ಮಂಗಳೂರು: ಚುನಾವಣಾ ದೃಷ್ಟಿಯಿಂದ ರಾಜ್ಯ ಸರ್ಕಾರವು ನೂತನ ನಿಗಮಗಳನ್ನು ರಚಿಸುತ್ತಿದೆ ಎಂದು, ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವತ್ತಿಗೂ ಚುನಾವಣೆ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಬಿಜೆಪಿ ಚುನಾವಣಾ ಗಿಮಿಕ್ ನಡೆಸುತ್ತಿದೆ ಎಂದು ಆರೋಪಿಸಿದರು.
ಈಗ ಮರಾಠ ಅಭಿವೃದ್ಧಿ ನಿಗಮ ಮಾಡಿರುವುದರಿಂದ ಎಲ್ಲರೂ ತಮ್ಮ ನಿಗಮ ಆಗಬೇಕೆಂದು ಕೇಳುತ್ತಾರೆ. ಸಾಮಾಜಿಕವಾಗಿ ಆರ್ಥಿಕ ದುರ್ಬಲರಾದವರು ಎಲ್ಲರು ಕೇಳುತ್ತಾರೆ. ಯು. ಟಿ. ಖಾದರ್ ಅವರು ಹೇಳಿರುವಂತೆ, ಎಲ್ಲಾ ಜಾತಿಗಳ ನಿಗಮ ರಚನೆಗೆ ಬೇಡಿಕೆ ಬರುತ್ತದೆ. ಅದನ್ನು ಸರಕಾರ ಮಾಡಲಿ ಎಂದರು.