ETV Bharat / state

ಬಂಟ್ವಾಳ: ಒಂಟಿ ಮಹಿಳೆ ಕಟ್ಟಿಹಾಕಿ ದರೋಡೆ - ETV Bharath Kannada news

ಮಹಿಳೆ ಒಬ್ಬರೇ ಮನೆಯಲ್ಲಿದ್ದ ವೇಳೆ ದರೋಡೆಕೋರರು ದಾಳಿ ಮಾಡಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ.

robbery in Dakshina Kannada
ಒಂಟಿ ಮಹಿಳೆಯ ಕಟ್ಟಿಹಾಕಿ ದರೋಡೆ
author img

By

Published : Dec 23, 2022, 11:19 AM IST

ಬಂಟ್ವಾಳ: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆ ತಾಲೂಕಿನ ಬರಿಮಾರು ಗ್ರಾಮದ ಕಾಗೆಕಾನದಲ್ಲಿ ಗುರುವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ನಡೆದಿದೆ. ಇಲ್ಲಿನ ನಿವಾಸಿ ರೋಹಿತ್ ಎಂಬವರ ಪತ್ನಿ ಪವಿತ್ರ ಎಂಬಾಕೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಮನೆಯಿಂದ ರಾಬರಿ ಮಾಡಲಾಗಿದೆ.

ಘಟನೆ ವಿವರ: ರೋಹಿತ್ ಕುಮಾರ್ ಅವರು ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಹೋಗಿದ್ದರು. ಪತ್ನಿ ಪವಿತ್ರ ಮನೆಯಲ್ಲಿರುತ್ತಿದ್ದರು. ಮಕ್ಕಳಿಬ್ಬರು ಗುರುವಾರ ಮೂಡಬಿದಿರೆಯಲ್ಲಿ ನಡೆಯುವ ಜಾಂಬೂರಿ ಕಾರ್ಯಕ್ರಮಕ್ಕೆ ತೆರಳಿದ್ದರು. ಸಂಜೆ ಪವಿತ್ರ ಅವರು ಮನೆಯ ಬಾತ್ ರೂಮ್​ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮನೆಯ ಛಾವಣಿಗೆ ಮತ್ತು ಕಿಟಕಿಗೆ ಕಲ್ಲು ಎಸೆದ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದು ಪರೀಕ್ಷಿಸಿದ್ದಾರೆ.

ಯಾರು ಕಾಣಲಿಲ್ಲ ಎಂದು ಒಳಗೆ ಹೋಗುವ ವೇಳೆ ಇಬ್ಬರು ಮುಸುಕುದಾರಿ ಅಪರಿಚಿತರು ಮನೆಯ ಅಂಗಳದ ಕಂಬಕ್ಕೆ ಪವಿತ್ರಾಳನ್ನು ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ. ನಂತರ ಅವರ ಮಾಂಗಲ್ಯ ಸರ, ಟೇಬಲ್​ ಮೇಲಿದ್ದ 4 ಸಾವಿರ ಮತ್ತು ಅಂಗಳದಲ್ಲಿದ್ದ ಅಡಕೆ ಗೋಣಿಯನ್ನು ಕೊಂಡುಹೋಗಿದ್ದಾರೆ.

ಪವಿತ್ರ ಅವರನ್ನು ಕಟ್ಟಿ ಹಾಕಿದ ಬಗ್ಗೆ ಯಾರು ಕೂಡ ಗಮನಿಸಿರಲಿಲ್ಲ, ಸುಮಾರು 7 ಅಂದಾಜಿಗೆ ಸಮೀಪದ ಮನೆಯವರು ನೋಡಿ ಪವಿತ್ರ ಅವರನ್ನು ಬಿಡಿಸಿದ್ದಾರೆ. ಬಿಜೆಪಿ ಮುಖಂಡ ಗಣೇಶ್ ರೈ ಮಾಣಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್. ಐ.ಹರೀಶ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಭಾವಿ ಪತಿಯ ಕಿರಿ ಸಹೋದರ: 10 ಕೆಜಿ ಉಪ್ಪು ಸುರಿದು ಶವ ಹೂತಿದ್ದ ಖದೀಮ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.