ETV Bharat / state

ರಾಜ್ಯಮಟ್ಟದ ಕರ್ನಾಟಕ ಸೌಂದರ್ಯ ಸ್ಪರ್ಧೆ: ಕಿಂಜಲ್​ಗೆ ಮಿಸ್ ಕರ್ನಾಟಕ ಕಿರೀಟ - ರಾಜ್ಯಮಟ್ಟದ ಕರ್ನಾಟಕ ಸೌಂದರ್ಯ ಸ್ಪರ್ಧೆ: ಕಿಂಜಲ್​ಗೆ ಮಿಸ್ ಕರ್ನಾಟಕ ಕಿರೀಟ

ಮೂಡಬಿದ್ರೆಯ ಕನ್ನಡ ಭವನದಲ್ಲಿ ದೀಪಕ್ ಶೆಟ್ಟಿರವರು ಯೂನಿಕ್ ಫ್ಯಾಶನ್ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ಮಿಸ್ಟರ್, ಮಿಸ್, ಟೀಮ್ ಕರ್ನಾಟಕ ಸ್ಪರ್ಧೆಯ ಮಿಸ್ ವಿಭಾಗದಲ್ಲಿ ಕಿಂಜಲ್‌ರವರು ಪ್ರತಿಷ್ಠಿತ ಟೈಟಲ್​ನ್ನು ತಮ್ಮದಾಗಿಸಿ ಕೊಂಡಿದ್ದಾರೆ..

Kinjal Miss Karnataka
ಕಿಂಜಲ್‌ ಮಿಸ್ ಕರ್ನಾಟಕ
author img

By

Published : Feb 25, 2022, 9:27 PM IST

ಪುತ್ತೂರು: ಸೌಂದರ್ಯವರ್ಧಕ ಕ್ಷೇತ್ರವೆನಿಸಿದ ಮಾಡೆಲಿಂಗ್ ಕ್ಷೇತ್ರಕ್ಕೆ ಹುಡುಗರು, ಹುಡುಗಿಯರು ಫಿದಾ ಆಗುವುದು ಸಹಜ. ಈ ಮಾಡೆಲಿಂಗ್ ಕ್ಷೇತ್ರವು ಹಲವರು ಪ್ರತಿಭಾವಂತರನ್ನು ಕೈ ಬೀಸಿ ಕರೆಯುತ್ತಿದೆ. ಈ ನಿಟ್ಟಿನಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಯುವತಿಯೊಬ್ಬಳು ಚೊಚ್ಚಲ ಪ್ರಯತ್ನದಲ್ಲಿಯೇ ಸೈ ಎನಿಸಿಕೊಂಡ ಬಾಲೆಯಾಗಿದ್ದು, ಪ್ರತಿಷ್ಠಿತ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಿಂಜಲ್‌ ಮಿಸ್ ಕರ್ನಾಟಕ

ಫೆ.20 ರಂದು ಮೂಡಬಿದ್ರೆಯ ಕನ್ನಡ ಭವನದಲ್ಲಿ ದೀಪಕ್ ಶೆಟ್ಟಿರವರು ಯೂನಿಕ್ ಫ್ಯಾಷನ್ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ಮಿಸ್ಟರ್, ಮಿಸ್, ಟೀಮ್ ಕರ್ನಾಟಕ ಸ್ಪರ್ಧೆಯ ಮಿಸ್ ವಿಭಾಗದಲ್ಲಿ ಕಿಂಜಲ್‌ರವರು ಪ್ರತಿಷ್ಠಿತ ಟೈಟಲ್​ನ್ನು ತಮ್ಮದಾಗಿಸಿ ಫಿಲೋಮಿನಾ ಕಾಲೇಜಿಗೆ ಮಾತ್ರವಲ್ಲ, ಪುತ್ತೂರಿಗೂ ಹೆಸರು ತಂದಿರುತ್ತಾರೆ.

ಈ ಸ್ಪರ್ಧೆಯಲ್ಲಿನ ಅಂತಿಮ ಸುತ್ತಿನಲ್ಲಿ ನಾಲ್ಕು ಮಂದಿ ಸ್ಪರ್ಧಿಗಳಿದ್ದು, ಅಂತಿಮವಾಗಿ ಕಿಂಜಲ್‌ರವರು ಉಳಿದ ಮೂವರನ್ನು ಹಿಂದಿಕ್ಕಿ ತೀರ್ಪುಗಾರರ ಮೆಚ್ಚುಗೆ ಗಳಿಸಿ ಚಾಂಪಿಯನ್ ಆಗುವುದರೊಂದಿಗೆ ಸೌಂದರ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

ದರ್ಬೆ ಇನ್‌ಫಿನಿಟಿ ಬ್ಯೂಟಿ ಪಾರ್ಲರ್‌ನ ಪೋಸ್ಟರ್‌ವೊಂದಕ್ಕೆ ರೂಪದರ್ಶಿಯಾಗಿಯೂ ಕಿಂಜಲ್‌ರವರು ಪಾತ್ರ ವಹಿಸಿದ್ದರು. ಬಹುಮುಖ ಪ್ರತಿಭೆಯಾಗಿರುವ ಕಿಂಜಲ್‌ರವರು ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿಯೂ ಒಲವು ಹೊಂದಿರುತ್ತಾರೆ. ಮಾತ್ರವಲ್ಲದೇ ಆಲ್ಬಂ ಸಾಂಗ್‌ಗೆ ಹೆಜ್ಜೆಯಿರಿಸಲು ಅವಕಾಶ ಸಿಕ್ಕರೆ ಭಾಗವಹಿಸಲು ಸಿದ್ಧ. ಭವಿಷ್ಯದಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುವ ಕನಸಿನೊಂದಿಗೆ ಮಾಡೆಲಿಂಗ್ ಕ್ಷೇತ್ರವನ್ನು ಫ್ಯಾಶನ್ ಆಗಿ ಮುಂದುವರೆಸಲು ಇಚ್ಛಿಸುತ್ತೇನೆ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುವ ಹೆಬ್ಬಯಕೆಯೂ ಇದೆ ಎಂದು ಕಿಂಜಲ್‌ರವರು ಈ ಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಸಿಲುಕಿದ ಬೀದರ್​ನ ವಿದ್ಯಾರ್ಥಿಗಳು.. ಪೋಷಕರಲ್ಲಿ ಹೆಚ್ಚಿದ ಭೀತಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.