ETV Bharat / state

ನಿಯಮ ಉಲ್ಲಂಘಿಸಿ ಆಂಬ್ಯುಲೆನ್ಸ್ ಮೂಲಕ ಗಡಿ ದಾಟಲು ಯತ್ನ: ಪುತ್ತೂರಿನಲ್ಲಿ ಏಳು ಮಂದಿ ಅಂದರ್​

ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶಿಸುವಾಗ ಪುತ್ತೂರು ಪೊಲೀಸರು ಆಂಬ್ಯುಲೆನ್ಸ್​ನಲ್ಲಿದ್ದ ಏಳು ಮಂದಿಯನ್ನ ಬಂಧಿಸಿ, ಆರೋಪಿಗಳ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.

Puttur Police Arrested Seven membe
ಪುತ್ತೂರಿನಲ್ಲಿ ಏಳು ಮಂದಿಯ ಬಂಧನ
author img

By

Published : Apr 19, 2020, 3:34 PM IST

ಮಂಗಳೂರು: ಆಂಬ್ಯುಲೆನ್ಸ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ದಾಟಲು ಯತ್ನಿಸಿದ 7 ಮಂದಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

Puttur Police Arrested Seven membe
ಪುತ್ತೂರಿನಲ್ಲಿ ಏಳು ಮಂದಿಯ ಬಂಧನ

ಪುತ್ತೂರಿನ ಮಹಮ್ಮದ್ ಜುನೈದ್, ಮಹಮ್ಮದ್ ಇಲ್ಯಾಸ್, ಸಲೀಮುದ್ದೀನ್ ಯಾನೆ ಪಾಪು, ಅಬ್ದುಲ್ ರಜಾಕ್, ರಶೀದ್, ಸಂಶುದ್ದೀನ್, ಮಹಮ್ಮದ್ ಇರ್ಷಾದ್ ಬಂಧಿತರು. ಲಾಕ್‌ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಪುತ್ತೂರಿನ ಏಳು ಮಂದಿ ಆಂಬ್ಯುಲೆನ್ಸ್ ನಲ್ಲಿ ರಾತ್ರಿ ಮೈಸೂರು ಕಡೆ ಹೊರಟಿದ್ದರು.

Puttur Police Arrested Seven membe
ಪುತ್ತೂರಿನಲ್ಲಿ ಏಳು ಮಂದಿಯ ಬಂಧನ

ಕೊಡಗು ಜಿಲ್ಲೆಯ ಕುಶಾಲನಗರ ಸರಹದ್ದಿನ ಕೊಪ್ಪದಲ್ಲಿ ಇವರನ್ನು ತಡೆದ ಪೊಲೀಸರು ತಪಾಸಣೆ ಮಾಡಿದಾಗ ಯಾವುದೇ ತುರ್ತು ಸೇವೆಗೆ ಹೋಗದೇ ಲಾಕ್‌ಡೌನ್‌ ನಿಯಮದಿಂದ ತಪ್ಪಿಸಿಕೊಳ್ಳಲು ಹೋಗುತ್ತಿರುವ ವಿಚಾರ ತಿಳಿದಿದೆ. ಆಗ ಅದನ್ನು ಮುಂದೆ ಹೋಗಲು ಬಿಡದೇ ವಾಪಸ್​ ಕಳುಹಿಸಿದ್ದರು. ಹಿಂತಿರುಗಿ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶಿಸುವಾಗ ಪುತ್ತೂರು ಪೊಲೀಸರು ಅಂಬ್ಯುಲೆನ್ಸ್​ನಲ್ಲಿದ್ದ ಏಳು ಮಂದಿಯನ್ನ ಬಂಧಿಸಿ, ಆರೋಪಿಗಳ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.