ತೊಂದರೆಯಿಲ್ಲದಿದ್ದರೂ, ಈ ರೀತಿಯ ಅಕಾಲಿಕ ಮಳೆಯಿಂದ ಭಾರೀ ತೊಂದರೆಯಾಗುತ್ತದೆ. ಮಳೆ ಬಂದು ಹೋದ ಮೇಲೆ ವಿಪರೀತ ಬಿಸಿಲು ಬರುವ ಕಾರಣದಿಂದಾಗಿ ಅಡಿಕೆಯ ಗೊಂಚಲು ಕರಟಿ ಹೋಗುವುದು ಸಾಮಾನ್ಯವಾಗಿದ್ದು, ಅಡಿಕೆ ಬೆಳೆಗಾರನಿಗೆ ತೌಕ್ತೆ ಚಂಡಮಾರುತ ಭಾರಿ ಹೊಡೆತ ನೀಡಿದೆ.

ಕರಾವಳಿಯ ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯ ಹೆಚ್ಚಿನ ತೋಟಗಳಲ್ಲಿ ಈ ಸಮಸ್ಯೆಯೂ ಹೆಚ್ಚಾಗಿದೆ. ಒಂದೆಡೆ ಕೊಯ್ದು ಮಾರಾಟ ಮಾಡಲು ಸಿದ್ಧವಾದ ಅಡಿಕೆ ಮಳೆಯಿಂದಾಗಿ ಹಾಳಾದರೆ, ಇನ್ನೊಂದೆಡೆ ಹೊಸ ಫಸಲೂ ಮಳೆಯ ಕಾಟದಿಂದ ಕೈ ತಪ್ಪುವ ಹಂತದಲ್ಲಿದೆ. ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಕಿಲೋಗೆ 400 ರೂಪಾಯಿ ದಾಟಿ, 500 ರೂಪಾಯಿಗೆ ಬಿಕರಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಆದರೆ ಅಡಕೆಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದಾಗ ಅಡಕೆ ಬೆಳೆ ಈ ರೀತಿ ನಷ್ಟಕ್ಕೀಡಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.