ETV Bharat / state

ಬ್ಯಾರಿ ಭಾಷೆಯ “ಬ್ಯಾರಿ ಲಿಪಿ” ಬಿಡುಗಡೆ

author img

By

Published : Sep 12, 2020, 5:02 AM IST

ವಿಶಿಷ್ಟ ಪದಬಳಕೆ, ಸುಲಲಿತ ಮನವರಿಕೆಯ ಗುಣಗಳಿಂದಾಗಿ ಆಂಗ್ಲಭಾಷಾ ಮಾಧ್ಯಮ ಕಲಿಕಾಸಕ್ತಿಯ ನಡುವೆಯೂ ಮನೆ ಮತ್ತು ವ್ಯವಹಾರಗಳಲ್ಲಿ ಇಂದಿಗೂ ಬಹುದೊಡ್ಡ ಸಂಖ್ಯೆಯ ಬ್ಯಾರಿ ಮತ್ತು ಬ್ಯಾರಿಯೇತರ ಜನರ ದಿನನಿತ್ಯದ ಆಡುಭಾಷೆಯಾಗಿ ಅಸ್ತಿತ್ವವನ್ನು ಉಳಿಸಿಕೊಂಡಿರುವ ಬ್ಯಾರಿ ಭಾಷೆಯಲ್ಲಿ ಇಂದು ವಿಪುಲ ಸಾಹಿತ್ಯ ಚಟುವಟಿಕೆ ನಡೆಯುತ್ತಿದೆ.

Release of Barry language script
ಬ್ಯಾರಿ ಭಾಷೆಯ “ಬ್ಯಾರಿ ಲಿಪಿ” ಬಿಡುಗಡೆ

ಮಂಗಳೂರು: ಬ್ಯಾರಿ ಭಾಷೆಗೆ ತನ್ನದೇ ಆದ ಲಿಪಿ ಇಲ್ಲ ಎಂಬ ಕೊರತೆಯನ್ನು ನೀಗಿಸಿ ಈ ಭಾಷೆಯನ್ನು ಭಾಷಾ ಜಗತ್ತಿಗೆ ಸ್ವತಂತ್ರ ಮತ್ತು ಅನನ್ಯತೆಯ ಅಸ್ಮಿತೆಯೊಂದಿಗೆ ಪರಿಚಯಿಸುವ ಸಲುವಾಗಿ ಬ್ಯಾರಿ ಭಾಷೆಗೆ ಸ್ವತಂತ್ರವಾದ ಲಿಪಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ರಚಿಸಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ನಡೆದ ಬ್ಯಾರಿ ಲಿಪಿ ಬಿಡುಗಡೆ ಮಾಡಿ ಮಾತನಾಡಿದರು. ಬ್ಯಾರಿ ಭಾಷೆ ಕಳೆದ ಹಲವು ಶತಮಾನಗಳಿಂದ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ಕರಾವಳಿ ಪ್ರದೇಶಗಳಲ್ಲಿ ಸುಮಾರು ಇಪ್ಪತ್ತು ಲಕ್ಷದಷ್ಟು ಜನರ ಮಾತೃ ಭಾಷೆಯಾಗಿ ಹಾಗೂ ವ್ಯಾವಹಾರಿಕ ಭಾಷೆಯಾಗಿ ಅಚ್ಚಳಿಯದೆ ಉಳಿದಿದೆ. ತನ್ನದೇ ಆದ ಧ್ವನಿಮಾ ವ್ಯವಸ್ಥೆ ಹೊಂದಿರುವ ಬ್ಯಾರಿ ಭಾಷೆ ತುಳು, ಮಲಯಾಳಂ, ಕನ್ನಡ, ಕೊಂಕಣಿ, ಕೊಡವ ಮೊದಲಾದ ಭಾಷೆಗಳೊಂದಿಗೆ ಭಾಷಾ ಸಾಮರಸ್ಯದ ಕೊಂಡಿಯಾಗಿಯೂ ಹಲವು ಶತಮಾನಗಳಿಂದ ಸಂಬಂಧವನ್ನು ಹೊಂದಿದೆ ಎಂದು ಭಾಷೆಯ ಮೌಲ್ಯದ ಬಗ್ಗೆ ಹೇಳಿದರು.

