ಬೆಳ್ತಂಗಡಿ (ಮಂಗಳೂರು): ನಮ್ಮ ಸುತ್ತಲಿನ ಅರಣ್ಯದಲ್ಲಿಯೇ ನೂರಾರು ಔಷಧಿ ಗಿಡಗಳಿದ್ದರೂ ಅದನ್ನ ನಾವು ಗುರುತುಹಿಡಿದು ಅದರ ಬಳಸುವುದು ಬಹಳ ಕಡಿಮೆ. ಆದರೆ ಇಲ್ಲೊಬ್ಬರು ಇಂತಹ ಗಿಡಗಳ ಬಗ್ಗೆ ತಿಳಿಯಲು ಒಂದು ತಂಡ ರಚಿಸಿ ಅವುಗಳ ದಾಖಲಾತಿಗೆ ಮುಂದಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸಮೀಪದ ಕಡಂಬಳ್ಳಿ ನಿವಾಸಿ ನಿವೃತ್ತ ಸೈನಿಕ ಮತ್ತು ನಿವೃತ್ತ ವಿಜ್ಞಾನ ಶಿಕ್ಷಕರಾದ ಗಜಾನನ ವಝೆ ಎಂಬ ಹಿರಿಯ ಪರಿಸರ ಪ್ರೇಮಿ ಕಳೆದ ಒಂದು ವರ್ಷದಿಂದ ಪರಿಸರದಲ್ಲಿ ಇರುವ ಗಿಡಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅದರ ದಾಖಲೀಕರಣವನ್ನು ಮಾಡಿಕೊಳ್ಳುತ್ತಿದ್ದಾರೆ.
ಗ್ರಾಮದ ಕಾಡು, ನದಿ ತೀರ, ತೋಟಗಳ ಸುತ್ತಮುತ್ತಲು ಇರುವ ಔಷಧಿ ಗುಣವುಳ್ಳ ಸಸ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಜನರಿಗೆ ಈಗ ಪೌಷ್ಟಿಕ ಆಹಾರದ ಕಲ್ಪನೆ ಇಲ್ಲದಾಗಿದೆ. ಹೊಟೆಲ್ಗಳಲ್ಲಿ ಸಿಗುವ ಆಹಾರಗಳಿಗೆ ಜಾಸ್ತಿ ಒತ್ತು ನೀಡುತ್ತಿದ್ದಾರೆ. ಇವರ ಕಲ್ಪನೆಯಂತೆ ಮುಂಡಾಜೆ ಗ್ರಾಮದಲ್ಲಿ ಇರುವ ಸಸ್ಯ ಪ್ರಭೇದಗಳನ್ನು ಯಾವುದಕ್ಕಾದರೂ ಉಪಯೋಗಿಸಬಹುದು ಎಂದು ವೈಜ್ಞಾನಿಕ ದಾಖಲೆಗಳಿವೆ.
ಗೆಳೆಯರ ಜೊತೆ ಚರ್ಚಿಸಿ ಈಗಾಗಲೇ ಐದು ಕಡೆ ಸಸ್ಯ ಪ್ರಭೇದಗಳ ದಾಖಲಾತಿ ನಡೆಸಲು ಆರಂಭಿಸಿದ್ದಾರೆ. ಗ್ರಾಮದಲ್ಲಿ ಕೆಲವು ಸಸ್ಯ ವರ್ಗಗಳು ಅಳಿವಿನಂಚಿಗೆ ಹೋಗಿದೆ ಮತ್ತು ಕೆಲವು ಸಸ್ಯ ವರ್ಗಗಳು ಹೊರಗಿನಿಂದ ಬಂದಿವೆ. ಈಗಾಗಲೇ ಅಳಿವಿನಂಚಿಗೆ ತಲುಪಿದ ಸಸ್ಯಗಳ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
40 ವರ್ಷಗಳ ಹಿಂದೆ ಇದ್ದಂತಹ ಸಸ್ಯಗಳು ಈಗಾಗಲೇ ನಾಮಾವಶೇಷಕ್ಕೆ ತಲುಪಿರುವುದು ದುರದೃಷ್ಟಕರ. ಈಗ ಪ್ರಸ್ತುತ ಗ್ರಾಮದಲ್ಲಿ ಯಾವೆಲ್ಲಾ ಸಸ್ಯಗಳು ಇದೆ ಮತ್ತು ಇದರ ಸಮಗ್ರ ವೈಜ್ಞಾನಿಕ ಮಾಹಿತಿ ಫೋಟೋ ಸಹಿತ ದಾಖಲಿಸಿದ್ದಾರೆ.
ಓದಿ: ನೇತ್ರಾವತಿ ನದಿಯಲ್ಲಿ ತೇಲಿ ಬಂತು ಯುವತಿ ಶವ : ಸಮುದ್ರ ಸೇರುವುದನ್ನು ತಪ್ಪಿಸಿದ ಮೀನುಗಾರರು