ಮಂಗಳೂರು: ನಗರದ ತೋಟ ಬೆಂಗ್ರೆ ಪರಿಸರದಿಂದ ವಿದ್ಯಾರ್ಥಿಗಳು ಬೋಟ್ ಏರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಆಗಮಿಸಿದ್ರು.
ತೋಟ ಬೆಂಗ್ರೆಯಲ್ಲಿರುವ ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯುತ್ತಿದ್ದಾರೆ. ಟ್ರಾಲ್ ಬೋಟ್ ಏರಿ ಬೆಳ್ಳಂಬೆಳಗ್ಗೆ ಪ್ರಯಾಣ ಬೆಳೆಸಿದ ವಿದ್ಯಾರ್ಥಿಗಳು ನಗರದ ಶಾಲೆಗಳಲ್ಲಿ ನಡೆಯುವ ಪರೀಕ್ಷೆಗೆ ಹಾಜರಾಗಿದ್ದಾರೆ. ಬೆಂಗ್ರೆ ಪರಿಸರವು ನಗರ ಪ್ರದೇಶದಿಂದ ಬೇರ್ಪಟ್ಟಿರುವ ನೀರಿನ ಮಧ್ಯೆ ಇರುವ ಊರು. ಹೀಗಾಗಿ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ರಸ್ತೆ ಮಾರ್ಗವನ್ನು ಸುತ್ತುಬಳಸಿ ಬರೋದನ್ನು ತಪ್ಪಿಸಲು ವಿದ್ಯಾರ್ಥಿಗಳು ಬೋಟ್ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.
ಬೋಟ್ ಪ್ರಯಾಣದ ಬಳಿಕ ಆಟೋದಲ್ಲಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ತೆರಳಿದರು.