ಬ್ಯಾರಿ ಭಾಷೆಯ “ಬ್ಯಾರಿ ಲಿಪಿ” ಬಿಡುಗಡೆ

ವಿಶಿಷ್ಟ ಪದಬಳಕೆ, ಸುಲಲಿತ ಮನವರಿಕೆಯ ಗುಣಗಳಿಂದಾಗಿ ಆಂಗ್ಲಭಾಷಾ ಮಾಧ್ಯಮ ಕಲಿಕಾಸಕ್ತಿಯ ನಡುವೆಯೂ ಮನೆ ಮತ್ತು ವ್ಯವಹಾರಗಳಲ್ಲಿ ಇಂದಿಗೂ ಬಹುದೊಡ್ಡ ಸಂಖ್ಯೆಯ ಬ್ಯಾರಿ ಮತ್ತು ಬ್ಯಾರಿಯೇತರ ಜನರ ದಿನನಿತ್ಯದ ಆಡುಭಾಷೆಯಾಗಿ ಅಸ್ತಿತ್ವವನ್ನು ಉಳಿಸಿಕೊಂಡಿರುವ ಬ್ಯಾರಿ ಭಾಷೆಯಲ್ಲಿ ಇಂದು ವಿಪುಲ ಸಾಹಿತ್ಯ ಚಟುವಟಿಕೆ ನಡೆಯುತ್ತಿದೆ‌ ಎಂದು ತಿಳಿಸಿದರು.

ಬ್ಯಾರಿ ಭಾಷೆಯ ಸಾಹಿತ್ಯ, ಶೈಕ್ಷಣಿಕ ಬೆಳವಣಿಗೆಗಾಗಿ ಆರಂಭವಾದ 90ರ ದಶಕದ ಬ್ಯಾರಿ ಆಂದೋಲನಗಳು, ಸಾಹಿತ್ಯ ಸಮ್ಮೇಳನಗಳಿಂದಾಗಿ, ಬ್ಯಾರಿ ಭಾಷೆಯನ್ನು ಹೊರ ಜಗತ್ತು ಗುರುತಿಸುವಂತಾಯಿತು. ಅಂದಿನ ಕರ್ನಾಟಕ ಸರಕಾರ 2007 ರಲ್ಲಿ ಈ ಭಾಷೆಯ ಅನನ್ಯತೆಯನ್ನು ಮನಗಂಡು ನೀಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬ್ಯಾರಿ ಭಾಷೆಯ ಬೆಳವಣಿಗೆಗೆ ಅಪೂರ್ವ ಅವಕಾಶವನ್ನು ನೀಡಿತು. ಈ ನಡುವೆ ನೂರಾರು ಬರಹಗಾರರು ಬ್ಯಾರಿ ಭಾಷೆಯಲ್ಲಿ ಗದ್ಯ, ಪದ್ಯಗಳನ್ನು, ಕನ್ನಡ ಲಿಪಿಯ ಮೂಲಕ ರಚಿಸಿ ಬ್ಯಾರಿ ಭಾಷೆಯನ್ನು ಶ್ರೀಮಂತಗೊಳಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯು ಈ ಹಿಂದಿನ ಅವಧಿಗಳಲ್ಲಿ ಬ್ಯಾರಿ ಭಾಷಾನಿಘಂಟು, ಬ್ಯಾರಿಭಾಷಾ ವ್ಯಾಕರಣ ಗ್ರಂಥಗಳನ್ನು ರಚಿಸುವ ಮೂಲಕ ಈ ಭಾಷೆಗೆ ಶೈಕ್ಷಣಿಕ (ಅಕಾಡೆಮಿಕ್) ಮತ್ತು ಸಾಹಿತ್ಯಿಕ ಮಹತ್ವ ಸಿಗುವಂತೆ ಮಾಡಿದೆ. ಬ್ಯಾರಿ ಭಾಷೆಯನ್ನು ರಾಜ್ಯದ ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ಐಚ್ಛಿಕವಾಗಿ ಕಲಿಯಲು ಅವಕಾಶ ಮಾಡಿಕೊಡುವ ಪ್ರಯತ್ನವೂ ಸಾಗಿದೆ‌ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.