ETV Bharat / state

ಮೊಬೈಲ್ ಲೈಟ್ ಹಾಕಿಸಿ ನನ್ನ ಸಂದೇಶ ಮನೆಮನೆಗೆ ತಲುಪಿಸಿ ಎಂ‌ದ ಮೋದಿ - ಮೂಡಬಿದಿರೆ ಕ್ಷೇತ್ರದ ಮೂಲ್ಕಿ

ಮೂಡಬಿದಿರೆ ಕ್ಷೇತ್ರದ ಮೂಲ್ಕಿಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದರು.

ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

author img

By

Published : May 3, 2023, 4:18 PM IST

ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೂಡಬಿದಿರೆ ಕ್ಷೇತ್ರದ ಮೂಲ್ಕಿಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕರ್ತರಲ್ಲಿ ಮೊಬೈಲ್ ಫ್ಲ್ಯಾಶ್‌‌‌ ಲೈಟ್ ಹಾಕಿಸಿ ನನ್ನ ಸಂದೇಶ ಮನೆಮನೆಗೆ ಮುಟ್ಟಿಸಿ ಕರೆ ನೀಡಿದ್ದಾರೆ.

ನನಗೊಂದು ವೈಯಕ್ತಿಕವಾಗಿ ಸಹಾಯ ಮಾಡುವಿರಾ? ಎಂದು ಜನರನ್ನು ಕೇಳಿದ ಮೋದಿ ಎಲ್ಲರಲ್ಲಿಯೂ ಮೊಬೈಲ್ ಟಾರ್ಚ್ ಬೆಳಗಿಸುವಂತೆ ಕೇಳಿಕೊಂಡರು. ಎಲ್ಲರೂ ಮೊಬೈಲ್ ಟಾರ್ಚ್ ಬೆಳಗಿದ ನಂತರ ಮಾತನಾಡಿದ ಮೋದಿ, ಮನೆಮನೆಗೆ ಹೋಗಿ ದಿಲ್ಲಿಯಿಂದ‌ ಮುಲ್ಕಿಗೆ ಬಂದು ನಾನು ನಿಮಗೆ ‌ನಮಸ್ಕಾರ, ಪ್ರಣಾಮ ಹೇಳಿದ್ದೇನೆ ಎಂದು ತಿಳಿಸಿ ಎಂದಿದ್ದಾರೆ.

ಭಾಷಾಂತರ ಬೇಡ ಎಂದ ಕಾರ್ಯಕರ್ತರು: ಮೋದಿ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ಬಿಜೆಪಿ ರಾಜ್ಯ ವಕ್ತಾರ ಕ್ಯಾ ಗಣೇಶ್ ಕಾರ್ಣಿಕ್ ಮುಂದಾದರು. ಆದರೆ ಆ ಸಂದರ್ಭದಲ್ಲಿ ಕಾರ್ಯಕರ್ತರು ಭಾಷಾಂತರ ಬೇಡ ಎಂದು ಮೋದಿ ಮೋದಿ ಎಂದು ಘೋಷಣೆ ಹಾಕಿದರು. ಆಗ ಮಾತನಾಡಿದ ಮೋದಿ, ನೀವೇ ನಮ್ಮ ರಿಮೋಟ್ ಕಂಟ್ರೋಲ್. ನಿಮ್ಮ ಆದೇಶವನ್ನು ತಲೆಯ ಮೇಲಿಟ್ಟು ಪಾಲಿಸುತ್ತೇನೆ ಎಂದು ಹೇಳಿದರು.

ಪ್ರಧಾನಿಗೆ ಕಟೀಲು, ಧರ್ಮಸ್ಥಳ, ಬಪ್ಪನಾಡು, ಉಡುಪಿ ಪ್ರಸಾದ: ಕರಾವಳಿ ಜಿಲ್ಲೆಗೆ ಬಂದ ಪ್ರಧಾನಿ ನರೇಂದ್ರ ಮೋದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪುಣ್ಯಕ್ಷೇತ್ರಗಳ ಪ್ರಸಾದವನ್ನು ನೀಡಲಾಯಿತು. ಅವರಿಗೆ ಕೇಸರಿ ಶಾಲು ಮತ್ತು ಪೇಟ ಹಾಕಿ ಸ್ವಾಗತಿಸುವ ವೇಳೆ ಗಣಪತಿ ಮೂರ್ತಿ ಮತ್ತು ಉಡುಪಿ ಶ್ರೀಕೃಷ್ಣನ ಮೂರ್ತಿ ಮತ್ತು ಪ್ರಸಾದವನ್ನು ನೀಡಲಾಯಿತು. ಇದೇ ವೇಳೆ ಕಟೀಲು ಮತ್ತು ಬಪ್ಪನಾಡು ಕ್ಷೇತ್ರದ ಪ್ರಸಾದವನ್ನು ಶಾಸಕ ಉಮಾನಾಥ ಕೋಟ್ಯಾನ್ ನೀಡಿದರೆ, ಡಾ ವೀರೇಂದ್ರ ಹೆಗ್ಗಡೆ ಅವರು ನೀಡಿದ ಧರ್ಮಸ್ಥಳದ ಪ್ರಸಾದವನ್ನು ಶಾಸಕ ಹರೀಶ್ ಪೂಂಜಾ ನೀಡಿದರು.

