ಪುತ್ತೂರು(ದಕ್ಷಿಣ ಕನ್ನಡ): ಆಟೋ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಪುತ್ತೂರು ಉಪ್ಪಿನಂಗಡಿಯ ಪಡೀಲ್ ನಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ, ಗಾಯಗೊಂಡ ಮಹಿಳೆಯನ್ನು ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಲೇಡಿ ಸಿಂಗಂ ಕ್ಯಾತಿಯ ದಕ್ಷ ಅಧಿಕಾರಿ ಪಿ.ಎಸ್.ಐ ಸೇಸಮ್ಮ ಮತ್ತು ಎ.ಎಸ್.ಐ ರಾಧಾಕೃಷ್ಣ ಅವರು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇಂದು ಬೆಳಗ್ಗೆ 9ಗಂಟೆ ಸುಮಾರಿಗೆ ಚಾಲಕ ಅಬ್ದುಲ್ ಎಂಬವರ ಆಟೋ ಡಿವೈಡರ್ಗೆ ಬಡಿದ ಹಿನ್ನೆಲೆಯಲ್ಲಿ ಮಹಿಳೆ ಕುಸುಮಾವತಿ ಎಂಬುವರಿಗೆ ಗಾಯವಾಗಿತ್ತು. ಈ ವೇಳೆ ಜನರು ಕೂಡ ಅಪಘಾತ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಇದೇ ರಸ್ತೆಯಲ್ಲಿ ಕರ್ತವ್ಯಕ್ಕೆಂದು ತೆರಳುತ್ತಿದ್ದ ಮಹಿಳಾ ಠಾಣಾ ಪಿಎಸ್ಐ ಸೇಸಮ್ಮ ಮತ್ತು ಎಎಸ್ಐ ರಾಧಾಕೃಷ್ಣ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಕರೆದೊಯ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತ.. ಸಿಐಡಿ ಮಹಾನಿರ್ದೇಶಕ ಗೋವಿಂದ್ ಸಿಂಗ್ ಪತ್ನಿ ಸಾವು