ಮಂಗಳೂರು : ನಗರದ ಬಲ್ಮಠದಲ್ಲಿರುವ ಸಿ.ಎಸ್.ಐ.ಕೆ.ಎಸ್.ಡಿ ಸಭಾ ಪ್ರಾಂತದ ಉದ್ಯೋಗಿಯಾಗಿರುವ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮಹಿಳೆ ಸೇರಿದಂತೆ ಆರು ಮಂದಿಯ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
44 ವರ್ಷದ ಸಂತ್ರಸ್ತ ಮಹಿಳೆ ಸಿ.ಎಸ್.ಐ.ಕೆ.ಎಸ್.ಡಿ ಸಭಾಪ್ರಾಂತದಲ್ಲಿ ಕಳೆದ 10 ವರ್ಷಗಳಲ್ಲಿ ಉದ್ಯೋಗಿಯಾಗಿದ್ದಾರೆ. ಆದರೆ, ಇತ್ತೀಚಿನ ಒಂದು ವರ್ಷದಿಂದ ಸಿ.ಎಸ್.ಐ.ಕೆ.ಎಸ್.ಡಿ ಬಲ್ಮಠದಲ್ಲಿರುವ ಖಜಾಂಜಿ ವಿನ್ಸಂಟ್ ಪಾಲನ್ನ ಮತ್ತು ಇತರರು ರೇಶ್ಮಾ ಸೊನ್ಸ್ ಅವರಿಗೆ ದೈಹಿಕ, ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದಾರೆ. ಅವರು ತಮ್ಮ ದೇಹವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುವುದಲ್ಲದೇ ತಮ್ಮೊಂದಿಗೆ ದೈಹಿಕ ಸಂಪರ್ಕ ಹೊಂದಲು ಒತ್ತಾಯ ಪಡಿಸಿದ್ದಾರೆ. ಅಲ್ಲದೇ ಮೊಬೈಲ್ನಲ್ಲಿ ಸೆಕ್ಸ್ ವಿಡಿಯೋ ನೋಡುವಂತೆ ಬಲವಂತ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಅಲ್ಲದೆ ಸ್ಟೋರ್ ಕೀಪರ್ ಆಗಿರುವ ಮನೋಹರ ಅಮ್ಮನ್ನ ಹಾಗೂ ಬಿಷಪ್ ಡೈವರ್ ಕರುಣಾಕರ ಕುಂದರ್ ಅವರು ರೇಶ್ಮಾ ಸೋನ್ಸ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿರುತ್ತಾರೆ. ಜೊತೆಗೆ ಸಿಸ್ಟರ್ ಸುಜಾತ ಮತ್ತು ಕಾರ್ಯದರ್ಶಿ ವಿಲ್ಲಿಯಂ ಕೇರಿ ಅವರು ರೇಶ್ಮಾ ಅವರನ್ನು ನೀನು ಮಹಿಳೆಯರ ಕುಲಕ್ಕೆ ಕಳಂಕ ಎಂದು ನಿಂದಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ : ಮಾರ್ಚ್ 12ಕ್ಕೆ ಪ್ರಧಾನಿ ಮೋದಿ ಮಂಡ್ಯಕ್ಕೆ ಭೇಟಿ.. ಮೈಸೂರು ಬೆಂಗಳೂರು ಹೆದ್ದಾರಿ ಸಂಚಾರ ರದ್ದು: ಮಾರ್ಗ ಬದಲಾವಣೆಗೆ ಡಿಸಿ ಆದೇಶ
ಮಂಗಳೂರು ಬಿಷಪ್ ಸೆಕ್ರೆಟರಿ ಆಗಿದ್ದ ಮಹಿಳೆಯೇ ಲೈಂಗಿಕ ಕಿರುಕ್ಕೊಳಕ್ಕೊಳಗಾಗಿದ್ದರು. ಇವರಿಗೆ ಕಳೆದ 188 ದಿನಗಳಿಂದ ವೇತನ ನೀಡದೇ ಸತಾಯಿಸಿದ್ದು, ಇವರು ತನಗಾಗಿರುವ ದೈಹಿಕ ಹಾಗೂ ಮಾನಸಿಕ ಕಿರುಕುಳದ ವಿರುದ್ಧ ಕಳೆದ 188 ದಿನಗಳಿಂದ ಬಿಷಪ್ ಹೌಸ್ ಹೊರಗಡೆ ಒಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ಕದ ತಟ್ಟಿದ ಇವರಿಗೆ ಒಡನಾಡಿ ಸಂಸ್ಥೆಯ ಅಧ್ಯಕ್ಷ ಸ್ಟ್ಯಾನ್ಲಿ ಪಿಂಟೋ ಬೆಂಬಲ ಸೂಚಿಸಿ ಪೊಲೀಸ್ ದೂರು ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹೈಟೆಕ್ ರೈಸ್ ಪುಲ್ಲಿಂಗ್ ದಂಧೆ : ಎಂಟು ಮಂದಿ ಆರೋಪಿಗಳ ಬಂಧನ
ಮಹಿಳೆ ಬಲ್ಮಠದಲ್ಲಿರುವ ಸಿಎಸ್ಐ ಕೆಎಸ್ಡಿ ಸಭಾಪ್ರಾಂತದಲ್ಲಿ ಹತ್ತು ವರ್ಷಗಳಿಂದ ಖಾಯಂ ಉದ್ಯೋಗಿಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಈಕೆ ವಿಚ್ಛೇದಿತೆಯಾಗಿದ್ದು, ಇವರ ಅಸಹಾಯಕತೆಯನ್ನು ದುರ್ಬಳಕೆ ಮಾಡಿ ವಿನ್ಸೆಂಟ್ ಪಾಲನ್ ಕಳೆದೊಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ. ಅವರ ಯಾವ ಕಿರುಕುಳಕ್ಕೂ ಬಗ್ಗದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲು ಹುನ್ನಾರ ನಡೆಸಲಾಗಿದೆ. ಅಲ್ಲದೇ ಸಿಸ್ಟರ್ ಸುಜಾತಾ ಎಂಬಾಕೆಯೂ ಇಲ್ಲ ಸಲ್ಲದ ಆರೋಪ ಹೊರಿಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ : ಕೇರ್ ಟೇಕರ್ ಆಗಿ ಸೇರಿಕೊಂಡ ಮೂರೇ ದಿನದಲ್ಲಿ ಚಿನ್ನಾಭರಣ ಎಗರಿಸಿ ಪರಾರಿ: ಖದೀಮನ ಬಂಧನ