ETV Bharat / state

ಪುತ್ತೂರು: ನಾಳೆ ನಗರಸಭೆಯ ಆಡಳಿತ ಸಂಕೀರ್ಣ ಶಿಲಾನ್ಯಾಸ, ಗಾಂಧಿ ಕಟ್ಟೆ ಲೋಕಾರ್ಪಣೆ - Putturu Gandhi market inauguration news

ವಾರದ ಸಂತೆಯನ್ನು ತಾತ್ಕಾಲಿಕವಾಗಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರರಿಸಲಾಗಿತ್ತು. ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ಅದೇ ಕಟ್ಟಡದ ಕೆಳಭಾಗದಲ್ಲಿ ಸಂತೆ ಕಟ್ಟೆ ನಿರ್ಮಿಸಲಾಗಿತ್ತು. ಆದರೆ ಅದು ಕಿರಿದಾಯಿತು ಎಂಬ ಕಾರಣಕ್ಕೆ ಸಂತೆ ವ್ಯಾಪಾರಸ್ಥರು ಅಲ್ಲಿಗೆ ತೆರಳಲು ನಿರಾಕರಿಸಿದ ಕಾರಣ ಸಂತೆ ಕಿಲ್ಲೇ ಮೈದಾನದಲ್ಲೇ ಮುಂದುವರಿಯಿತು.

ಗಾಂಧಿ ಕಟ್ಟೆ ಲೋಕಾರ್ಪಣೆ
ಗಾಂಧಿ ಕಟ್ಟೆ ಲೋಕಾರ್ಪಣೆ
author img

By

Published : Aug 25, 2020, 7:11 PM IST

ಪುತ್ತೂರು: ಪುತ್ತೂರು ನಗರಸಭೆಯ ಆಡಳಿತ ಕಚೇರಿ ಸಂಕೀರ್ಣವನ್ನು ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಆಗಸ್ಟ್ 26ರಂದು ಶಿಲಾನ್ಯಾಸ ನೆರವೇರಲಿದೆ.

ಮಿನಿ ವಿಧಾನಸೌಧದ ಪಕ್ಕದಲ್ಲೇ ಇರುವ ಹಳೆಯ ಪುರಸಭೆ ಕಚೇರಿ ಕಟ್ಟಡದ ಸ್ಥಳದಲ್ಲಿ ಸುಮಾರು 8-10 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಆಡಳಿತ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಶಿಲಾನ್ಯಾಸ ಸಮಾರಂಭ ಆ. 26 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ರಾಜ್ಯ ಪೌರಾಡಳಿತ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಪುತ್ತೂರು ಶಾಸಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಗಾಂಧಿ ಕಟ್ಟೆ ಲೋಕಾರ್ಪಣೆ

ಪ್ರಸ್ತುತ ಪುತ್ತೂರು ನಗರಸಭೆ ಕಚೇರಿಯು ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಸಂಕೀರ್ಣವು ಹಳೆಯ ಸಂತೆಕಟ್ಟೆಯಾಗಿದ್ದು, ಶತಮಾನಗಳ ಕಾಲ ಈ ಜಾಗದಲ್ಲಿ ಸಂತೆ ನಡೆಯುತ್ತಿತ್ತು. 2002ರ ಅವಧಿಯಲ್ಲಿ ಪುತ್ತೂರಿಗೆ ಎಡಿಬಿ ಯೋಜನೆಯ ಹಣ ಮಂಜೂರಾದಾಗ ಇದೇ ಸಂತೆ ಕಟ್ಟೆಯ ಸ್ಥಳದಲ್ಲಿ ಅಂದಿನ ಪುರಸಭೆಯ ಹೊಸ ಆಡಳಿತ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ವಾರದ ಸಂತೆಯನ್ನು ತಾತ್ಕಾಲಿಕವಾಗಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರರಿಸಲಾಗಿತ್ತು. ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ಅದೇ ಕಟ್ಟಡದ ಕೆಳಭಾಗದಲ್ಲಿ ಸಂತೆ ಕಟ್ಟೆ ನಿರ್ಮಿಸಲಾಗಿತ್ತು. ಆದರೆ ಅದು ಕಿರಿದಾಯಿತು ಎಂಬ ಕಾರಣಕ್ಕೆ ಸಂತೆ ವ್ಯಾಪಾರಸ್ಥರು ಅಲ್ಲಿಗೆ ತೆರಳಲು ನಿರಾಕರಿಸಿದ ಕಾರಣ ಸಂತೆ ಕಿಲ್ಲೇ ಮೈದಾನದಲ್ಲೇ ಮುಂದುವರಿಯಿತು.

ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು 8-10ಕೋಟಿ ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಈ ಪೈಕಿ 1 ಕೋಟಿ ರೂ. ನಗರೋತ್ಥಾನ ಯೋಜನೆಯಲ್ಲಿ ಮೀಸಲಿರಿಸಲಾಗಿದೆ. 1 ಕೋಟಿ ರೂ. ನಗರಸಭೆಯ ಬಜೆಟ್‌ನಲ್ಲಿ ಇರಿಸಲಾಗಿದೆ. 2 ಕೋಟಿ ರೂ. ಶಾಸಕರು ವಿಶೇಷ ಅನುದಾನ ರೂಪದಲ್ಲಿ ನೀಡಲಾಗಿದೆ. ಉಳಿದ ಹಣದ ಹೊಂದಾಣಿಕೆ ಶಾಸಕರ ಮೂಲಕ ನಡೆಯಲಿದೆ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಪುತ್ತೂರು ಗಾಂಧಿ ಕಟ್ಟೆ ನಾಳೆ ಲೋಕಾರ್ಪಣೆ ಆಗಲಿದೆ. ಮಹಾತ್ಮಾ ಗಾಂಧೀಜಿಯವರು 1934ರಲ್ಲಿ ಪುತ್ತೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಈಗಿನ ಬಸ್ ನಿಲ್ದಾಣದ ಬಳಿಯಲ್ಲಿನ ಅಶ್ವತ್ಥ ಮರದ ಬಳಿಯಲ್ಲಿ ಕುಳಿತು ಜನರನ್ನು ಉದ್ದೇಶಿಸಿ ಮಾತನಾಡಿದ ಸ್ಥಳವನ್ನು ಗಾಂಧಿ ಕಟ್ಟೆಯಾಗಿ ನಿರ್ಮಿಸಲಾಗಿತ್ತು. ಇದೀಗ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರಸಭೆಯ ವತಿಯಿಂದ ಸುಸಜ್ಜಿತವಾಗಿ ನವೀಕರಣಗೊಂಡಿರುವ ಗಾಂಧಿ ಕಟ್ಟೆಯ ಲೋಕಾರ್ಪಣೆ ನಾಳೆ ನಡೆಯಲಿದೆ. ಹಾಗೆಯೇ ಪುತ್ತೂರು ಪುರಭವನವು ಲೋಕಾರ್ಪಣೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.