ETV Bharat / state

ಜೂನ್​​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ: ಪೂರ್ಣಗೊಳ್ಳದ ಸಿಲೆಬಸ್, ಪರೀಕ್ಷೆಗೆ ಸಿದ್ಧತೆ - Syllabus are not completed students in problem

ಕೊರೊನಾ ಕಾರಣದಿಂದ 2020 - 21ರ ಶೈಕ್ಷಣಿಕ ವರ್ಷ ಗೊಂದಲದಗೂಡಾಗಿತ್ತು. ಈ ಬಾರಿ ಎಸ್​ಎಸ್​ಎಲ್​ಸಿ ವರ್ಷವನ್ನು ಪೂರ್ಣ ಮಾಡಬೇಕಾದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.70ರಷ್ಟು ಸಿಲೆಬಸ್​​ ಇನ್ನೂ ಪೂರ್ಣವಾಗಿಲ್ಲ. ಈ ಹಿಂದಿನ ವರ್ಷದಲ್ಲಿ ಫೆಬ್ರವರಿ ತಿಂಗಳಲ್ಲಿ ಸಿಲೆಬಸ್ ಪೂರ್ಣಗೊಂಡು ವಿದ್ಯಾರ್ಥಿಗಳು ಮರುಮನನದಲ್ಲಿ ತೊಡಗಿಕೊಂಡಿದ್ದರು. ಆದರೆ, ಇದೀಗ ನೀಡಲಾಗಿರುವ ಸಿಲೆಬಸ್ ಪೂರ್ಣಗೊಂಡಿಲ್ಲವಾಗಿದ್ದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜೂನ್​​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ
ಜೂನ್​​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ
author img

By

Published : Mar 1, 2021, 4:51 PM IST

Updated : Mar 1, 2021, 5:31 PM IST

ಮಂಗಳೂರು: ಎಸ್​ಎಸ್ಎಲ್​ಸಿ ಪರೀಕ್ಷೆ ಬರೆಯುವುದು ಈ ವರ್ಷ ವಿದ್ಯಾರ್ಥಿಗಳಿಗೆ ಚಾಲೆಂಜ್ ಆಗಿದೆ. ಕೊರೊನಾ ಕಾರಣದಿಂದ ಪಠ್ಯಕ್ರಮ ಪೂರ್ಣಗೊಳ್ಳದೇ ಇದ್ದರೂ, ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಕೊರೊನಾ ಕಾರಣದಿಂದ 2020-21ರ ಶೈಕ್ಷಣಿಕ ವರ್ಷ ಗೊಂದಲದ ಗೂಡಾಗಿತ್ತು. ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಏನು ಮಾಡುವುದು ಎಂಬುದನ್ನು ಸರಿಯಾಗಿ ನಿರ್ಧರಿಸಲು ಆಡಳಿತ ವರ್ಗಕ್ಕೆ ಸಾಧ್ಯವಾಗಿರಲಿಲ್ಲ. ಇದರ ನಡುವೆ ಈ ಬಾರಿ ಎಸ್​ಎಸ್​ಎಲ್​ಸಿ ವರ್ಷ ಪೂರ್ಣ ಮಾಡಬೇಕಾದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು, ಡಿಸೆಂಬರ್​ನಿಂದ ಆಫ್ ಲೈನ್ ತರಗತಿಗಳನ್ನು ಆರಂಭಿಸಲಾಗಿತ್ತು.

ಜೂನ್​​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ

ಈಗಾಗಲೇ ಶಿಕ್ಷಣ ಇಲಾಖೆ ಎಸ್​ಎಸ್​ಎಲ್​ಸಿಯ ಶೇ.30 ರಷ್ಟು ಪಠ್ಯಕ್ರಮ ಕಡಿತಗೊಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.70ರಷ್ಟು ಸಿಲೆಬಸ್​​ ಇನ್ನೂ ಪೂರ್ಣವಾಗಿಲ್ಲ. ಈ ಹಿಂದಿನ ವರ್ಷಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಸಿಲೆಬಸ್ ಪೂರ್ಣಗೊಂಡು ವಿದ್ಯಾರ್ಥಿಗಳು ಮರು ಮನನದಲ್ಲಿ ತೊಡಗಿಕೊಂಡಿದ್ದರು. ಆದರೆ, ಇದೀಗ ನೀಡಲಾಗಿರುವ ಸಿಲೆಬಸ್ ಪೂರ್ಣಗೊಂಡಿಲ್ಲ. ಈ ಬಾರಿ ಪರೀಕ್ಷೆ ಜೂನ್​ನಲ್ಲಿ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ಓದಿ:ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಪೂರ್ಣಗೊಳ್ಳದ ಪಠ್ಯಕ್ರಮ: ದಾವಣಗೆರೆ ವಿದ್ಯಾರ್ಥಿಗಳ ಕಲಿಕೆಗೆ ಒತ್ತು

ಮಂಗಳೂರಿನ ಪಾಂಡೇಶ್ವರ ಓಲ್ಡ್ ಕೆಂಟ್​​ನಲ್ಲಿರುವ ಕೇರಳ ಸಮಾಜಂ ಫ್ರೌಢಶಾಲೆಯಲ್ಲಿ ಈಗಾಗಲೇ ನೀಡಲಾಗಿರುವ ಸಿಲೆಬಸ್​ಗಳು ಬಹುತೇಕ ಪೂರ್ಣಗೊಂಡಿದೆ. ವಿದ್ಯಾರ್ಥಿಗಳು ಜೂನ್​ನಲ್ಲಿ ಬರುವ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಸವಾಲಿನ ವರ್ಷವಾಗಿರುವುದರಿಂದ ಶಿಕ್ಷಕರು ನೀಡುವ ಮಾರ್ಗದರ್ಶನ ಜೊತೆಗೆ ಹೆಚ್ಚು ಸಮಯ ಕಲಿಕೆಗಾಗಿ ವಿದ್ಯಾರ್ಥಿಗಳು ಮೀಸಲಿರಿಸಿದ್ದಾರೆ. ಈ ಬಾರಿಯು ಶೇ.100 ಫಲಿತಾಂಶ ಬರಲಿದೆ ಎಂಬ ವಿಶ್ವಾಸವನ್ನು ಶಾಲಾ ಮುಖ್ಯೋಪಾಧ್ಯಾಯ ಹೊಂದಿದ್ದಾರೆ.

ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಎಸ್ಎಸ್​ಎಲ್​ಸಿಗೆ ಸಿಲೆಬಸ್ ಶೇ.30ರಷ್ಟು ಕಡಿತಗೊಳಿಸಲಾಗಿದ್ದು, ಮೇ.15 ರೊಳಗೆ ಎಲ್ಲ ಕಡೆ ಸಿಲೆಬಸ್ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇದರ ನಡುವೆ ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಫಲಿತಾಂಶ ನೀಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಲೆಬಸ್ ಪೂರ್ಣಗೊಳ್ಳುವ ಹಂತ ತಲುಪಿದ್ದು, ವಿದ್ಯಾರ್ಥಿಗಳು ರಿವಿಸನ್​ನತ್ತ ಗಮನ ಹರಿಸಿದ್ದಾರೆ.

Last Updated : Mar 1, 2021, 5:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.