ಕಡಬ: ಮಲಂಕರ ಕ್ಯಾಥೋಲಿಕ್ ಧರ್ಮ ಸಭೆಯ ದಕ್ಷಿಣ ಕನ್ನಡ ವಲಯದ ಯೂತ್ ಮೂವ್ಮೆಂಟ್ (ಎಂ.ಸಿ.ವೈ.ಎಂ) ಆನಿಮೇಟರ್ ಆಗಿ ಸನೀಶ್ ಬಿ.ಟಿ ಆಯ್ಕೆಯಾಗಿದ್ದಾರೆ.
ಪುತ್ತೂರು ಧರ್ಮಪ್ರಾಂತ್ಯಕ್ಕೆ ಒಳಪಡುವ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಕಾರ್ಯದರ್ಶಿಯೂ ಆಗಿರುವ ಸನೀಶ್ ಬಿ.ಟಿ, ಕಡಬ ತಾಲೂಕು ಕೋಡಿಂಬಾಳ ನಿವಾಸಿಯಾಗಿದ್ದಾರೆ.
ಸನೀಶ್ ಅವರು ಮುಂದಿನ ಎರಡು ವರ್ಷಗಳ ಕಾಲ ದಕ್ಷಿಣ ಕನ್ನಡ ವಲಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.