ಮಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಊರಿಗೆ ಬರಲು ಬಸ್ಸು, ರೈಲುಗಳಲ್ಲಿ ಟಿಕೆಟು ಸಿಗುತ್ತಿಲ್ಲ ಎಂಬ ಸಮಸ್ಯೆಯಲ್ಲಿದ್ದೀರಾ? ಹಾಗಾದರೆ ಚಿಂತಿಸಬೇಡಿ. ರೈಲ್ವೆ ಇಲಾಖೆಯು ಹಬ್ಬದ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲು ಓಡಿಸುತ್ತಿದೆ. ವೇಳಾಪಟ್ಟಿ ಇಂತಿದೆ.
- ದಿನಾಂಕ 10/11/2023 ಶುಕ್ರವಾರ ರೈಲು ಸಂಖ್ಯೆ 07303 ಮೈಸೂರು ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ಮೈಸೂರಿನಿಂದ ರಾತ್ರಿ 8:30ಕ್ಕೆ ಹೊರಟು ರಾತ್ರಿ 11:25ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಅಂದರೆ ದಿನಾಂಕ 11/11/2023 ಶನಿವಾರದಂದು ಬೆಳಗ್ಗೆ 9:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
- ದಿನಾಂಕ 14/11/2023 ಬುಧವಾರ ರೈಲು ಸಂಖ್ಯೆ 07304 ಮಂಗಳೂರು ಜಂಕ್ಷನ್-ಮೈಸೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳೂರು ಜಂಕ್ಷನ್‌ನಿಂದ ಸಂಜೆ 5:15ಕ್ಕೆ ಹೊರಟು ಮರುದಿನ ಬೆಳಗ್ಗೆ 3:45ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ಬೆಳಗ್ಗೆ 3:50ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ರೈಲಿಗೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಯಶವಂತಪುರ, ಬೆಂಗಳೂರು, ಕೆಂಗೇರಿ, ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.
ಈ ರೈಲಿನಲ್ಲಿ ಜನರಲ್, ಸ್ಲೀಪರ್ ಕ್ಲಾಸ್, 3 ಟೈರ್ ಎಸಿ, 2 ಟೈರ್ ಎಸಿ ಹಾಗೂ ಪ್ರಥಮ ದರ್ಜೆಯ ಕ್ಯಾಬಿಪ್ ಕೋಚ್ಗಳು ಇರಲಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಊರಿಗೆ ಬರಲು ಆಗುತ್ತಿಲ್ಲ ಎಂಬ ಸಮಸ್ಯೆಗೆ ಸಿಲುಕಿದ್ದರೆ ಈ ಕೂಡಲೇ ಈ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿ ಹಾಗೂ ಉಳಿದವರಿಗೆ ಈ ಮಾಹಿತಿ ಹಂಚಿ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ತಂಡ ಮನವಿ ಮಾಡಿದೆ.
ನಾಗರಕೋಯಿಲ್ ಜಂಕ್ಷನ್-ಮಂಗಳೂರು ಜಂಕ್ಷನ್-ತಾಂಬರಂ ವಿಭಾಗಗಳಲ್ಲಿ ದಕ್ಷಿಣ ರೈಲ್ವೆಯಿಂದ ವಿಶೇಷ ರೈಲುಗಳು:
- ರೈಲು ಸಂಖ್ಯೆ 06062 ನಾಗರ್‌ಕೋಯಿಲ್ ಜಂಕ್ಷನ್-ಮಂಗಳೂರು ಜಂಕ್ಷನ್ ಶನಿವಾರ (ನವೆಂಬರ್ 11, 18, ಮತ್ತು 25) ಮಧ್ಯಾಹ್ನ 2:45ಕ್ಕೆ ನಾಗರ್‌ಕೋಯಿಲ್‌ನಿಂದ ಹೊರಟು ಮರುದಿನ ಬೆಳಿಗ್ಗೆ 5:15 ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪುತ್ತದೆ.
- ರೈಲು ಸಂಖ್ಯೆ 06063 ಮಂಗಳೂರು ಜಂಕ್ಷನ್-ತಾಂಬರಂ ವಿಶೇಷ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಭಾನುವಾರ (ನವೆಂಬರ್ 12, 19, ಮತ್ತು 26) ಬೆಳಿಗ್ಗೆ 10 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5:10ಕ್ಕೆ ತಾಂಬರಂ ತಲುಪುತ್ತದೆ. ತಾಂಬರಂ-ಮಂಗಳೂರು ಜಂಕ್ಷನ್-ತಾಂಬರಂ ನಡುವೆ ಮೂರು ಸುತ್ತಿನ ಪ್ರಯಾಣಕ್ಕಾಗಿ ಈ ರೈಲು ಸೇವೆಗಳನ್ನು ಮಾಡಲಾಗಿದೆ.
- ರೈಲು ಸಂಖ್ಯೆ 06064 ತಾಂಬರಂ-ಮಂಗಳೂರು ಜಂಕ್ಷನ್ ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ಶುಕ್ರವಾರದಂದು (ನವೆಂಬರ್ 10, 17, ಮತ್ತು 24) ಮಧ್ಯಾಹ್ನ 1.30 ಕ್ಕೆ ತಾಂಬರಂನಿಂದ ಹೊರಟು ಮರುದಿನ ಬೆಳಿಗ್ಗೆ 6:20 ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ.
- ರೈಲು ಸಂಖ್ಯೆ 06065 ಮಂಗಳೂರು ಜಂಕ್ಷನ್-ತಾಂಬರಂ ಹಬ್ಬದ ವಿಶೇಷ ದರದ ವಿಶೇಷ ಎಕ್ಸ್‌ಪ್ರೆಸ್ ನಾಗರಕೋಯಿಲ್ ಮೂಲಕ ಮಂಗಳೂರಿನಿಂದ ಶನಿವಾರ (ನವೆಂಬರ್ 11, 18, ಮತ್ತು 25) ಬೆಳಿಗ್ಗೆ 10 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 1:15ಕ್ಕೆ ತಾಂಬರಂ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ದೀಪಾವಳಿ ಸ್ಪೆಷಲ್ : ಭಗತ್ ಕಿ ಕೋಠಿ- ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ರೈಲು