ETV Bharat / state

ಮಂಗಳೂರಿನಲ್ಲಿ ಭಾರಿ ಮಳೆಗೆ ಪಂಪ್​ವೆಲ್​ ಜಲಾವೃತ: ಟ್ರಾಫಿಕ್ ಜಾಮ್ - ಮಂಗಳೂರಿನಲ್ಲಿ ಧಾರಾಕಾರವಾಗಿ ಮಳೆ

ಮಂಗಳೂರಿನಲ್ಲಿಂದು ಸುರಿದ ಧಾರಾಕಾರ ಮಳೆಗೆ ಪಂಪ್​ವೆಲ್ ಫ್ಲೈಓವರ್ ಅಡಿಭಾಗ ಸಂಪೂರ್ಣ ಜಲಾವೃತವಾಗಿದೆ.

ಮಂಗಳೂರಿನಲ್ಲಿ ಭಾರಿ ಮಳೆಗೆ ಪಂಪ್​ವೆಲ್​ ಜಲಾವೃತ

author img

By

Published : Jul 3, 2023, 8:16 PM IST

ಮಂಗಳೂರಿನಲ್ಲಿ ಭಾರಿ ಮಳೆಗೆ ಪಂಪ್​ವೆಲ್​ ಜಲಾವೃತ

ಮಂಗಳೂರು: ನಗರದಲ್ಲಿ ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಗೆ ಪಂಪ್ ವೆಲ್ ಸಂಪೂರ್ಣ ಜಲಾವೃತಗೊಂಡಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಮಂಗಳೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. 2 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಪಂಪ್​ವೆಲ್ ಫ್ಲೈಓವರ್ ಅಡಿಭಾಗ ಸಂಪೂರ್ಣ ಜಲಾವೃತಗೊಂಡಿದೆ. ಎಡ ಬಿಡದೇ ಮಳೆ ಸುರಿಯುತ್ತಿದ್ದು, ಫ್ಲೈಓವರ್ ಅಡಿ ನಿಂತ ನೀರಿನಿಂದಾಗಿ ವಾಹನ ಸಂಚಾರಕ್ಕೆ ಭಾರೀ ತೊಂದರೆಯುಂಟಾಗಿದೆ. ಪರಿಣಾಮ ರಸ್ತೆ ಉದ್ದಕ್ಕೂ ವಾಹನಗಳು ನಿಲುಗಡೆಯಾಗಿ ಟ್ರಾಫಿಕ್ ಜಾಮ್ ಆಗಿದೆ.

ಮಂಗಳೂರಿನ ಪ್ರಮುಖ ಪ್ರದೇಶವಾಗಿರುವ ಪಂಪ್​ವೆಲ್ ಬೆಂಗಳೂರು, ಕೇರಳ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ಸ್ಥಳವಾಗಿದೆ. ಕೇರಳದಿಂದ ಗೋವಾ, ಮಹಾರಾಷ್ಟ್ರ, ಮಂಗಳೂರಿನಿಂದ ಬೆಂಗಳೂರು ತಲುಪಲು ಈ ರಸ್ತೆಯನ್ನು ಬಳಸಲಾಗುತ್ತದೆ.

