ETV Bharat / state

ಪುತ್ತೂರು ನವೀಕೃತ ಗಾಂಧಿ ಕಟ್ಟೆ ಶೀಘ್ರ ಲೋಕಾರ್ಪಣೆ - ಪುತ್ತೂರು ಗಾಂಧಿ ಪ್ರತಿಮೆ ಶೀಘ್ರದಲ್ಲಿ ಉದ್ಘಾಟನೆ

ನಗರದ ಹೃದಯ ಭಾಗದ ಬಸ್​ ನಿಲ್ದಾಣ ಬಳಿಯ ಗಾಂಧಿ ಕಟ್ಟೆಯನ್ನು 2018ರ ಮಾರ್ಚ್​ 17ರಂದು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ಈ ವೇಳೆ ಅಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಕೆಎಸ್​ಆರ್​ಟಿಸಿ ವಾಣಿಜ್ಯ ಸಂಕೀರ್ಣದ ಕೊಠಡಿಯೊಳಗೆ ಇರಿಸಲಾಗಿತ್ತು. ಬಳಿಕ ಗಾಂಧಿ ಕಟ್ಟೆಯನ್ನು ಮರು ನಿರ್ಮಿಸಲು ನಗರಸಭೆ ಮುಂದಾಗಿತ್ತು. ಆದರೆ ಸ್ಥಳೀಯ ವ್ಯಕ್ತಿಯೊಬ್ಬರು ಹೈಕೋರ್ಟ್​ ಮೂಲಕ ಕಾಮಗಾರಿಗೆ ತಡೆಯಾಜ್ಞೆ

Puttur Gandhi statue will be inaugurated soon
ಪುತ್ತೂರು ಗಾಂಧಿ ಕಟ್ಟೆ
author img

By

Published : Feb 12, 2020, 7:25 PM IST

ಪುತ್ತೂರು: ಎರಡು ವರ್ಷಗಳಿಂದ ಕೋಣೆಯೊಳಗೆ ಬಂದಿಯಾಗದ್ದ ನಗರದ ಗಾಂಧಿ ಕಟ್ಟೆಯ ಗಾಂಧಿ ಪ್ರತಿಮೆ ಬಂಧ ಮುಕ್ತವಾಗಗುವ ಸಮಯ ಸನ್ನಿಹಿತವಾಗಿದೆ.

ನಗರದ ಹೃದಯ ಭಾಗದ ಬಸ್​ ನಿಲ್ದಾಣ ಬಳಿಯ ಗಾಂಧಿ ಕಟ್ಟೆಯನ್ನು 2018ರ ಮಾರ್ಚ್​ 17ರಂದು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ಈ ವೇಳೆ ಅಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಕೆಎಸ್​ಆರ್​ಟಿಸಿ ವಾಣಿಜ್ಯ ಸಂಕೀರ್ಣದ ಕೊಠಡಿಯೊಳಗೆ ಇರಿಸಲಾಗಿತ್ತು. ಬಳಿಕ ಗಾಂಧಿ ಕಟ್ಟೆಯನ್ನು ಮರು ನಿರ್ಮಿಸಲು ನಗರಸಭೆ ಮುಂದಾಗಿತ್ತು. ಆದರೆ ಸ್ಥಳೀಯ ವ್ಯಕ್ತಿಯೊಬ್ಬರು ಹೈಕೋರ್ಟ್​ ಮೂಲಕ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಗಾಂಧಿ ಕಟ್ಟೆ ಪುನರ್​ ನಿರ್ಮಾಣ ಕಾಮಾಗಾರಿ ನನೆಗುದ್ದಿಗೆ ಬಿದ್ದಿತ್ತು. ಅಂತಿಮವಾಗಿ ಹೈಕೋರ್ಟ್ ನಗರಸಭೆ ಪರ ತೀರ್ಪು ನೀಡಿದ್ದರಿಂದ, ಕಳೆದು ತಿಂಗಳು ಮತ್ತೆ ಕಾಮಗಾರಿ ಪ್ರಾರಂಭಗೊಂಡು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಈ ತಿಂಗಳಾಂತ್ಯಕ್ಕೆ ನವೀಕೃತ ಗಾಂಧಿ ಕಟ್ಟೆಯ ಲೋಕಾರ್ಪಣೆ ನಡೆಯಲಿದೆ.

ಪುತ್ತೂರು ಗಾಂಧಿ ಕಟ್ಟೆ

ತಿಂಗಳಾಂತ್ಯಕ್ಕೆ ಜಿಲ್ಲಾಧಿಕಾರಿ ಪುತ್ತೂರಿಗೆ ಆಗಮಿಸಲಿದ್ದು, ಈ ವೇಳೆ ಕಾಮಗಾರಿಯನ್ನು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ರಾಜ್ಯ ಅಥವಾ ಸ್ಥಳೀಯ ಹಿರಿಯ ನಾಯಕರ ಮೂಲಕ ಕಾಮಗಾರಿ ಲೋಕಾರ್ಪಣೆ ನಡೆಯಲಿದೆ. 8 ಲಕ್ಷ ​ರೂ. ವೆಚ್ಚದ ಈ ಕಾಮಗಾರಿಯೂ ಗಾಂಧಿ ಕಟ್ಟೆ, ಗಾಂಧಿ ಪ್ರತಿಮೆ ಜೊತೆಗೆ ಅಲ್ಲೇ ಇರುವ ಅಶ್ವಥ್ಧ ಮರದ ಸುತ್ತ ಕಟ್ಟೆಯನ್ನು ಕಟ್ಟುವುದು ಒಳಗೊಂಡಿದೆ. ಅಶ್ವಥ್ಥ ಮರಕ್ಕೆ ಹಾನಿಯಾಗದಂತೆ ಕಾಮಗಾರಿ ವೇಳೆ ಪೂರಕ ಕ್ರಮಕೈಗೊಳ್ಳಲಾಗಿದೆ.

ಸದ್ಯ ನವೀಕರಣಗೊಳ್ಳುತ್ತಿರುವ ಈ ಗಾಂಧಿ ಕಟ್ಟೆಗೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವ 1934ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಭೇಟಿ ನೀಡಿದ್ದ ವೇಳೆ ಈ ಸ್ಥಳದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿದ್ದರು. ಹೀಗಾಗಿ 30 ವರ್ಷಗಳ ಹಿಂದೆ ಪುತ್ತೂರು ಗ್ರಾಮ ಪಂಚಾಯತ್​ ಈ ಗಾಂಧಿಕಟ್ಟೆಯನ್ನು ನಿರ್ಮಿಸಿತ್ತು. ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಕಾಮಗಾರಿ ವೇಳೆ ತಾತ್ಕಾಲಿಕವಾಗಿ ಈ ಗಾಂಧಿ ಕಟ್ಟೆಯನ್ನು ತೆರವುಗೊಳಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.