ಮಂಗಳೂರು: ಮಂಗಳೂರು ವಿವಿಯ ತುಳು ಪರಿಷತ್ ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರಥಮ ತುಳು ಸಮ್ಮೇಳನಕ್ಕೆ, ಅಧ್ಯಕ್ಷೆ ಅನನ್ಯಾ ಜೀವನ್ ಉಳ್ಳಾಲ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಹೆಸರಿಗೆ ಬೇರೆಬೇರೆ ಜಾತಿ, ಮತ, ಸಮುದಾಯಗಳಿದ್ದರೂ ತುಳುವಿನ ವಿಚಾರ ಬಂದಾಗ ಎಲ್ಲರೂ ಗಟ್ಟಿ ಸ್ವರದಲ್ಲಿ ನಾವೆಲ್ಲಾ ತುಳುವರು ಎಂದು ಹೇಳುತ್ತಾರೆ. ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ ಎಂದು ಹಲವಾರು ಜಾತಿ ಮತಗಳಿದ್ದರೂ, ಎಲ್ಲರೂ ಒಂದಾಗಿ ಸೌಹಾರ್ದತೆಯಿಂದ ಯಾವ ರೀತಿ ಬದುಕಬಹುದು ಎಂದು ಜಗತ್ತಿಗೆ ಸಾರುವ ಹಲವಾರು ಕ್ಷೇತ್ರಗಳಿವೆ ಎಂದು ಅನನ್ಯಾ ಜೀವನ್ ಉಳ್ಳಾಲ್ ಹೇಳಿದರು.
ದೂರದ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿವಿಯಲ್ಲಿ ತುಳು ವಿಶ್ವವಿದ್ಯಾಲಯ ಇರುವಾಗ, ನಮ್ಮದೇ ಕರಾವಳಿಯಲ್ಲಿಯೂ ಪ್ರತ್ಯೇಕ ತುಳು ವಿಶ್ವವಿದ್ಯಾಲಯದ ಅಗತ್ಯವಿದೆ ಎಂದರು.