ETV Bharat / state

ಜನಾರ್ದನ ಪೂಜಾರಿ ಶೀಘ್ರ ಗುಣಮುಖರಾಗುವಂತೆ ಪುತ್ತೂರು ಬ್ಲಾಕ್​ ಕಾಂಗ್ರೆಸ್​​​ನಿಂದ ವಿಶೇಷ ಪೂಜೆ

author img

By

Published : Jul 8, 2020, 4:48 PM IST

ಕೊರೊನಾ ಸೋಂಕು ಇದೀಗ ಜನಪ್ರತಿನಿಧಿಗಳಿಗೂ ಹಬ್ಬುತ್ತಿದ್ದು, ಮೊನ್ನೆಯಷ್ಟೇ ಕಾಂಗ್ರೆಸ್ ಮಾಜಿ ಸಚಿವ ಜನಾರ್ದನ ಪೂಜಾರಿಗೂ ತಗುಲಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಪುತ್ತೂರು ಬ್ಲಾಕ್​ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಗಿದೆ.

Special worship from the Puttur Block Congress for Janardhan Poojary speedy recovery
ಜನಾರ್ದನ ಪೂಜಾರಿ ಶೀಘ್ರ ಗುಣಮುಖರಾಗುವಂತೆ ಪುತ್ತೂರು ಬ್ಲಾಕ್​ ಕಾಂಗ್ರೆಸ್​​​ನಿಂದ ವಿಶೇಷ ಪೂಜೆ

ಮಂಗಳೂರು (ದ.ಕ): ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ‌ ಸಚಿವ ಬಿ.ಜನಾರ್ದನ ಪೂಜಾರಿಯವರು ಶೀಘ್ರ ಗುಣಮುಖರಾಗಲೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಮತ್ತು ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್​ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ದಂಪತಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ರಾಜ್ಯದ ಕಾರಣಿಕ ಕ್ಷೇತ್ರವೆನಿಸಿರುವ ಪುತ್ತೂರು ತಾಲೂಕಿನ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ ನಡೆಸಿ ಮೃತ್ಯುಂಜಯ ಜಪ ಪಠಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ‌ ನಿಕಟಪೂರ್ವ ಅಧ್ಯಕ್ಷ ದಿವ್ಯನಾಥ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಪರಮೇಶ್ವರ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.