ಮಂಗಳೂರು: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ನೆರೆ ಶ್ರಮದಾನ ನಡೆಯಿತು.
ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ಶ್ರಮದಾನ ನಡೆಯುತ್ತಿದ್ದು, ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸರ ಮುಂದಾಳತ್ವದಲ್ಲಿ ಚಾರ್ಮಾಡಿ ಗ್ರಾಮದ ಹೊಸ್ಮಠ ಪರ್ಲ್ಲಾನಿ ಎಂಬ ನೆರೆ ಪೀಡಿತ ಪ್ರದೇಶದಲ್ಲಿ ಈ ಶ್ರಮದಾನ ನಡೆಯುತ್ತಿದೆ.
ಮನೆಯ ಹೊರಗೆ ಬಿದ್ದಿರುವ ತ್ಯಾಜ್ಯ ವಿಲೇವಾರಿ, ಮಣ್ಣು ತೆರವು ಕಾರ್ಯಾಚರಣೆ ಹಾಗೂ ಮನೆಯ ಒಳಗಡೆ ತುಂಬಿಕೊಂಡಿರುವ ಕೆಸರು ಮಣ್ಣುಗಳನ್ನು ಸ್ವಚ್ಛಗೊಳಿಸುವ ಕಾರ್ಯವೂ ಶ್ರಮದಾನದ ಮೂಲಕ ನೆರವೇರಿತು.
ನಿನ್ನೆಯಿಂದ ಸುಮಾರು 50 ಮಂದಿಯಿಂದ ಶ್ರಮದಾನ ಕಾರ್ಯ ನಡೆಯುತ್ತಿದ್ದು, ನೆರೆಯಿಂದ ಕಳೆದುಕೊಂಡಿರುವ ಮನೆಗಳಿಗೆ ಬೇಕಾದ ಅಡುಗೆ ಪದಾರ್ಥಗಳ ವಿತರಣೆಯ ಕಾರ್ಯವೂ ನಡೆಯಿತು.