ETV Bharat / state

ಫೋನ್​​​​ ಕದ್ದಾಲಿಕೆ ಪ್ರಕರಣ ಸುಪ್ರೀಂ ಜಡ್ಜ್​​​​ಗಳಿಂದ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ

author img

By

Published : Jul 23, 2021, 11:41 AM IST

ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಸರ್ಕಾರ ಫೋನ್​ ಕದ್ದಾಲಿಕೆ ಮಾಡಿದೆ. ನನ್ನಲ್ಲಿ ಮೊಬೈಲ್ ಇಲ್ಲ. ನನ್ನ ಆಪ್ತ ಸಹಾಯಕ ವೆಂಕಟೇಶ್ ಅವರ ಫೋನ್​ ಬಳಸುತ್ತೇನೆ. ಅದನ್ನು ಕದ್ದಾಲಿಸಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

siddaramaiah
ವಿಪಕ್ಷ ನಾಯಕ ಸಿದ್ದರಾಮಯ್

ಮಂಗಳೂರು: ಸುಪ್ರೀಂಕೋರ್ಟ್, ಹೈಕೋರ್ಟ್ ನ್ಯಾಯಾಧೀಶರ ಫೋನನ್ನು ಸಹ ಕದ್ದಾಲಿಕೆಯನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದು ದೇಶದ್ರೋಹ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಸರ್ಕಾರ ಫೋನ್​​​ ಕದ್ದಾಲಿಕೆ ಮಾಡಿದೆ. ನನ್ನಲ್ಲಿ ಮೊಬೈಲ್ ಇಲ್ಲ. ನನ್ನ ಆಪ್ತ ಸಹಾಯಕ ವೆಂಕಟೇಶ್ ಅವರ ಫೋನ್​ ಬಳಸುತ್ತೇನೆ. ಅದನ್ನು ಕದ್ದಾಲಿಸಿದ್ದಾರೆ. ಕುಮಾರಸ್ವಾಮಿ, ಪರಮೇಶ್ವರ್ ಅವರ ಫೋನ್​ ಅನ್ನು ಕದ್ದಾಲಿಸಿ ಸಮ್ಮಿಶ್ರ ಸರ್ಕಾರ ಕೆಡವಿದ್ದಾರೆ. ಈ ಬಗ್ಗೆ ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಬೇಕು. ಈ ಸರ್ಕಾರಕ್ಕೆ ನೈತಿಕತೆಯಿಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಪಕ್ಷದಿಂದ ದಲಿತ ಸಿಎಂ ಮಾಡಲು ನನಗೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಹಲವು ಮಂದಿ ದಲಿತರು ಸಿಎಂ ಆಗಿದ್ದಾರೆ. ಬಿಜೆಪಿಯಲ್ಲಿ ಇದೀಗ ಸಿಎಂ ಸ್ಥಾನ ಖಾಲಿಯಾಗುತ್ತಿದೆ. ದಲಿತ ಸಿಎಂ ಮಾಡಲು ಇದೀಗ ನಳಿನ್ ಕುಮಾರ್ ಕಟೀಲ್ ಅವಕಾಶ ಸಿಕ್ಕಿದೆ. ಈಗ ಅವರು ದಲಿತ ಸಿಎಂ ಮಾಡಲಿ ಎಂದು ಸವಾಲೆಸೆದರು.

ಬಿಜೆಪಿಗೆ ವಲಸೆ ಹೋದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಈ ಬಗ್ಗೆ ನಾನು ವಿಧಾನಸಭೆಯಲ್ಲಿ ಹೇಳಿದ್ದೇನೆ. ಅದೇ ಹೇಳಿಕೆಗೆ ಈಗಲೂ ಬದ್ದನಿದ್ದೇನೆ ಎಂದರು. ರಾಹುಲ್ ಗಾಂಧಿ ಅವರು ಒಟ್ಟಾಗಿ ಕೆಲಸ ಮಾಡಲು ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ತೆಗೆದು ಕಾಂಗ್ರೆಸ್ ಗೆಲ್ಲಿಸಲು ಸೂಚಿಸಿದ್ದಾರೆ ಎಂದರು.

ಯಡಿಯೂರಪ್ಪ ಅವರು 2019ರಲ್ಲಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರವಾಹ ಸೃಷ್ಟಿಯಾಗಿತ್ತು‌. ಅದು ಆಗಿ ಎರಡು ವರ್ಷ ಆದರೂ ಅದರ ಪರಿಹಾರ ಇನ್ನೂ ನೀಡಿಲ್ಲ. ಈಗ ಮತ್ತೆ ಮಳೆ ಬಂದು ಜನರು ಕಷ್ಟದಲ್ಲಿದ್ದಾರೆ. ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು.

ಆದರೆ, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಹೊರಟಿದ್ದಾರೆ. ಯಾರನ್ನು ಬದಲಾಯಿಸಿದರೂ ಬಿಜೆಪಿ ಭ್ರಷ್ಟ ಸರ್ಕಾರವಾಗಿ ಇರುತ್ತದೆ. ಹೊಸತಾಗಿ ಬರುವವರು ಭ್ರಷ್ಟರಾಗಿಯೇ ಇರುತ್ತಾರೆ. ಬಿಜೆಪಿ ತೊಲಗಿದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು. ಅವರು ತಮ್ಮ ಅಭಿಪ್ರಾಯ ಹೇಳಬಹುದು. ಪಕ್ಷದ ಆಂತರಿಕ ವಿಚಾರದಲ್ಲಿ ಅವರು ಹಸ್ತಕ್ಷೇಪ ಮಾಡಬಾರದು ಎಂದರು.

ಯಡಿಯೂರಪ್ಪ ಅವರನ್ನು ಬದಲಾಯಿಸುತ್ತಾರೆ ಎಂದು ಹಿಂದೆಯೆ ಹೇಳಿದ್ದೆ. ಈಗ ಅದು ನಿಜವಾಗುತ್ತಿದೆ. ನನಗೆ ಅದರ ಬಗ್ಗೆ ಮಾಹಿತಿ ಇತ್ತು. ಸಮಯ ತೆಗೆದುಕೊಂಡು ಈಗ ಬದಲಾವಣೆ ಮಾಡುತ್ತಿದ್ದಾರೆ. ಹೊಸ ಸಿಎಂ ಯಾರು ಬರುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.