ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲೂಕಿನ ಜನತೆಗೆ ನೆರವಾಗುವ ದೃಷ್ಟಿಯಿಂದ ಸೇವಾ ಭಾರತಿ ಜೊತೆಗೂಡಿ ಕೋವಿಡ್-19 ಶ್ರಮಿಕ ಸ್ಪಂದನಾ ಕೇಂದ್ರ ಎಂಬ ವಾರ್ ರೂಮ್ ತೆರೆಯಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ತಾಲೂಕಿನ ಜನತೆ ಅಗತ್ಯ ನೆರವು ಪಡೆಯಬಹುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
![Belthangady](https://etvbharatimages.akamaized.net/etvbharat/prod-images/kn-mng-belthangadi2-shramikaspandanawarroom-vidiokac10018_05052021215943_0505f_1620232183_712.jpg)
ಉಜಿರೆಯ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಸೇವಾ ಭಾರತಿ ಮೂಲಕ ನಡೆಯುವ ವಾರ್ ರೂಮ್ ಸೇವಾ ಕಾರ್ಯಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕೋವಿಡ್-19 ತುರ್ತು ಸೇವಾ ಸಹಾಯವಾಣಿ ಮೂಲಕ ಕೋವಿಡ್ ಸೇವಾ ತಂಡವನ್ನು ಸಂಪರ್ಕಿಸಬಹುದಾಗಿದ್ದು, ಇದಕ್ಕಾಗಿ ಸ್ವಯಂಸೇವಕರನ್ನು ನೇಮಿಸಲಾಗಿದೆ. ಇದರಲ್ಲಿ ಸಹಾಯವಾಣಿ, ಆಸ್ಪತ್ರೆ ಮಾಹಿತಿ, ಆಯುಷ್ಮಾನ್ ಮಾಹಿತಿ, ಆ್ಯಂಬುಲೆನ್ಸ್, ವ್ಯಾಕ್ಸಿನೇಷನ್ ಸೇರಿದಂತೆ ಪ್ರತಿಯೊಂದರ ಮಾಹಿತಿ ಲಭ್ಯವಾಗಲಿದೆ ಎಂದರು.
ಇದೇ ವೇಳೆ ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಿ, ಸೇವಾ ಚಟುವಟಿಕೆಯ ಕುರಿತು ಸಲಹೆ ನೀಡಿದರು.
ಇದನ್ನೂ ಓದಿ: ಲೈಫ್ಲೈನ್ ಆಸ್ಪತ್ರೆಯಲ್ಲಿ ಐವರು ಸಾವು: ಪ್ರಕರಣದ ವರದಿ ನೀಡಲು ವಿಚಾರಣಾಧಿಕಾರಿಗಳ ನೇಮಕ