ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಮಹಾನಗರ ಪಾಲಿಕೆಯ ಕಳೆದ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು ನಾಮಕರಣದ ವಿಚಾರ ಅಂಗೀಕಾರ ಮಾಡಲಾಗಿತ್ತು. ಇದಕ್ಕೆ ಇದು ಕಾಂಗ್ರೆಸ್ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಈ ತಿಂಗಳ ಮಾಸಿಕ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಇಂದು ಸಭೆ ಆರಂಭವಾಗುತ್ತಿದಂತೆ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಸಾವರ್ಕರ್ ಧಿಕ್ಕಾರ ಹಾಕಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯರು ಜೈಕಾರ ಹಾಕಿದ್ದಾರೆ. ಕೆಲಹೊತ್ತು ಪಾಲಿಕೆ ಸಭೆಯಲ್ಲಿ ಸಾವರ್ಕರ್ ಜೈಕಾರ - ಧಿಕ್ಕಾರ ಘೋಷಣೆಗಳು ಮೊಳಗಿದವು. ಆ ಬಳಿಕ ಪ್ರತಿಪಕ್ಷ ಮುಖಂಡರೊಂದಿಗೆ ಮೇಯರ್ ಮಾತುಕತೆ ನಡೆಸಿದರು.
ಇದನ್ನೂ ಓದಿ : ಮಂಗಳೂರು: 50 ಬೋಟ್ಗಳ ಕಡಲಯಾನದಲ್ಲಿ ವಿಶೇಷವಾಗಿ ನಡೆಯಿತು ಕೋಟಿ ಕಂಠ ಗಾಯನ