ಮಂಗಳೂರು: ಕೋಮು ಸೂಕ್ಷ್ಮ ಜಿಲ್ಲೆ ಎಂದೆ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸೌಹಾರ್ದತೆ ಸಾರುವ ಘಟನೆಯೊಂದು ನಡೆದಿದೆ.
ಗಣೇಶ ಮುರ್ತಿ ನಿಮಜ್ಜನಕ್ಕೆ ತೆರಳುತ್ತಿದ್ದ ಜನರಿಗೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಜ್ಯೂಸ್ ಹಾಗೂ ಮಜ್ಜಿಗೆ ವಿತರಿಸಿದ್ದಾರೆ. ಮೆರವಣಿಗೆಯಲ್ಲಿ ಆಗಮಿಸಿದ ಸಾವಿರಾರು ಮಂದಿಗೆ ಜ್ಯೂಸ್ ಹಾಗೂ ಮಜ್ಜಿಗೆ ಹಂಚಿದ್ದಾರೆ. ಇಸ್ಮಾಯಿಲ್ ಅವರು ಕಳೆದ ಕೆಲವು ವರ್ಷಗಳಿಂದ ಈ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು ಹಿಂದೂ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದಾರೆ.