ETV Bharat / state

ಕಾಂಗ್ರೆಸ್ ಪ್ರಚಾರ ವಾಹನ ಚಾಲಕನಿಗೆ ಹಲ್ಲೆ, ಎಸ್‍ಡಿಪಿಐ ಕಾರ್ಯಕರ್ತ ಅರೆಸ್ಟ್

ಕಾಂಗ್ರೆಸ್ ಪ್ರಚಾರದ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ ಎಸ್‍ಡಿಪಿಐ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘಟನೆ ನಡೆದಿದೆ.

SDPI worker assaults  assaults Congress campaign driver  Dakshina Kannada district  ಕಾಂಗ್ರೆಸ್ ಪ್ರಚಾರದ ವಾಹನ ಚಾಲಕ  ಕಾಂಗ್ರೆಸ್ ಪ್ರಚಾರದ ವಾಹನ ಚಾಲಕನ ಮೇಲೆ ಹಲ್ಲೆ  ಚಾಲಕನ ಮೇಲೆ ಹಲ್ಲೆ ನಡೆಸಿದ ಎಸ್‍ಡಿಪಿಐ ಕಾರ್ಯಕರ್ತ  ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ  ಉಳ್ಳಾಲ ಅಬ್ಬಕ್ಕ ವೃತ್ತ  ಸ್‍ಡಿಪಿಐ ಹಮ್ಮಿಕೊಂಡಿದ್ದ ರಿಕ್ಷಾ ಹಾಗೂ ಬೈಕ್ ರ‍್ಯಾಲಿ  ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನ  ನಾಟೆಕಲ್ ಸಮೀಪ ಅಸೈಗೋಳಿ
ಕಾಂಗ್ರೆಸ್ ಪ್ರಚಾರದ ವಾಹನ ಚಾಲಕ
author img

By

Published : May 8, 2023, 7:04 AM IST

ದಕ್ಷಿಣ ಕನ್ನಡ: ಬೈಕ್ ಮತ್ತು ಆಟೋ ರ‍್ಯಾಲಿ ನಡೆಯುತ್ತಿದ್ದಾಗ ಎಸ್​ಡಿಪಿಐ ಮತ್ತು ಕಾಂಗ್ರೆಸ್​ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಉಳ್ಳಾಲದ ಅಬ್ಬಕ್ಕ ವೃತ್ತದಿಂದ ದೇರಳಕಟ್ಟೆಯವರೆಗೆ ಎಸ್‍ಡಿಪಿಐ ಹಮ್ಮಿಕೊಂಡಿದ್ದ ಆಟೋ ರಿಕ್ಷಾ ಹಾಗೂ ಬೈಕ್ ರ‍್ಯಾಲಿಯ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ನಡೆಸಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪ ಘಟನೆ ನಡೆದಿದೆ.

ನಡೆದಿದ್ದೇನು?: ಕಾಂಗ್ರೆಸ್ ಕಾರ್ಯಕರ್ತ ನೌಫಾಲ್ (35) ಹಲ್ಲೆಗೊಳಗಾಗಿದ್ದಾರೆ. ನಾಟೆಕಲ್ ಸಮೀಪ ಅಸೈಗೋಳಿಯಿಂದ ಚೆಂಬುಗುಡ್ಡೆ ಸಾರ್ವಜನಿಕ ಸಭೆಗೆ ತೆರಳುತ್ತಿದ್ದ ಪ್ರಚಾರದ ವಾಹನ ಎಸ್​ಡಿಪಿಐ ರ‍್ಯಾಲಿಗೆ ನಾಟೆಕಲ್ ಸಮೀಪ ಎದುರಾಗಿತ್ತು. ಎಸ್​ಡಿಪಿಐ ಕಾರ್ಯಕರ್ತರ ಬೈಕ್ ಹಾಗೂ ರಿಕ್ಷಾ ರ‍್ಯಾಲಿಯಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಕಾಂಗ್ರೆಸ್ ಪರ ಹಾಡನ್ನು ಚುನಾವಣಾ ಪ್ರಚಾರ ವಾಹನದಲ್ಲಿ ಹಾಕಲಾಗಿತ್ತು. ಇದಕ್ಕೆ ಎಸ್‍ಡಿಪಿಐ ಕಾರ್ಯಕರ್ತರು ಆಕ್ಷೇಪಿಸಿ, ನಿಲ್ಲಿಸುವಂತೆ ಸೂಚಿಸಿದ್ದರು. ಗಣನೆಗೆ ತೆಗೆದುಕೊಳ್ಳದ ಚಾಲಕ ವಾಹನಕ್ಕೆ ಅಡ್ಡ ಇಟ್ಟವರಿಗೆ ಹಾರ್ನ್ ಹಾಕಲು ಆರಂಭಿಸಿದ್ದಾರೆ. ಇದರಿಂದ ಕೆರಳಿದ ಎಸ್‌ಡಿಪಿಐ ಕಾರ್ಯಕರ್ತರು ಚಾಲಕ ನೌಫಾಲ್ ಕಾಲರ್ ಪಟ್ಟಿ ಹಿಡಿದೆಳೆದು ಹಲ್ಲೆ ನಡೆಸಿದ್ದಾರೆ. ಐಫೋನ್ ಕಸಿದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

SDPI worker assaults  assaults Congress campaign driver  Dakshina Kannada district  ಕಾಂಗ್ರೆಸ್ ಪ್ರಚಾರದ ವಾಹನ ಚಾಲಕ  ಕಾಂಗ್ರೆಸ್ ಪ್ರಚಾರದ ವಾಹನ ಚಾಲಕನ ಮೇಲೆ ಹಲ್ಲೆ  ಚಾಲಕನ ಮೇಲೆ ಹಲ್ಲೆ ನಡೆಸಿದ ಎಸ್‍ಡಿಪಿಐ ಕಾರ್ಯಕರ್ತ  ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ  ಉಳ್ಳಾಲ ಅಬ್ಬಕ್ಕ ವೃತ್ತ  ಸ್‍ಡಿಪಿಐ ಹಮ್ಮಿಕೊಂಡಿದ್ದ ರಿಕ್ಷಾ ಹಾಗೂ ಬೈಕ್ ರ‍್ಯಾಲಿ  ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನ  ನಾಟೆಕಲ್ ಸಮೀಪ ಅಸೈಗೋಳಿ
ಗಾಯಗೊಂಡ ಕಾಂಗ್ರೆಸ್ ಕಾರ್ಯಕರ್ತ ನೌಫಾಲ್

ಗಾಯಾಳು ನೌಫಾಲ್​ನನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ದೇರಳಕಟ್ಟೆ ಸಮೀಪ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ತದನಂತರ ಎಸ್‌ಡಿಪಿಐ ಕಾರ್ಯಕರ್ತನೊಬ್ಬನನ್ನು ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇರಳಕಟ್ಟೆಯಲ್ಲಿ ನಡೆಯುತ್ತಿದ್ದ ಎಸ್​ಡಿಪಿಐ ಸಾರ್ವಜನಿಕ ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಘಟನಾ ಸ್ಥಳಕ್ಕೆ ಉಪ ಪೊಲೀಸ್ ಆಯುಕ್ತರುಗಳಾದ ಅಂಶು ಕುಮಾರ್ ಐಪಿಎಸ್, ಬಿ.ಪಿ ದಿನೇಶ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತೆ ಧನ್ಯ ಎನ್. ನಾಯಕ್ ಹಾಗೂ ಉಳ್ಳಾಲ ಮತ್ತು ಕೊಣಾಜೆ ಠಾಣಾ ಪೊಲೀಸರನ್ನು ಬಂದೋಬಸ್ತ್​ಗಾಗಿ ನಿಯೋಜಿಸಲಾಗಿತ್ತು.

ಘಟನಾಸ್ಥಳದಲ್ಲಿ ಪೊಲೀಸರು

ಇದನ್ನೂ ಓದಿ: ಫುಡ್​ ಡೆಲಿವರಿ ಬಾಯ್ ದ್ವಿಚಕ್ರ ವಾಹನದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ರಾಹುಲ್ ಗಾಂಧಿ​ ಸಂಚಾರ.. ಸಂವಾದ

ದೊಡ್ಡಬಳ್ಳಾಪುರದಲ್ಲಿ ಮಾರಾಮಾರಿ: ಬೈಕ್ ರ‍್ಯಾಲಿ ನಡೆಯುತ್ತಿದ್ದಾಗ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ಜೆಡಿಎಸ್​ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ಘಟನೆ ನಡೆದಿದೆ. ಗಲಾಟೆಯಲ್ಲಿ ಜೆಡಿಎಸ್​ ಕಾರ್ಯಕರ್ತನಿಗೆ ಗಂಭೀರ ಗಾಯಾಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಬೈಕ್ ರ್‍ಯಾಲಿ ಏರ್ಪಡಿಸಿದ್ದರು. ಎರಡು ಪಕ್ಷಗಳ ಬೈಕ್ ರ್‍ಯಾಲಿ ಮುಖಾಮುಖಿಯಾದಾಗ ಪರಸ್ಪರ ಘೋಷಣೆ ಕೂಗಿದ್ದಾರೆ. ಪಕ್ಷಗಳ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.