ಮಂಗಳೂರು: ನಗರದ ಕದ್ರಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಶತ್ರುಘ್ನ ಸಿನ್ಹಾರ ಚುನಾವಣಾ ಪ್ರಚಾರ ಭಾಷಣ ರದ್ದಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಖಾಲಿ ಕುರ್ಚಿಗಳೆದುರು ಭಾಷಣ ಮಾಡಬೇಕಾಯಿತು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬಿಹಾರದ ಬಿಟ್ನಾ ಸಾಹೀಬ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶತ್ರುಘ್ನಾ ಸಿನ್ಹಾ ಅವರು ಕದ್ರಿ ಮೈದಾನದಲ್ಲಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದರು. ಆದರೆ ಮುಡಿಪುವಿನಲ್ಲಿ ಚುನಾವಣಾ ಭಾಷಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ತಡವಾದ ಹಿನ್ನೆಲೆಯಲ್ಲಿ ಕದ್ರಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು.
ಇನ್ನು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಮೊಯ್ದಿನ್ ಬಾವಾ ಅವರು ಖಾಲಿ ಕುರ್ಚಿಗಳೆದುರು ಭಾಷಣ ಮಾಡುವಂತಾಯಿತು. ಶತ್ರುಘ್ನ ಸಿನ್ಹಾ ಅವರು ಬರುತ್ತಾರೆಂದು ಸಾಕಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದ ಜನರು ನಿರಾಶೆಯಿಂದ ಮನೆಗೆ ತೆರಳಿದರು.