ETV Bharat / state

ಉಳ್ಳಾಲ, ಸೋಮೇಶ್ವರ, ಉಚ್ಚಿಲದಲ್ಲಿ ಸಮುದ್ರ ಪ್ರಕ್ಷುಬ್ದ: ಅಲೆಗಳ ನರ್ತನಕ್ಕೆ ತಡೆಗೋಡೆ ಕಲ್ಲುಗಳು ನೀರುಪಾಲು - ಉಳ್ಳಾಲ ಮಳೆ ಅವಾಂತರ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ ಹಾಗು ಉಚ್ಚಿಲ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಬೃಹತ್‌ ಅಲೆಗಳ ಅಬ್ಬರಕ್ಕೆ ತಡೆಗೋಡೆಗಾಗಿ ಹಾಕಲಾಗಿದ್ದ ಬೃಹದಾಕಾರದ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

rain-effect-in-dakshina-kannada-district
ಉಳ್ಳಾಲ ಸೋಮೇಶ್ವರ ಉಚ್ಚಿಲ ಪ್ರದೇಶ
author img

By

Published : Aug 7, 2020, 6:19 PM IST

ಉಳ್ಳಾಲ : ಕಳೆದ ದಿನಗಳಿಂದ ಜಿಲ್ಲೆಯಲ್ಲಿ ಗಾಳಿ, ಮಳೆ ಅಬ್ಬರ ಹೆಚ್ಚುತ್ತಿರುವಂತೆಯೇ ಉಳ್ಳಾಲ, ಸೋಮೇಶ್ವರ ಹಾಗು ಉಚ್ಚಿಲ ಪ್ರದೇಶದಲ್ಲಿ ಕಡಲು ಕೂಡಾ ಪ್ರಕ್ಷುಬ್ದಗೊಂಡಿದೆ. ಇಲ್ಲಿನ ಅಲೆಗಳ ಅಬ್ಬರಕ್ಕೆ ತಡೆಗೋಡೆಗಾಗಿ ಹಾಕಲಾಗಿದ್ದ ಬೃಹತಾಕಾರದ ಕಲ್ಲುಗಳು ಸಮುದ್ರ ಪಾಲಾಗುತ್ತಿದ್ದು, ಕಡಲತಡಿಯ ಜನರನ್ನು ಆತಂಕಕ್ಕೀಡು ಮಾಡಿದೆ.

ಉಳ್ಳಾಲ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಸಮುದ್ರ ಪ್ರಕ್ಷುಬ್ದ

ಕಳೆದ ಹಲವು ವರ್ಷದಿಂದ ಕಡಲ ಕೊರೆತದಿಂದಾಗಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪರಿಸರದಲ್ಲಿ ಮನೆಗಳು ಸಮುದ್ರ ಪಾಲಾಗಿದ್ದವು. ಇದರ ಜೊತೆಗೆ ಕೆಲವು ಮನೆಗಳಿಗೂ ಹಾನಿಯಾಗಿತ್ತು. ಅದರಲ್ಲೂ ಕಳೆದ ವರ್ಷವಂತೂ ಕಡಲ್ಕೊರೆತದ ಸಮಸ್ಯೆ ಈ ಭಾಗದಲ್ಲಿ ಬಹಳಷ್ಟು ತೊಂದರೆ ಉಂಟು ಮಾಡಿತ್ತು. ಇದಕ್ಕಾಗಿ ಸರ್ಕಾರವು ಸಮುದ್ರ ಬದಿಯಲ್ಲಿ ಬೃಹತ್ ಆಕಾರದ ಬಂಡೆಗಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸಿ ಅಲೆಗಳ ಅಬ್ಬರವನ್ನು ತಡೆಯಲು ಪ್ರಯತ್ನಿಸಿತ್ತು.

ಆದರೀಗ ಕಡಲಿನ ಅಲೆಗಳ ತೀವ್ರತೆಗೆ ಬೃಹತಾಕಾರದ ಕಲ್ಲುಗಳು ಕೂಡಾ ಕಡಲಿನ ಒಡಲು ಸೇರುತ್ತಿವೆ. ಸೋಮೇಶ್ವರ ಸಮೀಪದ ಉಚ್ಚಿಲ ಭಾಗದಲ್ಲಿ ತಡೆಗೋಡೆಯ ಕಲ್ಲುಗಳು ಸಮುದ್ರ ಪಾಲಾಗುವುದರಿಂದ ಇಲ್ಲಿಯ ನಾಲ್ಕೈದು ಮನೆಗಳು ಅಪಾಯದಂಚಿನಲ್ಲಿದೆ.

ಇದೀಗ ಮತ್ತೆ ಈ ಭಾಗದಲ್ಲಿ ಜೆಸಿಬಿ ಯಂತ್ರದ ಮೂಲಕ ಕಲ್ಲುಗಳನ್ನು ಹಾಕಲಾಗುತ್ತಿದೆಯಾದರೂ ಮತ್ತೊಂದು ಕಡೆಯಿಂದ ಕಲ್ಲುಗಳು ನೀರು ಪಾಲಾಗುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.