ETV Bharat / state

ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ: ರಬ್ಬರ್​​​​ ಟ್ಯಾಪಿಂಗ್​​​​ ಕಾರ್ಮಿಕ ಸಾವು

author img

By

Published : Dec 20, 2021, 4:38 PM IST

ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ರಬ್ಬರ್​​​​ ಟ್ಯಾಪಿಂಗ್​​​ ಕಾರ್ಮಿಕ ಮೃತಪಟ್ಟಿದ್ದ. ಗಾಯಾಳು ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rubber tapping worker dies in Puttur road accident
ಪುತ್ತೂರಿನ ರಸ್ತೆ ಅಪಘಾತದಲ್ಲಿ ರಬ್ಬರ್​​​​ ಟ್ಯಾಪಿಂಗ್​​​ ಕಾರ್ಮಿಕ ಸಾವು

ಪುತ್ತೂರು: ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಗಾಯಗೊಂಡಿದ್ದ ಸ್ಕೂಟಿ ಚಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕುಂಬ್ರ ಕೊಲ್ಲಾಜೆಯಲ್ಲಿ ನಡೆದಿದೆ.

ಕೊಲ್ಲಾಜೆ ಒಳ ರಸ್ತೆಯಿಂದ ಸ್ಕೂಟಿಯಲ್ಲಿ ರಬ್ಬರ್​​​​ ಟ್ಯಾಪಿಂಗ್​​ ಕಾರ್ಮಿಕ ಬರುತ್ತಿದ್ದ. ಇದೇ ವೇಳೆ, ಎದುರಿಗೆ ಬಂದ ಕಾಲೇಜಿನ ವಿದ್ಯಾರ್ಥಿಯ ಬೈಕ್​ ನಡುವೆ ಡಿಕ್ಕಿ ಉಂಟಾಗಿದೆ. ಘಟನೆಯಿಂದ ಇಬ್ಬರು ಸವಾರರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು.

ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ರಬ್ಬರ್​​​​ ಟ್ಯಾಪಿಂಗ್​​​ ಕಾರ್ಮಿಕ ಮೃತಪಟ್ಟಿದ್ದ. ಗಾಯಾಳು ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ತಪ್ಪಿಸಿಕೊಂಡು ಹೋಗುವಾಗ ಸ್ಕೈವಾಕ್​​ನಿಂದ ಬಿದ್ದು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.