ETV Bharat / state

ವಿಟ್ಲ ವರ್ತಕರಿಂದ ಸ್ವಯಂ ಜಾಗೃತಿ... ಮೇ 25ರ ವರೆಗೆ ಬಟ್ಟೆ, ಫ್ಯಾನ್ಸಿ,ಚಪ್ಪಲಿ ಅಂಗಡಿ ಬಂದ್

ಬಂಟ್ವಾಳದಲ್ಲಿ ಸಭೆ ನಡೆಸಿದ ವಿಟ್ಲದ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸದಸ್ಯರು, ಮೇ 18 ರಿಂದ ಮೇ 25ರ ವರೆಗೆ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಅಂಗಡಿಗಳನ್ನ ಬಂದ್ ಮಾಡುವುದು ಹಾಗೂ ಮಾಸ್ಕ್ ಹಾಕದೇ ಬಂದವರಿಗೆ ವ್ಯಾಪಾರಿಗಳು ಯಾವುದೇ ಸಾಮಗ್ರಿಗಳನ್ನ ನೀಡದಿರಲು ನಿರ್ಧರಿಸಿದ್ದಾರೆ.

Self-awareness by Whitla merchants
ವಿಟ್ಲ ವರ್ತಕರಿಂದ ಸ್ವಯಂ ಜಾಗೃತಿ..ಮೇ 25ರ ವರೆಗೆ ಬಟ್ಟೆ,ಫ್ಯಾನ್ಸಿ,ಚಪ್ಪಲಿ ಅಂಗಡಿ ಬಂದ್
author img

By

Published : May 14, 2020, 1:15 PM IST

ಬಂಟ್ವಾಳ (ದಕ್ಷಿಣಕನ್ನಡ): ಮೇ 18 ರಿಂದ ಮೇ 25ರ ವರೆಗೆ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಅಂಗಡಿಗಳನ್ನ ಬಂದ್ ಮಾಡುವುದು ಹಾಗೂ ಮಾಸ್ಕ್ ಹಾಕದೇ ಬಂದವರಿಗೆ ವ್ಯಾಪಾರಿಗಳು ಯಾವುದೇ ಸಾಮಗ್ರಿಗಳನ್ನ ನೀಡದಿರಲು ವಿಟ್ಲದ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತೀರ್ಮಾನಿಸಿದೆ.

ಈ ಕುರಿತು ಸಭೆ ನಡೆಸಿದ ವಿಟ್ಲದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ, ಮಧ್ಯಾಹ್ನ 2 ಗಂಟೆ ಬಳಿಕ ಅಂಗಡಿ ಮುಚ್ಚುವುದು ಅಥವಾ ತೆರೆಯುವುದು ವ್ಯಾಪಾರಿಯ ಇಚ್ಛೆಗೆ ಬಿಟ್ಟ ವಿಚಾರ. ಆದರೆ, ಪಟ್ಟಣ ಪಂಚಾಯತ್ ನಿರ್ಧಾರಗಳನ್ನ ಕಡ್ಡಾಯವಾಗಿ ಬೆಂಬಲಿಸಬೇಕು.

ಮುಸಲ್ಮಾನ ಬಾಂಧವರ ರಂಜಾನ್​​ ಹಬ್ಬದ ಪ್ರಯುಕ್ತ ಈ ವಿಶೇಷ ಕ್ರಮಕೈಗೊಳ್ಳಲಾಗಿದ್ದು, ಎಲ್ಲರ ಅಭಿಪ್ರಾಯ ಕ್ರೋಡೀಕರಿಸಿ ಮೇ 17ರೊಳಗೆ ಇನ್ನೂ ಕೆಲವು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅದಕ್ಕೆ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.