ಮಂಗಳೂರು: ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆಯು ಲಘುವಾಗಿ ಕಾಣುತ್ತಿದೆ ಎಂದು ಮಂಗಳೂರು ವಿವಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಲಹೆಗಾರ ದಿನಕರ ಶೆಟ್ಟಿ ಹೇಳಿದರು.
ನಗರದ ಬಲ್ಮಠದಲ್ಲಿರುವ ಆರ್ಯಸಮಾಜದಲ್ಲಿ ನಡೆದ ಖಂಡನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಆಯೋಗ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದರೆ ರಾಯಚೂರಿನ ಅತ್ಯಾಚಾರ ಪ್ರಕರಣ ನಡೆಯುತ್ತಿರಲಿಲ್ಲ. ಮಂಗಳೂರಿನ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳ ಆತ್ಮಹತ್ಯೆ ತನಿಖೆ ನಡೆಸಲು ಬಂದಿರುವ ಮಹಿಳಾ ಇಲಾಖೆಯು ಪೊಲೀಸರಿಗೆ ಹೇಳಿ ತನಿಖೆ ನಡೆಸಲು ಆಗ್ರಹಿಸುತ್ತಿದ್ದರೆ ಮತ್ತೊಮ್ಮೆ ಇಂತಹ ಪ್ರಕರಣ ಮರುಕಳಿಸುತ್ತಿರಲಿಲ್ಲ ಎಂದು ಅವರು ಆರೋಪಿಸಿದರು.