ಸುಳ್ಯ : ಕೊರೊನಾ ಹಿನ್ನೆಲೆ ಈ ಬಾರಿಯ ಕ್ರಿಸ್‍ಮಸ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಗಿದೆ.
ಕಳೆದ ಏಳೆಂಟು ತಿಂಗಳಿಂದ ಜನರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ಇದರ ನಡುವೆ ಹಬ್ಬ-ಹರಿದಿನಗಳು ನಡೆಯುತ್ತಿವೆ. ಅದರಂತೆ ಮಂಗಳೂರು, ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲಿನ ಎಲ್ಲಾ ಚರ್ಚ್ಗಳಲ್ಲಿ ಕ್ರಿಸ್‍ಮಸ್ ಆಚರಣೆ ಸಂಭ್ರಮದಿಂದ ಕೂಡಿತ್ತು.
ಬಿಷಪ್ ಸೇರಿದಂತೆ ಆಯಾ ಧರ್ಮ ಗುರುಗಳು ಚರ್ಚ್ಗಳಲ್ಲಿ ವಿಶೇಷ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಳೆದ ಬಾರಿಗೆ ಹೊಲಿಸದರೆ ಜಿಲ್ಲೆಯಲ್ಲಿ ಈ ಬಾರಿ ಸರಳವಾದ ಕ್ರಿಸ್‍ಮಸ್ ಸಂಭ್ರಮ ಕಂಡು ಬಂದಿತು.
ಓದಿ: ಹೊಸಪೇಟೆ : ಗ್ರಾಮ ಪಂಚಾಯತ್ ಅಭ್ಯರ್ಥಿ ಆತ್ಮಹತ್ಯೆಗೆ ಶರಣು
ನಿನ್ನೆ ರಾತ್ರಿ ಚರ್ಚ್ಗಳಲ್ಲಿ ಸಂಜೆ 4:30ರಿಂದ ರಾತ್ರಿ 10:30ರೊಳಗೆ ಪ್ರಾರ್ಥನೆಗಳನ್ನು ನಡೆದವು. ಮಕ್ಕಳು, ಯುವಕರು ಸೇರಿದಂತೆ ಎಲ್ಲಾ ಕ್ರೈಸ್ತ ಬಾಂಧವರು ಒಟ್ಟಾಗಿ ಕ್ರಿಸ್ತರ ಜನನ ಸಂದೇಶ ಸಾರುವ ಗೋದಲಿ ನಿರ್ಮಿಸಿ ಕ್ಯಾರಲ್ ಹಾಡುಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಚರ್ಚ್ಗಳಲ್ಲಿ ಮಾಸ್ಕ್ ಧರಿಸುವಿಕೆ,ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯಗೊಳಿಸಲಾಗಿತ್ತು.