ಭಾರಿ ಮಳೆಗೆ ಪಂಪ್​ವೆಲ್​ನ ಪ್ಲೈ ಓವರ್ ಕೆಳಭಾಗದ ರಸ್ತೆ ನೀರಿನಿಂದ ಜಲಾವೃತವಾಗಿದೆ. ಇಲ್ಲಿ ಫ್ಲೈ ಓವರ್ ನಿರ್ಮಾಣದ ಬಳಿಕ ಕೆಳಭಾಗದಲ್ಲಿ ನೀರು ನಿಂತು ಪ್ರತಿ ಬಾರಿಯೂ ಸಮಸ್ಯೆಯಾಗುತ್ತಿದೆ. ಪ್ಲೈ ಓವರ್ ನಿರ್ಮಾಣದ ವೇಳೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಬಿ ಸಿ ರೋಡ್ ಮತ್ತು ಹಂಪನಕಟ್ಟೆ ಮಧ್ಯೆ ಸಂಚರಿಸುವ, ತಲಪಾಡಿ ಮತ್ತು ಹಂಪನಕಟ್ಟೆ ಸಂಪರ್ಕಿಸುವ, ನಂತೂರು ಮತ್ತು ಪಂಪ್ ವೆಲ್ ನಡುವೆ ಮೇಲ್ಸೇತುವೆಯ ಕೆಳಭಾಗದಲ್ಲಿ ಸಂಚರಿಸುವ ವಾಹನ ಸವಾರರು ಪರದಾಟ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಭಾರಿ ಮಳೆಗೆ ಪಂಪ್​ವೆಲ್​ ಜಲಾವೃತ

ದಾವಣಗೆರೆಯಲ್ಲಿ ಭಾರಿ ಮಳೆ, ರಸ್ತೆ ಸಂಚಾರ ಅಸ್ತವ್ಯಸ್ತ: ಇನ್ನೊಂದೆಡೆ ದಾವಣಗೆರೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ದಾವಣಗೆರೆ ನಗರದಲ್ಲಿಂದು ಸುರಿದ ಧಾರಾಕಾರ ಮಳೆಯಿಂದ ಇಡೀ ನಗರ ಜೀವನ ಅಸ್ತವ್ಯಸ್ತಗೊಂಡಿತ್ತು.

ಸತತ ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದ ನಗರದ ಕೆಲ ರಸ್ತೆಗಳು ದ್ವೀಪದಂತಾಗಿದ್ದವು. ಇದಲ್ಲದೇ ಹರಿಹರ, ಚನ್ನಗಿರಿ ಕಡೆಯಲ್ಲೂ ಸಾಕಷ್ಟು ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭರ್ಜರಿಯಾಗಿ ಮಳೆಯಾಗಿರುವುದರಿಂದ ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದು ಸಾಮಾನ್ಯವಾಗಿತ್ತು.‌

ಜೂನ್ ತಿಂಗಳ ಆರಂಭದಲ್ಲೇ ಮಳೆ ಆರಂಭವಾಗ್ಬೇಕಿತ್ತು. ಆದರೆ, ಮಳೆ ಇಲ್ಲದೆ ರೈತರು ಹಾಗು ಜನರು ಬಸವಳಿದಿದ್ದರು. ಮಳೆ ಇಲ್ಲದೆ ಜಿಲ್ಲೆಯ ಭತ್ತ, ಅಡಿಕೆ ಬೆಳೆಗಾರರು ಹಾಗೂ ರೈತರ ಪರಿಸ್ಥಿತಿ ಹೇಳತೀರಾದಾಗಿತ್ತು. ಆದರೆ ಇಂದು ಒಂದು ಗಂಟೆಯ ಕಾಲ ಸುರಿದ ಮಳೆಯಿಂದ ಅಡಿಕೆ ಬೆಳೆಗಾರರು ಹಾಗು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಬಿಟ್ಟುಬಿಡದೆ ಒಂದು ಗಂಟೆಕಾಲ ಸುರಿದ ಮಳೆಯಿಂದ ಉದ್ಯೋಗಿಗಳು, ಶಾಲಾ ಕಾಲೇಜಿನ ಮಕ್ಕಳು ಮನೆ ಸೇರಲು ಪರದಾಡಿದ್ದಾರೆ. ಮಳೆ ಹೀಗೆ ಮುಂದುವರೆದು ಕೆರೆ ಕಟ್ಟೆಗಳು, ಡ್ಯಾಂಗಳು ತುಂಬಿ ಸಮೃದ್ಧಿಯಾಗಿರಲೆಂದು ರೈತರು ಆ ದೇವರಲ್ಲಿ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: Monsoon rain : ಮುಂದಿನ ಐದು ದಿನ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ಹವಾಮಾನ ಇಲಾಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.