ಕಾಲಿಗೆ ಬಿದ್ದ ಯಶ್ ಪಾಲ್- ಗದರಿದ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ತೆರಳುವ ವೇಳೆ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಪ್ರಧಾನಿ ಕಾಲು‌ಮುಟ್ಟಿ ನಮಸ್ಕರಿಸಿದರು. ಈ ಸಂದರ್ಭದಲ್ಲಿ ಕಾಲಿಗೆ ಬಿದ್ದದ್ದಕ್ಕೆ ಮೋದಿ ಗದರಿದ ಘಟನೆಯು ನಡೆಯಿತು.

ಚೆಕ್ ಮಾಡದೆ ಜನರನ್ನು ಕಳುಹಿಸಿ- ನಳಿನ್ ​: ನರೇಂದ್ರ ಮೋದಿ ಆಗಮನಕ್ಕೆ ಮುಂಚೆ ಸಭಾಂಗಣಕ್ಕೆ ಬರುವ ಕಾರ್ಯಕರ್ತರು ತಪಾಸಣೆಗಾಗಿ ಗುಂಪು ಗುಂಪಾಗಿ ನಿಂತಿದ್ದರು. ಭದ್ರತೆ ದೃಷ್ಟಿಯಿಂದ ಭದ್ರತಾ ಸಿಬ್ಬಂದಿ ಒಬ್ಬೊಬ್ಬರನ್ನೇ ತಪಾಸಣೆ ನಡೆಸುತ್ತಿದ್ದರು. ಇದನ್ನು ಗಮನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪೊಲೀಸರಿಗೆ ಜನರನ್ನು ತಪಾಸಣೆ ಮಾಡದೆ ಒಳಗೆ ಕಳುಹಿಸಿ ಎಂದ ಘಟನೆ ನಡೆಯಿತು.

50 ರಿಂದ 60 ಸಾವಿರ ಜನ: ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ಜನರು ಆಗಮಿಸಿದ್ದರು. ಈವರೆಗೆ ಪ್ರಧಾನಿ ಕಾರ್ಯಕ್ರಮ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ಮೂಡಬಿದಿರೆ ಕ್ಷೇತ್ರದ ಮೂಲ್ಕಿಯ ಕೊಳ್ನಾಡು ಮೈದಾನದಲ್ಲಿ ನಡೆದಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ 50 ರಿಂದ 60 ಸಾವಿರ ಜನ ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೂಲ್ಕಿಯಲ್ಲಿ ಕಾರ್ಯಕ್ರಮ ನಡೆದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರವನ್ನು ಬೇರೆಡೆಗೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿದ ಸಂದರ್ಭದಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್​ನಿಂದ ಜನರು ಸಮಸ್ಯೆಗೊಳಗಾದರು.

ಟಿಕೆಟ್ ಸಿಗದ ಅಂಗಾರ, ಸಂಜೀವ ಮಠಂದೂರು, ಸುಕುಮಾರ್ ಶೆಟ್ಟಿ, ಹಾಲಾಡಿ ಗೈರು : ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 13 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು, ಎರಡು ಕ್ಷೇತ್ರದ ಸಂಸದರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ‌ ಹಾಲಿ ಶಾಸಕರಾಗಿರುವ ಬಿಜೆಪಿ ಟಿಕೆಟ್ ತಪ್ಪಿರುವವರನ್ನು ಆಹ್ವಾನಿಸಲಾಗಿತ್ತು.

ಟಿಕೆಟ್ ತಪ್ಪಿದ ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಮತ್ತು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ಭಾಗಿಯಾದರೆ ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಸುಳ್ಯ ಕ್ಷೇತ್ರದ ಶಾಸಕ ಸಚಿವ ಅಂಗಾರ, ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಗೈರಾಗಿದ್ದರು. ಟಿಕೆಟ್ ಘೋಷಣೆ ಮುಂಚೆಯೆ ನಿವೃತ್ತಿ ಘೋಷಿಸಿದ್ದ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಗೈರಾಗಿದ್ದರು.

ಇದನ್ನೂ ಓದಿ: ಚುನಾವಣೆಗಾಗಿ ಕಾಂಗ್ರೆಸ್‌ ದೇಶ ವಿರೋಧಿ ಶಕ್ತಿಗಳ ಸಹಾಯ ಪಡೆಯುತ್ತದೆ: ಮುಲ್ಕಿಯಲ್ಲಿ ಮೋದಿ ಗಂಭೀರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.