ಮಂಗಳೂರು: ಮಂಗಳೂರಿನ ಪಂಪ್ವೆಲ್ಗೆ ಮಹಾವೀರ ವೃತ್ತ ಎಂದು ಹೆಸರಿಡಲಾಗಿದೆ. ಪಂಪ್ವೆಲ್ ಪ್ಲೈ ಓವರ್ ಆಗುವುದಕ್ಕೆ ಮುಂಚೆ ಇಲ್ಲಿ ಬೃಹತ್ ಕಳಸ ಇತ್ತು. ಪಂಪ್ವೆಲ್ ಪ್ಲೈ ಓವರ್ ಆದ ಬಳಿಕ ಇದೀಗ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ಮುಂದಾಗಿದೆ. ಈ ಬಗ್ಗೆ ಕಳೆದ ತಿಂಗಳು ನಡೆದ ಪಾಲಿಕೆ ಸಭೆಯಲ್ಲಿ ಅನುಮೋದನೆಯನ್ನು ಪಡೆಯಲಾಗಿತ್ತು.
ಆದರೆ, ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯ ನಿರ್ಧಾರಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ನಿನ್ನೆ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ತನ್ನ ಆಕ್ಷೇಪವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ವಿಪಕ್ಷ ನಾಯಕ ನವೀನ್ ಡಿಸೋಜಾ ಅವರು ಪಂಪ್ವೆಲ್ನಲ್ಲಿ ಮಹಾವೀರ ವೃತ್ತ ಪ್ರಸಿದ್ದಿಯಾಗಿರುವಾಗ ಶಿವಾಜಿ ಪ್ರತಿಮೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕಯ್ಯಾರ ಕಿಂಞಣ್ಣ ರೈ ಹೆಸರಿಡಿ: ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅವರು ಕಯ್ಯಾರ ಕಿಂಞಣ್ಣ ರೈ ಅಥವಾ ಗರೋಡಿ ದೇವಸ್ಥಾನ ಸಮೀಪದಲ್ಲಿರುವುದರಿಂದ ಕೋಟಿ ಚೆನ್ನಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಿ. ಭಾವನೆಗಳ ಮೂಲಕ ಆಡಳಿತ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಕೊನೆಗೂ ಬಂದ್.. ಹೋರಾಟಗಾರರಿಂದ ಸಂಭ್ರಮಾಚರಣೆ, ಮೊಳಗಿತು ಕ್ರಾಂತಿಗೀತೆ