ETV Bharat / state

ಇಂಗ್ಲಿಷ್ ಯಕ್ಷಗಾನದಲ್ಲಿ ವಿಶೇಷ ಪ್ರಯೋಗ.. ಒಂದೇ ವೇದಿಕೆಯಲ್ಲಿ ಐದು ಪ್ರಸಂಗ, ಹೊಸಬರ ರಂಗಪ್ರವೇಶ - ತುಳು ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

ದಿವಂಗತ ಪಿ.ವಿ ಐತಾಳ್ ಅವರ ಜನ್ಮಶತಾಬ್ದಿ ಪ್ರಯುಕ್ತ ಇಂಗ್ಲಿಷ್ ಯಕ್ಷಗಾನದಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಯಕ್ಷಗಾನದಲ್ಲಿ ಪಿ ವಿ ಐತಾಳರು ರಚಿಸಿದ ಐದು ಯಕ್ಷಗಾನದ ತುಣುಕುಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.

ಇಂಗ್ಲಿಷ್ ಯಕ್ಷಗಾನದಲ್ಲಿ ವಿಶೇಷ ಪ್ರಯೋಗ
ಇಂಗ್ಲಿಷ್ ಯಕ್ಷಗಾನದಲ್ಲಿ ವಿಶೇಷ ಪ್ರಯೋಗ
author img

By

Published : Jun 20, 2022, 1:04 PM IST

ಮಂಗಳೂರು: ಕರಾವಳಿ ಪ್ರಸಿದ್ಧ ಪುರಾತನ ಕಲೆಯಾದ ಯಕ್ಷಗಾನ ನೂರಾರು ವರ್ಷಗಳಿಂದ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಂಡಿದೆ. ನಾಲ್ಕು ದಶಕಗಳ ಹಿಂದೆಯೇ ಆರಂಭವಾದ ಇಂಗ್ಲಿಷ್ ಯಕ್ಷಗಾನದಲ್ಲಿ ಇದೀಗ ಹೊಸ ಪ್ರಯೋಗ ಮಾಡಲಾಗಿದೆ.

ಕನ್ನಡ ಮತ್ತು ತುಳು ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಶ್ರೀಮಂತ ಕಲಾ ಪ್ರಕಾರವಾದ ಯಕ್ಷಗಾನದ ಕಲೆಯು ಕನ್ನಡ ಮತ್ತು ತುಳು ಭಾಷೆ ಗೊತ್ತಿಲ್ಲದವರಿಗೂ ಗೊತ್ತಾಗಬೇಕೆಂಬ ನಿಟ್ಟಿನಲ್ಲಿ ದಿವಂಗತ ಪಿ.ವಿ ಐತಾಳ್ ಅವರು ನಾಲ್ಕು ದಶಕಗಳ ಹಿಂದೆಯೆ ಪ್ರಯೋಗ ನಡೆಸಿದ್ದರು. 1981ರಲ್ಲಿ ಬ್ರಹ್ಮ ಕಪಾಲ ಎಂಬ ಯಕ್ಷಗಾನ ಪ್ರಸಂಗವನ್ನು ಅವರು ಇಂಗ್ಲಿಷ್ ಭಾಷೆಯಲ್ಲಿ ತಯಾರಿಸಿದ್ದರು. ಅದಕ್ಕೆ ಸಿಕ್ಕಿದ್ದ ಸ್ಪಂದನೆಯಿಂದ ಅವರು ಒಟ್ಟು 5 ಇಂಗ್ಲಿಷ್ ಯಕ್ಷಗಾನ ಪ್ರಸಂಗ ರಚನೆ ಮಾಡಿದ್ದರು.

ಇಂಗ್ಲಿಷ್ ಯಕ್ಷಗಾನದಲ್ಲಿ ವಿಶೇಷ ಪ್ರಯೋಗ

1981 ರಲ್ಲಿ ಬ್ರಹ್ಮ ಕಪಾಲ, 1983 ರಲ್ಲಿ ದಕ್ಷ ಯಜ್ಞ ಗಿರಿಜಾ ಕಲ್ಯಾಣ, 1987 ರಲ್ಲಿ ಶ್ರೀ ಕೃಷ್ಣ ಪಾರಿಜಾತ ನರಕಾಸುರ ಮೋಕ್ಷ, 1991 ರಲ್ಲಿ ಸೈರೇಂದ್ರ ಕೀಚಕ ಎಂಬ ಪ್ರಸಂಗವನ್ನು ಪಿ ವಿ ಐತಾಳರು ಇಂಗ್ಲಿಷ್ ಮಾತುಗಾರಿಕೆಯಲ್ಲಿ ಬರೆದು ಅದರ ಪ್ರದರ್ಶನ ನಡೆದಿತ್ತು. ವಸ್ತ್ರಾಪಹರಣ ಎಂಬ ಕಥೆಯನ್ನು ಬರೆಯುವ ಸಂದರ್ಭದಲ್ಲಿ ಅವರು ದೈವಾಧೀನರಾಗಿದ್ದು, ಸಹಕಲಾವಿದರು, ಕುಟುಂಬಿಕರು ಸೇರಿ ಅದನ್ನು ಮುಂದುವರಿಸಿದ್ದರು. ಇದೆಲ್ಲ ಯಕ್ಷಗಾನಗಳು ರಾಜ್ಯ- ಹೊರರಾಜ್ಯಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿತ್ತು.

