ETV Bharat / state

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ನಾಟಿ ವೈದ್ಯನಿಗೆ ಜೈಲು ಶಿಕ್ಷೆ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ಸಾಬೀತಾಗಿದ್ದು, ಆರೋಪಿಗೆ ಮೂರು ವರ್ಷಗಳ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Sep 12, 2019, 9:40 PM IST

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ಸಾಬೀತಾಗಿದ್ದು, ಆರೋಪಿಗೆ ಮೂರು ವರ್ಷ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ.

ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಶೇಖರ ನಲಿಕೆ (45) ಎಂಬಾತ ಶಿಕ್ಷೆಗೊಳಗಾದವನು. ಶೇಖರ ನಲಿಕೆ ನಾಟಿ ವೈದ್ಯನಾಗಿದ್ದು, ಈತ 2016ರ ಮೇ 28ರಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಅಂದು ಆತನ ಮನೆಗೆ ಮಹಿಳೆಯೊಬ್ಬಳು ತನ್ನ ಗಂಡನ ಮದ್ಯಪಾನ ಚಟ ಬಿಡಿಸುವುದಕ್ಕಾಗಿ 13 ವರ್ಷದ ಪುತ್ರಿಯನ್ನು ಕರೆದುಕೊಂಡು ಬಂದಿದ್ದಳು.

ಕುಡಿತದ ಚಟ ಬಿಡಿಸುವ ಬಗ್ಗೆ ಅವರಿಗೆ ಔಷಧಿ ನೀಡಿದ ಬಳಿಕ ಅವರ ಪುತ್ರಿಯನ್ನು ನೋಡಿದ ಶೇಖರ ನಲಿಕೆ ನಿಮ್ಮ ಮಗಳಿಗೆ ಸೋಂಕು ಇದೆ. ತಾಯತ ಕಟ್ಟಬೇಕು. ನೀವು ಹೊರಗೆ ಹೋಗಿ ಎಂದು ಆಕೆಯ ತಂದೆ ಮತ್ತು ತಾಯಿಯನ್ನು ಹೊರಗೆ ಕಳುಹಿಸಿಕೊಟ್ಟಿದ್ದಾನೆ. ತಂದೆ ಮತ್ತು ತಾಯಿ ಹೊರಗೆ ಕಾಯುತ್ತಿದ್ದಾಗ ಸ್ವಲ್ಪ ಹೊತ್ತಿನಲ್ಲಿ ಅವರ ಪುತ್ರಿ ಅಳುತ್ತಾ ಹೊರಗೆ ಬಂದು ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಮತ್ತು ತಾಯಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.

ಧರ್ಮಸ್ಥಳ ಠಾಣಾ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು.

ಮಂಗಳೂರಿನ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ (ಪೋಕ್ಸೊ ಕಾಯ್ದೆಯ ಕಲಂ 8) ಮತ್ತು ಬೆದರಿಕೆ (ಐಪಿಸಿ 506) ಹಾಕಿದ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿ ಇದೀಗ ತೀರ್ಪು ನೀಡಿದ್ದಾರೆ.

10,000 ದಂಡ ಮೊತ್ತದಲ್ಲಿ 9000 ಹಣವನ್ನು ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದಿಂದಲೂ ಆಕೆಗೆ ಪರಿಹಾರ ದೊರಕಿಸಿಕೊಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

Intro:ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದರಲ್ಲಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ಸಾಬೀತಾಗಿದ್ದು ಆರೋಪಿಗೆ ಮೂರು ವರ್ಷಗಳ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ.Body:

ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಶೇಖರ ನಲಿಕೆ (45) ಎಂಬಾತ ಶಿಕ್ಷೆಗೊಳಗಾದವನು.ಆರೋಪಿ ಶೇಖರ ನಲಿಕೆ ನಾಟಿ ವೈದ್ಯನಾಗಿದ್ದು ಈತ 2016ರ ಮೇ 28ರಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಎಸಗಿದ್ದ.
ಅಂದು ಆತನ ಮನೆಗೆ ಅದೇ ಊರಿನ ವ್ಯಕ್ತಿಯೊಬ್ಬರನ್ನು ಅವರ ಮದ್ಯಪಾನ ಚಟ ಬಿಡಿಸುವುದಕ್ಕಾಗಿ ಪತ್ನಿ ಮತ್ತು 13 ವರ್ಷದ ಪುತ್ರಿಯನ್ನು ಕರೆದುಕೊಂಡು ಬಂದಿದ್ದರು.

ಕುಡಿತದ ಚಟ ಬಿಡಿಸುವ ಬಗ್ಗೆ ಅವರಿಗೆ ಔಷಧಿ ನೀಡಿದ ಬಳಿಕ ಅವರ ಪುತ್ರಿಯನ್ನು ನೋಡಿದ ಶೇಖರ ನಲಿಕೆ ‘ಆಕೆಗೆ ಸೋಂಕು ಇದೆ. ತಾಯಿತ ಕಟ್ಟಬೇಕು. ನೀವು ಹೊರಗೆ ಹೋಗಿ’ ಎಂದು ಆಕೆಯ ತಂದೆ ಮತ್ತು ತಾಯಿಯನ್ನು ಹೊರಗೆ ಕಳುಹಿಸಿ ಕೊಟ್ಟಿದ್ದನು. ತಂದೆ ಮತ್ತು ತಾಯಿ ಹೊರಗೆ ಕಾಯುತ್ತಿದ್ದು, ಸ್ವಲ್ಪ ಹೊತ್ತಿನಲ್ಲಿ ಅವರ ಪುತ್ರಿ ಅಳುತ್ತಾ ಹೊರಗೆ ಬಂದು ತನಗೆ ಶೇಖರ ನಲಿಕೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಮತ್ತು ತಾಯಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.

ಧರ್ಮಸ್ಥಳ ಠಾಣಾ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು.

ಮಂಗಳೂರಿನ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ (ಪೊಕ್ಸೊ ಕಾಯ್ದೆಯ ಕಲಂ 8) ಮತ್ತು ಬೆದರಿಕೆ (ಐಪಿಸಿ 506) ಹಾಕಿದ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿ ಸೆ.11ರಂದು ತೀರ್ಪು ನೀಡಿದರು.

10,000 ರೂ. ದಂಡ ಮೊತ್ತದಲ್ಲಿ 9000 ರೂ.ನ್ನು ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದಿಂದಲೂ ಆಕೆಗೆ ಪರಿಹಾರ ದೊರಕಿಸಿ ಕೊಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಾರಸು ಮಾಡಿದೆ.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.
Reporter: vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.