ಮಂಗಳೂರು: ನಗರದ ಮಲ್ಲೂರಿನ ಉದ್ದಬೆಟ್ಟುವಿನಲ್ಲಿ ಇತ್ತೀಚೆಗೆ ಕ್ವಾರೆಂಟೈನ್ನಲ್ಲಿ ಇರುವವರನ್ನು ಭೇಟಿ ಮಾಡಲು ತೆರಳಿದಾಗ ಹಲ್ಲೆಗೊಳಗಾದ ಆಶಾಕಾರ್ಯಕರ್ತೆ ವಸಂತಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೂರವಾಣಿ ಕರೆ ಮಾಡಿ ಸಾಂತ್ವನ ತಿಳಿಸಿ ಧೈರ್ಯ ತುಂಬಿದರು.
ಈ ಸಂದರ್ಭ ಅಂದಿನ ಘಟನೆಯ ಸಂಪೂರ್ಣ ವಿವರಗಳನ್ನು ಪಡೆದ ಅವರು, ಪೊಲೀಸರಿಗೆ ದೂರು ನೀಡಿರುವ ಬಗ್ಗೆ ವಿವರಣೆ ಪಡೆದರು. ಮುಂದೆಯೂ ಯಾವುದೇ ರೀತಿಯಲ್ಲಿ ತೊಂದರೆಗೊಳಗಾದರೆ ತಮ್ಮ ಕಚೇರಿಗೆ ಕರೆ ಮಾಡಲು ತಿಳಿಸಿದರು. ಅಲ್ಲದೆ ನಿರಾತಂಕವಾಗಿ ಮನೆ ಮನೆ ಭೇಟಿಯನ್ನು ಮುಂದುವರಿಸಲು ಸೂಚನೆ ನೀಡಿ ಅಭಿನಂದನೆ ತಿಳಿಸಿದರು.
ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಗೆ ಧೈರ್ಯ ತುಂಬಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉದ್ದಬೆಟ್ಟುವಿನಲ್ಲಿ ಇತ್ತೀಚೆಗೆ ಕ್ವಾರೆಂಟೈನ್ನಲ್ಲದ್ದವರ ಭೇಟಿಗೆ ತೆರಳಿದ್ದ ವೇಳೆ ಹಲ್ಲೆಗೊಳಗಾಗಿದ್ದ ಆಶಾ ಕಾರ್ಯಕರ್ತೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ.