ETV Bharat / state

ಸುಳ್ಯದ ಪ್ರಭಾರ ಉಪ ನೋಂದಣಾಧಿಕಾರಿ ವಿರುದ್ಧ ಲಂಚ ಪಡೆದ ಆರೋಪ... ವೀಡಿಯೊ ವೈರಲ್ - ಲಂಚ

ಸುಳ್ಯದ ಪ್ರಭಾರ ಉಪ ನೋಂದಣಾಧಿಕಾರಿ ಸಾರ್ವಜನಿಕರಿಂದ ಲಂಚ ಪಡೆದಿದ್ದಾರೆ ಎನ್ನಲಾಗಿದ್ದು, ಲಂಚ ಪಡೆಯುವ ವೇಳೆ ಇದು ತನಗೆ ಮಾತ್ರವಲ್ಲ, ಎಲ್ಲರಿಗೂ ಇದರಲ್ಲಿ ಪಾಲಿದೆ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಲಂಚ ಪಡೆಯುತ್ತಿರುವ ಅಧಿಕಾರಿ
author img

By

Published : Jun 8, 2019, 4:56 PM IST

ಮಂಗಳೂರು: ಆಸ್ತಿ ನೋಂದಣಿಗೆ ಬರುವವರಿಂದ ಸುಳ್ಯದ ಪ್ರಭಾರ ಉಪ ನೋಂದಣಾಧಿಕಾರಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿರುವ ವಿಡಿಯೋ ಒಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಳ್ಯದ ಪ್ರಭಾರ ಉಪ ನೊಂದಣಾಧಿಕಾರಿ ಸಾರ್ವಜನಿಕರಿಂದ ಲಂಚ ಪಡೆದಿದ್ದಾರೆ ಎನ್ನಲಾಗಿದ್ದು, ಲಂಚ ಪಡೆಯುವ ವೇಳೆ ಇದು ತನಗೆ ಮಾತ್ರವಲ್ಲ, ಎಲ್ಲರಿಗೂ ಇದರಲ್ಲಿ ಪಾಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ವೈರಲ್​ ಆಗಿರುವ ವಿಡಿಯೋ

ಈ ಕಚೇರಿಯಲ್ಲಿ ಭ್ರಷ್ಟಾಚಾರ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಇನ್ನೂ ನಿಯಂತ್ರಣವಾಗಿಲ್ಲ. ಕಚೇರಿಯ ಎಲ್ಲಾ ಕಡತಗಳ ವ್ಯವಹಾರಗಳನ್ನು ಆನ್​ಲೈನ್ ಮೂಲಕ ಮಾಡಲಾಗಿದೆಯಾದರೂ ಅರ್ಜಿಯ ಕೊನೆಯಲ್ಲಿ ಅಧಿಕಾರಿಯ ಸಹಿಗಾಗಿ ಅಧಿಕಾರಿಯ ಮುಂದೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಅಧಿಕಾರಿಯೊಬ್ಬರು ಈ ರೀತಿ ಸಾರ್ವಜನಿಕರಿಂದ ಲಂಚ ಪಡೆದಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿದ್ದು, ಈ ಕುರಿತು ಯಾವುದೇ ರೀತಿಯ ದೂರು ದಾಖಲಾಗಿಲ್ಲ.

Intro:ಮಂಗಳೂರು: ಆಸ್ತಿ ನೋಂದಣಿಗೆ ಬರುವವರಿಂದ ಸುಳ್ಯದ ಪ್ರಭಾರ ಉಪನೊಂದಣಾಧಿಕಾರಿ ಲಂಚ ಪಡೆಯುತ್ತಿರುವ ವೀಡಿಯೊ ವೈರಲ್ ಆಗಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕೇಶವಮೂರ್ತಿ ಎಂಬಾತನೇ ಲಂಚ ಪಡೆಯುತ್ತಿರುವ ಅಧಿಕಾರಿ.

ಕಳೆದ ಒಂದು ವರ್ಷಗಳಿಂದ ಕೇಶವ ಮೂರ್ತಿ ಸುಳ್ಯದ ಪ್ರಭಾರ ಉಪನೊಂದಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಸಾರ್ವಜನಿಕರಿಂದ ಲಂಚ ಪಡೆಯುವಾಗ ಇದು ತನಗೆ ಮಾತ್ರವಲ್ಲ, ಎಲ್ಲರಿಗೂ ಇದರಲ್ಲಿ ಪಾಲಿದೆ ಎಂದು ರಾಜಾರೋಷವಾಗಿ ಹೇಳುತ್ತಿರುವುದೂ ವಿಡಿಯೋದಲ್ಲಿ ದಾಖಲಾಗಿದೆ.

Body:ಈ ಕಚೇರಿಯಲ್ಲಿ ಭ್ರಷ್ಟಾಚಾರ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಇನ್ನೂ ನಿಯಂತ್ರಣವಾಗಿಲ್ಲ. ಕಚೇರಿಯ ಎಲ್ಲಾ ಕಡತ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಮಾಡಲಾಗಿದೆಯಾದರೂ , ಅರ್ಜಿಯ ಕೊನೆಯಲ್ಲಿ ಅಧಿಕಾರಿಯ ಸಹಿಗಾಗಿ ಅಧಿಕಾರಿಯ ಮುಂದೆ ಬರಲೇ ಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ.
ಅರ್ಜಿಗಳು ಯಾವೆಲ್ಲಾ ಟೇಬಲ್ ಮುಖಾಂತರ ವಿಲೇವಾರಿಯಾಗಿದೆಯೋ, ಆ ಎಲ್ಲಾ ಟೇಬಲ್ ಗಳ ವಾರೀಸುದಾರರ ಫೀಸನ್ನು ಒಟ್ಟಿಗೆ ಸೇರಿಸಿ ಲಂಚ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಕೇಶವ ಮೂರ್ತಿ ಇಸಿ ತೆಗೆಯಲು, ಆಸ್ತಿ ನೊಂದಣಿ ಕಚೇರಿಗೆ ಬರುವವರಿಂದ ಲಂಚಪಡೆದುಕೊಳ್ಳುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.