ಇದೀಗ ದಿವಂಗತ ಪಿ.ವಿ ಐತಾಳ್ ಅವರ ಜನ್ಮಶತಾಬ್ದಿ ಪ್ರಯುಕ್ತ ಇಂಗ್ಲಿಷ್ ಯಕ್ಷಗಾನದಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಯಕ್ಷಗಾನದಲ್ಲಿ ಪಿ ವಿ ಐತಾಳರು ರಚಿಸಿದ ಐದು ಯಕ್ಷಗಾನದ ತುಣುಕುಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುವ ಪ್ರಯೋಗ ಯಶಸ್ವಿಯಾಗಿ ಮಾಡಲಾಯಿತು.

ಕನ್ನಡ ಮತ್ತು ತುಳು ಭಾಷೆಯಲ್ಲಿ ನೂರಾರು ಕಲಾವಿದರು ಯಕ್ಷಗಾನ ಪ್ರದರ್ಶನ ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ. ಇವರಿಗೆ ಇಂಗ್ಲಿಷ್​ನಲ್ಲಿ ಮಾತುಗಾರಿಕೆ ನಡೆಸುವುದು ಸವಾಲಿನ ಕೆಲಸ. ಈಗಾಗಲೇ ಹಲವು ಕಲಾವಿದರು ಇಂಗ್ಲಿಷ್ ಯಕ್ಷಗಾನ ಪ್ರದರ್ಶನದ ಮಾತುಗಾರಿಕೆ ಕಲಿತು ಪ್ರೇಕ್ಷಕರ ಮನ ಮೆಚ್ಚಿದ್ದಾರೆ. ಇದೀಗ ಮೂರನೇ ತಲೆಮಾರಿನ ಹೊಸ ಕಲಾವಿದರು ಯಕ್ಷಗಾನದಲ್ಲಿ ಪಾತ್ರ ನಿರ್ವಹಣೆ ಮಾಡಲು ಮುಂದೆ ಬಂದಿದ್ದಾರೆ. ಐದು ಇಂಗ್ಲಿಷ್ ಯಕ್ಷಗಾನದ ತುಣುಕಿನ ಪ್ರದರ್ಶನದಲ್ಲಿ ಸುಮಾರು 40 ಕಲಾವಿದರು ಪಾತ್ರ ನಿರ್ವಹಣೆ ಮಾಡಿದ್ದು, ಇದರಲ್ಲಿ ಅರ್ಧದಷ್ಟು ಮಂದಿ ಕಲಾವಿದರು ಇಂಗ್ಲಿಷ್ ಯಕ್ಷಗಾನಕ್ಕೆ ಹೊಸಬರು. ಇವರ ಪ್ರವೇಶದಿಂದ ಇಂಗ್ಲಿಷ್ ಯಕ್ಷಗಾನದಲ್ಲಿ ಸೇವೆ ನೀಡುವ ಕಲಾವಿದರ ಕೊರತೆ ನೀಗಲಿದೆ.

ಇಂಗ್ಲಿಷ್ ಯಕ್ಷಗಾನ ಎಂಬುದು ಕನ್ನಡ ಮತ್ತು ತುಳು ಭಾಷೆಯ ಶ್ರೀಮಂತ ಕಲಾ‌ಪ್ರಕಾರವನ್ನು ದೊಡ್ಡ ವರ್ಗಕ್ಕೆ ತಲುಪಿಸುವ ಯತ್ನ. ಈ ಕಲೆಯನ್ನು ಕನ್ನಡ, ತುಳು ಬಾರದವರಲ್ಲೂ ತಲುಪಿಸುವ ಯತ್ನದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ವರ್ಷಾಂತ್ಯದ ವೇಳೆಗೆ ಇಡೀ ಭಾರತದಲ್ಲಿ ESI ಯೋಜನೆ ಸೇವೆಗಳು ಲಭ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.