ETV Bharat / state

ಶೋಭಾ ಕರಂದ್ಲಾಜೆ ಟ್ವಿಟರ್​​ ಹ್ಯಾಕ್ ವಿಚಾರ ತನಿಖೆಯಾಗಲಿ: ಯು.ಟಿ.ಖಾದರ್ - ಶ್ರೀನಿವಾಸ ಪೂಜಾರಿ

ಶೋಭಾ ಕರಂದ್ಲಾಜೆ ಟ್ವಿಟರ್​ ಹ್ಯಾಕ್ ಆಗಿದೆ ಎಂದು ಕಾಂಗ್ರೆಸ್ ಮುಖಂಡರ ಮೇಲೆ ಕೇಸ್ ದಾಖಲಿಸಿರುವ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರ ಬೇಡ ಎಂದು ಶಾಸಕ ಖಾದರ್​​ ಹೇಳಿದ್ದಾರೆ.

Shobha tweet hack issue
ಶೋಭಾ ಟ್ವೀಟ್ ಹ್ಯಾಕ್ ವಿಚಾರ ತನಿಖೆಯಾಗಲಿ: ಖಾದರ್ ಹೇಳಿಕೆ
author img

By

Published : Jun 2, 2020, 10:49 PM IST

ಮಂಗಳೂರು : ಸಂಸದೆ ಶೋಭಾ ಕರಂದ್ಲಾಜೆ ಟ್ವಿಟರ್ ಹ್ಯಾಕ್ ಆಗಿದೆ ಎಂದು ಕಾಂಗ್ರೆಸ್ ಮುಖಂಡರ ಮೇಲೆ ಕೇಸ್ ದಾಖಲಿಸಿರುವ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರ ಬೇಡ. ಈ ಕುರಿತು ತನಿಖೆಯಾಗಲಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಳಿ ಶಾಸಕ ಖಾದರ್ ಹಾಗೂ ಕಾಂಗ್ರೆಸ್ ಮುಖಂಡರು ವಿನಂತಿಸಿದರು.

ಇತ್ತೀಚೆಗೆ ಪಾಣೆಮಂಗಳೂರಿನ ಗೂಡಿನಬಳಿ ನೇತ್ರಾವತಿ ನದಿಗೆ ಹಾರಿದ್ದ ಹಿಂದೂ ಯುವಕನನ್ನು ನಾಲ್ವರು ಮುಸ್ಲಿಂ ಯುವಕರು ರಕ್ಷಿಸಲು ಪ್ರಯತ್ನ ಪಟ್ಟರೂ, ಆತ ಮೃತಪಟ್ಟಿದ್ದ‌. ಈ ನಡುವೆ ಫೇಸ್​ಬುಕ್​​ನಲ್ಲಿ ಆ ಹಿಂದೂ ಯುವಕನ ಮರ್ಡರ್ ಆಗಿದೆ ಎಂಬ ಬರಹವೊಂದು ವೈರಲ್ ಆಗಿತ್ತು. ಈ ವಿಚಾರವಾಗಿ ಟ್ವಿಟರ್​ನಲ್ಲಿ ಮೂಲಕ ಜಿಹಾದಿಗಳಿಂದ ಹಿಂದೂ ಯುವಕನ ಕೊಲೆಯಾಗಿದೆ. ಈ ಬಗ್ಗೆ ಅಮಿತ್ ಶಾರಲ್ಲಿ ಮಾತನಾಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೆಸರಿನಲ್ಲಿ ಪೋಸ್ಟ್ ಆಗಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿ ಎಂದು ಮರುಟ್ವೀಟ್ ಮಾಡಿದ್ದೆವು.‌ ತಕ್ಷಣ ಶೋಭಾ ಕರಂದ್ಲಾಜೆ ಇದು ನಾನು ಟ್ವೀಟ್ ಮಾಡಿದ್ದಲ್ಲ. ಯಾರೋ ಹ್ಯಾಕ್ ಮಾಡಿ ಪೋಸ್ಟ್ ಮಾಡಿದ್ದಾರೆ ಅಂತ ಹೇಳಿದ್ದಾರೆ ಎಂದು ಖಾದರ್​​ ತಿಳಿಸಿದರು.

ನಮ್ಮವರ ಮೇಲೆ ವೃಥಾ ಆರೋಪ ಮಾಡಿ ಕೇಸ್ ದಾಖಲಿಸಿದ್ದಾರೆ. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಬೇಡ ಎಂದು ಖಾದರ್ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ವಿನಂತಿಸಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.