ETV Bharat / state

ಕರಾವಳಿ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯಲು ಕ್ರಮ ಕೈಗೊಳ್ಳಿ: ರಾಕೇಶ್ ಮಲ್ಲಿ ಆಗ್ರಹ - Mangalore latest News

ದ.ಕ ಜಿಲ್ಲೆಯ ಬೃಹತ್ ಕೈಗಾರಿಕಾ ವಲಯಗಳಾದ ಎಂಆರ್​ಪಿಎಲ್, ಎಚ್​ಪಿಸಿಎಲ್, ಎಂಸಿಎಫ್, ಕುದುರೆಮುಖ, ಎನ್ಎಂಪಿಟಿ ಸಹಿತ ಸ್ಥಳೀಯ ಆರ್ಥಿಕ ವಲಯಗಳಿಗೆ ಭೂಮಿಯನ್ನು ಕಳೆದುಕೊಂಡವರ ಕುಟುಂಬದ ಓರ್ವ ಸದಸ್ಯನಿಗೆ ಉದ್ಯೋಗ ಕೊಡುವ ಭರವಸೆಯನ್ನು ಕಂಪನಿಗಳು ನೀಡಿತ್ತು. ಆದರೆ ಬಹಳಷ್ಟು ಜನರಿಗೆ ಇನ್ನೂ ಉದ್ಯೋಗ ದೊರಕಿಲ್ಲ. ಆದ್ದರಿಂದ ಇನ್ನಾದರೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಇಂಟಕ್ ರಾಜ್ಯ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಆಗ್ರಹಿಸಿದರು.

rakesh-malli
ರಾಕೇಶ್ ಮಲ್ಲಿ
author img

By

Published : Jul 13, 2021, 7:35 AM IST

ಮಂಗಳೂರು: ನಗರದಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳಿಂದಾಗಿ ಸಾಕಷ್ಟು ಮಂದಿ ತಮ್ಮ ಭೂಮಿ‌ ಕಳೆದುಕೊಂಡಿದ್ದಾರೆ. ಆದರೆ ಈ ಕೈಗಾರಿಕೆಗಳಲ್ಲಿ‌ ಅನ್ಯ ರಾಜ್ಯದವರಿಗೆ ಉದ್ಯೋಗ ದೊರಕುತ್ತಿದ್ದು, ಸ್ಥಳೀಯ ಯುವಕರಿಗೆ ವಂಚನೆಯಾಗುತ್ತಿದೆ. ತಕ್ಷಣ ಸರೋಜಿನಿ ಮಹಿಷಿ ವರದಿ ಮೂಲಕ ಸ್ಥಳೀಯರಿಗೆ ಉದ್ಯೋಗ ದೊರೆಯುವಂತಾಗಲಿ ಎಂದು ಇಂಟಕ್ ರಾಜ್ಯ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ದ.ಕ ಜಿಲ್ಲೆಯ ಬೃಹತ್ ಕೈಗಾರಿಕಾ ವಲಯಗಳಾದ ಎಂಆರ್​ಪಿಎಲ್, ಎಚ್​ಪಿಸಿಎಲ್, ಎಂಸಿಎಫ್, ಕುದುರೆಮುಖ, ಎನ್ಎಂಪಿಟಿ ಸಹಿತ ಸ್ಥಳೀಯ ಆರ್ಥಿಕ ವಲಯಗಳಿಗೆ ಭೂಮಿಯನ್ನು ಕಳೆದುಕೊಂಡವರ ಕುಟುಂಬದ ಓರ್ವ ಸದಸ್ಯನಿಗೆ ಉದ್ಯೋಗ ಕೊಡುವ ಭರವಸೆಯನ್ನು ಕಂಪನಿಗಳು ನೀಡಿತ್ತು. ಆದರೆ ಬಹಳಷ್ಟು ಜನರಿಗೆ ಇನ್ನೂ ಉದ್ಯೋಗ ದೊರಕಿಲ್ಲ. ಆದ್ದರಿಂದ ಇನ್ನಾದರೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಇತ್ತೀಚೆಗೆ ಎಂಆರ್​ಪಿಎಲ್ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ವಂಚಿಸಿ ಇತರ ರಾಜ್ಯಗಳ ಯುವಕರಿಗೆ ಉದ್ಯೋಗ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಸದರು ಹಾಗೂ ಸಚಿವರು ತಕ್ಷಣ ಎಚ್ಚೆತ್ತು ಸ್ಥಳೀಯರಿಗೆ ಉದ್ಯೋಗದ ವ್ಯವಸ್ಥೆಯನ್ನು ಮಾಡಬೇಕು. ನಗರದ ಬೈಕಂಪಾಡಿಯಲ್ಲಿ ಕೈಗಾರಿಕಾ ವಲಯದಲ್ಲಿ 'ಸ್ಕಿಲ್ಡ್ ಲೇಬರ್ ಮೆಷಿನ್ ಆ್ಯಂಡ್ ಟೂಲ್ಸ್' ಎಂಬ ತರಬೇತಿ ಕೇಂದ್ರ ಕಾರ್ಯಾಚರಿಸುತ್ತಿದೆ. ಆದರೆ ಇದು ಹೆಸರಿಗೆ ಮಾತ್ರ ತೆರೆದಿದ್ದು, ಇಲ್ಲಿ ಸ್ಥಳೀಯರಿಗೆ ಯಾವುದೇ ತರಬೇತಿ ನೀಡದೆ ಬೇರೆ ರಾಜ್ಯಗಳ ಯುವಕರಿಗೆ ಇಲ್ಲಿ ನೌಕರಿ ದೊರೆಯುತ್ತಿದೆ. ಆದ್ದರಿಂದ ಇಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕೋವಿಡ್​ನಿಂದ ಮರಣ ಹೊಂದಿದವರ ಬಗ್ಗೆ ಸರ್ಕಾರ ಸರಿಯಾದ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ಮರಣ ಹೊಂದಿದವರ ಅಂಕಿಅಂಶಗಳನ್ನು ಸರಿಯಾಗಿ ಗುರುತಿಸಿ ಮೃತರ ಕುಟುಂಬಗಳಿಗೆ ಸರ್ಕಾರ ಶೀಘ್ರದಲ್ಲಿಯೇ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.